ಹೆಚ್ಚಳವಾಯಿತು ಹೊಸ ಅಡಿಕೆ ಧಾರಣೆ ಹೆಚ್ಚಳ,ಕೃಷಿಕನ ಮೊಗದಲ್ಲಿ ಸಂತಸ
ಮಂಗಳೂರು : ಹೊಸ ಅಡಿಕೆ, ಸಿಂಗಲ್ ಚೋಲ್ ಧಾರಣೆ ಏರಿಕೆ ಕಂಡಿದೆ. ಹೊಸ ಅಡಿಕೆ ಧಾರಣೆ ಸದ್ಯದಲ್ಲೇ 450 ರೂ. ದಾಟುವ ಎಲ್ಲ ಸಾಧ್ಯತೆಗಳು ಕಂಡು ಬಂದಿವೆ.
ಗುರುವಾರ ಹೊಸ ಅಡಿಕೆಗೆ ಕೆ.ಜಿ.ಗೆ 10 ರೂ. ಏರಿಕೆಯಾಗಿ 435 ರೂ., ಸಿಂಗಲ್ ಚೋಲ್‌ಗೆ 5 ರೂ. ಏರಿಸಿ 515 ರೂ.ಗೆ ಖರೀದಿಯಾಗಿದೆ.
ಡಬ್ಬಲ್ ಚೋಲ್ ಧಾರಣೆ 525 ರೂ.ಗಳ ಯಥಾಸ್ಥಿತಿಯಲ್ಲಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 440ರಿಂದ 445 ರೂ. ತನಕ ಇತ್ತು. ಸಿಂಗಲ್ ಚೋಲ್ 520 ರೂ. ತನಕ ಖರೀದಿಯಾಗಿದೆ.