ಮಂಗಳೂರು: ಆಟೋ ಚಲಾಯಿಸುತ್ತಿದ್ದಾಗಲೇ ನೇತ್ರಾವತಿ ಸೇತುವೆ ಮೇಲೆ ಚಾಲಕನಿಗೆ ಹೃದಯಾಘಾತವಾಗಿ ಮೃತ್ಯು
ಮಂಗಳೂರು: ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಹಮ್ಮದ್ ಹನೀಪ್ ಮೃತರು. ಇವರು ಮಂಗಳೂರಿನಿಂದ ಕಲ್ಲಾಪಿನ ಗ್ಲೋಬಲ್ ಮಾರ್ಕೆಟ್ ಗೆ ಬರುತ್ತಿರುವಾಗ ನೇತ್ರಾವತಿ ಸೇತುವೆ ಮೇಲೆ ಹೃದಯಾಘಾತವಾಗಿದೆ.
ಇವರು ಜೆಪ್ಪಿನಮೊಗರು ತಲುಪುವಾಗ ಕಣ್ಣು ಮಂಜಾಗಿ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದರು. ಅಲ್ಲಿ ಸಾರ್ವಜನಿಕರು ಅವರನ್ನು ಮೇಲಕ್ಕೆತ್ತಿ ಕಳುಹಿಸಿದ್ದರು. ಅಲ್ಲಿಂದ ಸ್ವಲ್ಪ ಮುಂದೆ ತೆರಳಿದ್ದಾಗಲೇ ಘಟನೆ ನಡೆದಿದೆ.