ಶಬರಿಮಲೆಯಲ್ಲಿ ‘ಇ-ಕಾಣಿಕಾ’ ವ್ಯವಸ್ಥೆ

Share the Article

ಕೇರಳದ ಪ್ರಸಿದ್ಧ ಯಾತ್ರಸ್ಥಳ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥಯಾತ್ರೆ ಆರಂಭಗೊಂಡಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ, ಅಪೆಕ್ಸ್ ದೇಗುಲದ ಸಂಸ್ಥೆಯು ದೇವಸ್ಥಾನದ ಸಂಕೀರ್ಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಲೆಕ್ಟ್ರಾನಿಕ್ ಹುಂಡಿ ಅಂದರೆ ‘ಇ-ಕಾಣಿಕಾ’ ವ್ಯವಸ್ಥೆ ಮಾಡಿದೆ.

ಹಿಂದಿನ ವರ್ಷಗಳಂತೆ, ಈ ವರ್ಷವೂ ಟಿಡಿಬಿಯ ಅಧಿಕೃತ ಬ್ಯಾಂಕರ್‌ಗಳಾದ ಧನಲಕ್ಷ್ಮಿ ಬ್ಯಾಂಕ್‌ನ ಸಹಯೋಗದಲ್ಲಿ ಡಿಜಿಟಲ್ ಪಾವತಿಗೆ ವ್ಯವಸ್ಥೆಗೆ ಮುಂದಾಗಿದೆ.

ಭಕ್ತರು ಗೂಗಲ್ ಪೇ ಮೂಲಕ ತಮ್ಮ ಕಾಣಿಕೆಯನ್ನು ಪಾವತಿ ಮಾಡಬಹುದು ಮತ್ತು ಇದಕ್ಕಾಗಿ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಸನ್ನಿಧಾನಂ, ದೇವಾಲಯದ ಸಂಕೀರ್ಣ ಮತ್ತು ನಿಲಕ್ಕಲ್ ತಪ್ಪಲಿನಲ್ಲಿ ಹಲವಾರು ಸ್ಥಳಗಳಲ್ಲಿ ಇಡಲಾಗಿದೆ. ಒಟ್ಟು ಇದುವರೆಗೆ 22 ವಿವಿಧ ಪ್ರದೇಶಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಇಡಲಾಗಿದೆ.

Leave A Reply