ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್|ಇಂದಿನಿಂದ ಹೆಚ್ಚಳವಾಗಲಿದೆ ಆಟೋ ದರ!!
ಬೆಂಗಳೂರು:ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಬೆಲೆ ಅಧಿಕವಾಗುತ್ತಿದೆ.ಇದೀಗ ಆಟೋಗೆ ಬೇಕಾದ ಇಂಧನದ ಬೆಲೆ ಕೂಡ ಹೆಚ್ಚಳವಾದ್ದರಿಂದ,ಬರೋಬ್ಬರಿ ಒಂಬತ್ತು ವರ್ಷದ ಬಳಿಕ ಆಟೋ ಕನಿಷ್ಠ ಪ್ರಯಾಣ ದರವನ್ನು ಹೆಚ್ಚಳ ಮಾಡಿದೆ.
ಅದರಂತೆ ನೂತನ ಪರಿಷ್ಕರಣೆಯ ಪ್ರಯಾಣ ದರ ಇಂದಿನಿಂದ ಜಾರಿಗೆ ಬರಲಿದ್ದು,ಮೊದಲ ಎರಡು ಕಿಲೋಮೀಟರ್ಗೆ 30 ರೂಪಾಯಿ ನೀಡಬೇಕಾಗಿದ್ದು, ನಂತರ ಪ್ರತಿ ಕಿಲೋ ಮೀಟರ್ಗೆ 15 ರೂ. ದರವನ್ನು ಆಟೋ ಪ್ರಯಾಣಿಕರು ನೀಡಬೇಕಾಗಿದೆ.ಸದ್ಯ ಇದು ಬೆಂಗಳೂರು ನಗರದಲ್ಲಿ ಜಾರಿಗೆ ಬರಲಿದ್ದು,ಹೆಚ್ಚುತ್ತಿರುವ ವಿವಿಧ ಅವಶ್ಯಕ ವಸ್ತುಗಳ ಬೆಲೆ ಏರಿಕೆ ನಡುವೆ ನಾಳೆಯಿಂದ ಆಟೋಕ್ಕೆ ಕೂಡ ಪ್ರಯಾಣಿಕರು ಹೆಚ್ಚಿನ ಹಣವನ್ನು ನೀಡಬೇಕಾಗಿದೆ.
‘ಆಟೋಕ್ಕೆ ಬೇಕಾಗಿರುವ ಇಂದನದ ಬೆಲೆ ಕೂಡ ಹೆಚ್ಚಳವಾಗಿದ್ದು, ಇದಲ್ಲದೇ ಕಳೆದ 9 ವರ್ಷದಿಂದ ಅನೇಕ ಬದಲಾವಣೆಯಾಗಿದ್ದು, ನಮ್ಮ ದರದಲ್ಲಿ ಹೆಚ್ಚಳ ಮಾಡಿಲ್ಲ, ಇದಲ್ಲದೇ ಬೆಲೆ ಏರಿಕೆಗೆ ಅನುಗುಣವಾಗಿ ನಾವು ಕೂಡ ಪ್ರಯಾಣದ ದರವನ್ನು ಹೆಚ್ಚಳಮಾಡಲೇ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಇದು ನಮಗೆ ಅವಶ್ಯಕತೆಯಾಗಿ ಬೇಕಾಗಿದ್ದು, ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಾಗಿದೆ. ದುಬಾರಿ ದುನಿಯಾದಲ್ಲಿ ಬದುಕುವುದು ಸುಲಭವಾಗುತ್ತಿಲ್ಲ, ಸಂಸಾರದ ನೊಗವನ್ನು ಹೊರಲು ಈಗ ಆಟೋದಿಂದ ಬರುತ್ತಿರುವ ಆದಾಯ ಸಾಲುತ್ತಿಲ್ಲ’ ಅಂತ ಆಟೋ ಚಾಲಕರು ಹೇಳುತ್ತಾರೆ.
ಇದರಿಂದಾಗಿ ಈಗ ಬೆಂಗಳೂರು. ಮತ್ತೆ ಎಲ್ಲಾ ಕಡೆಗಳಲ್ಲೂ ಆಟೋ ಚಾರ್ಜ್ ಅಧಿಕವಾಗುವ ಸಾಧ್ಯತೆ ಇದೆ ಎಂದೇ ಹೇಳಬಹುದು!