ವೀಡಿಯೋ ಕಾನ್ಫರೆನ್ಸ್ ನಲ್ಲಿ ಅರೆಬೆತ್ತಲೆಯಾಗಿ ಪ್ರತ್ಯಕ್ಷವಾದ ಉಜಿರೆ ಎಸ್.ಡಿ.ಎಂ.ಸಿಯ ಶ್ರೀಧರ್ ಭಟ್ | ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ವಿಚಾರಣ ಸಂದರ್ಭ ಅರೆಬೆತ್ತಲೆ ಪ್ರದರ್ಶನ

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆಯು ವಿಡಿಯೋ ಕಾನ್ಫರೆನ್ಸ್‌ ಮೂಲಕ ನಿನ್ನೆ ರಾಜ್ಯ ಹೈಕೋರ್ಟ್​​ನಲ್ಲಿ ನಡೆಯಿತು.
ಈ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷವಾದ ಮುಜುಗರದ ಪ್ರಸಂಗವೂ ನಡೆಯಿತು. ಉಜಿರೆ ಎಸ್‌ಡಿಎಂಸಿಯ ಶ್ರೀಧರ್ ಎಂಬಾತ ಹೀಗೆ ಪ್ರತ್ಯಕ್ಷವಾಗಿ ಗಾಬರಿ ಮೂಡಿಸಿದ್ದ !

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷ:
ಅರೆಬೆತ್ತಲೆ ವ್ಯಕ್ತಿ ಹಾಜರಿಗೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಮಹಿಳೆಯಾದ ನಾನು ವಾದಿಸುತ್ತಿರುವಾಗ ಅರೆಬೆತ್ತಲೆ ವ್ಯಕ್ತಿ ಹಾಜರಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅರೆಬೆತ್ತಲೆ ದೇಹ ತೋರಿಸುತ್ತಿದ್ದಾನೆ. ಇದು ಮಹಿಳೆಯಾದ ನನಗೆ ಮುಜುಗರ ತರುವಂತಿದೆ ಎಂದು ವಕೀಲೆ ಇಂದಿರಾ ಕಿಡಿಕಾರಿದರು.

‘ಪರದೆಯ ಮೇಲೆ ಅರೆನಗ್ನ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ವರ್ಚುವಲ್ ವಿಚಾರಣೆಗೆ ಲಾಗಿನ್ ಆಗಿರುವ ವ್ಯಕ್ತಿಯೊಬ್ಬ ಸ್ನಾನ ಮಾಡಿಕೊಂಡು ಬಂದು ಟವೆಲ್‌ನಲ್ಲಿ ಮೈ ಒರೆಸಿಕೊಳ್ಳುತ್ತಾ ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯ ಮೂಡಿ ಬರುತ್ತಿದೆ. ಇದರಿಂದ ಮಹಿಳಾ ವಕೀಲೆಯಾದ ನನಗೆ ಸಾಕಷ್ಟು ಮುಜುಗರ ಉಂಟಾಯಿತು. ಸರಿಯಾಗಿ ವಾದ ಮಂಡಿಸಲು ಸಮಸ್ಯೆಯಾಯಿತು. ಇದು ನ್ಯಾಯಾಂಗ ನಿಂದನೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷ, ನೋಟಿಸ್ ಜಾರಿ:
ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷವಾಗಿದ್ದಕ್ಕೆ ಸುಪ್ರೀಂ ಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವ್ಯಕ್ತಿ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಲು ಮನವಿ ಮಾಡಿದ್ದಾರೆ. ಮಹಿಳೆಯಾದ ನಾನು 20 ನಿಮಿಷ ಅವರ ದೇಹ ನೋಡಿದ್ದೇನೆ. ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಇಂದಿರಾ ಜೈಸಿಂಗ್ ಮನವಿ ಮೇರೆಗೆ ಶ್ರೀಧರ್, ಎಸ್​​ಡಿಎಂಸಿ, ಉಜಿರೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
​​
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ಅಂತಿಮ ವರದಿ ಸಲ್ಲಿಸದಂತೆ ಆದೇಶವಿದೆ. ಆದರೆ ಮಧ್ಯಂತರ ಆದೇಶ ತೆರವಿಗೆ ಎಸ್ಐಟಿ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ SIT ಅರ್ಜಿ ಸಲ್ಲಿಸಿದ‌ ನಂತರ ಈ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮುಂದೂಡಿತು.

Leave A Reply

Your email address will not be published.