ಬಟ್ಟೆ ಒಣಗಿಸಲು ಹೋಗಿ ಆಯ ತಪ್ಪಿ ಐದನೇ ಮಹಡಿಯಿಂದ ಬಿದ್ದ ಮಹಿಳೆ|ಚಿಕಿತ್ಸೆ ಫಲಕರಿಸದೆ ಸಾವು

Share the Article

ಕಾರ್ಕಳ : ಬಟ್ಟೆ ಒಣಗಿಸಲು ಹೋಗಿ ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕು ನಿಟ್ಟೆಯಲ್ಲಿ ಸಂಭವಿಸಿದೆ.

ಕಮಲ ಪ್ರಿಯಾ ಬಿ (48 ವ) ಎಂಬವರು ಮೃತಪಟ್ಟ
ಮಹಿಳೆಯಾಗಿದ್ದಾರೆ.

ಇವರು ಕಳೆದ 10 ವರ್ಷದಿಂದ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಕಾಲೇಜಿನ ವಸತಿ ಗೃಹದ ಎ ಬ್ಲಾಕ್ ನ 5 ನೇ ಮಹಡಿಯಲ್ಲಿ ವಾಸಿಸುತ್ತಿದ್ದರು.ನ.24 ರ ಸಂಜೆ ತಾವು ಇದ್ದ ಮನೆಯ ಬಾಲ್ಕನಿಯಲ್ಲಿ ಸ್ಟೂಲ್ ನ ಮೇಲೆ ನಿಂತು ಬಟ್ಟೆ ಒಣಗಿಸುತ್ತಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು,ಚಿಕಿತ್ಸೆಗೆ ಸ್ಪಂದಿಸದೇ ನ.26 ರಂದು ಮೃತಪಟ್ಟಿದ್ದಾರೆ.ಮೃತರ ಪತಿ ಬಾಲಸುಬ್ರಹ್ಮಣೀ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply