ಪುತ್ತೂರು : ಇಡ್ಯೊಟ್ಟು ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ದಿ ಸಮಿತಿಯಿಂದ ವಿದ್ಯಾಮಾತಾ ಫೌಂಡೇಶನ್ಗೆ ಗೌರವ ಸಮರ್ಪಣೆ
ಪುತ್ತೂರು : ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು ಯೋಜನೆಗಳ ಮೂಲಕ ಸೇವೆ ಸಲ್ಲಿಸುತ್ತಿರುವ ‘ವಿದ್ಯಾಮಾತಾ ಫೌಂಡೇಶನ್’ ಗೆ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯೊಟ್ಟು ಕುರಿಯ ಗ್ರಾಮ ಪುತ್ತೂರು’ ಶಾಲೆಯ ಶಿಕ್ಷಕರು ಹಾಗೂ ಶಾಲಾ ಎಸ್.ಡಿ.ಎಂ.ಸಿ ಯವರು ನ.26 ರಂದು ಇಡ್ಯೊಟ್ಟು ಶಾಲೆಯಲ್ಲಿ ಗೌರವ ಸಮರ್ಪಿಸಿದರು.
ಕೊರೋನಾ ಸಂಕಷ್ಟ ಕಾಲದಲ್ಲಿ ಅತೀ ಬಡ ವರ್ಗದ ವಿದ್ಯಾರ್ಥಿಗಳಿರುವ ಇಡ್ಯೊಟ್ಟು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಶಿಕ್ಷಣಕ್ಕೆ ಸಹಕಾರಿಯಾಗಲು ವಿದ್ಯಾಮಾತಾ ಫೌಂಡೇಶನ್ ವತಿಯಿಂದ ಕೆಡಿಪಿ ಸದಸ್ಯರಾಗಿರುವ ಬಿ.ಎಸ್.ವಿಜಯ್ ರವರ ಮನವಿ ಮೇರೆಗೆ ಆನ್ಲೈನ್ ತರಗತಿಗಳಿಗೆ ಆಂಡ್ರೋಯ್ಡ್ ಫೋನ್ ಇಲ್ಲದೇ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿರುವುದನ್ನು ನೋಡಿ ವಿದ್ಯಾಮಾತಾ ಫೌಂಡೇಶನ್ ವತಿಯಿಂದ ಪ್ರಿಂಟರನ್ನು ಒದಗಿಸಲಾಗಿತ್ತು. ಇದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಿತ್ತು. ಈ ನಿಟ್ಟಿನಲ್ಲಿ ವಿದ್ಯಾಮಾತಾ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಭಾಗ್ಯೇಶ್ ರೈಯವರು ಇಡ್ಯೊಟ್ಟು ಶಾಲೆಗೆ ಭೇಟಿ ನೀಡಿದ ವೇಳೆ ಅವರನ್ನು ಗೌರವಿಸಲಾಯಿತು.
ಶ್ರೀಯುತರು ಮಕ್ಕಳ ಜೊತೆ ಸಂವಾದ ನಡೆಸಿ, ಅವರಿಗೆ ಸಿಹಿತಿಂಡಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಇಡ್ಯೊಟ್ಟು ಶಾಲೆಯ ಪ್ರಭಾರ ಮುಖ್ಯಗುರುಗಳಾದ ದೇವಪ್ಪ ಎಂ., ಸಹಶಿಕ್ಷಕರಾದ ಯಶೋದಾ ಪಿ., ವಿಶಾಲಾಕ್ಷಿ ಕೆ., ಗೌರವ ಶಿಕ್ಷಕರಾದ ರಂಸೀನಾ ಹಾಗೂ ವಿದ್ಯಾಮಾತಾ ಫೌಂಡೇಶನ್ ನ ಸಿಬ್ಬಂದಿಗಳಾದ ಹರ್ಷಿತಾ ಆಚಾರ್ಯ, ಚಂದ್ರಕಾಂತ್ ಹಾಗೂ ವಿಜೇತಾರವರು ಉಪಸ್ಥಿತರಿದ್ದರು.