ರಾತ್ರಿಯಾಗುತ್ತಲೇ ಮನೆಗೆ ಬಂದ ನೆರೆಯ ಯುವಕನ ಜೊತೆ ಮಹಿಳೆಯ ಅನೈತಿಕ ಸಂಬಂಧದ ಶಂಕೆ!!|ಮಹಿಳೆ ಹಾಗೂ ಯುವಕನನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಪತಿರಾಯ ಅಂದರ್

ಮೈಸೂರು:ಅನೈತಿಕ ಸಂಬಂಧದ ಆರೋಪದಲ್ಲಿ ಮಹಿಳೆ ಹಾಗೂ ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ನಡೆದಿದ್ದು, ಘಟನೆಯ ಬಳಿಕ ಮಹಿಳೆ ತನ್ನ ಪತಿ ಹಾಗೂ ಮೈದುನನ ವಿರುದ್ಧ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ಯ ಪತಿಯನ್ನು ಬಂಧಿಸಿದ ಪೊಲೀಸರು ಮೈದುನನಿಗಾಗಿ ಬಲೆಬೀಸಿದ್ದಾರೆ.

ಘಟನೆ ವಿವರ: ಜಿಲ್ಲೆಯ ಹೆಮ್ಮರಗಾಲದ ಮಹಿಳೆಯೊಬ್ಬರು ಗಂಡನಿಂದ ದೂರಾಗಿ ಕೊಡಗಿನಲ್ಲಿ ಕಾಫಿತೋಟವೊಂದರಲ್ಲಿ ಕೆಲಸಕ್ಕಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಮನೆಗೆ ಬಂದ ಮಹಿಳೆಯು ನೆರೆ ಗ್ರಾಮದ ಯುವಕನೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅದರಂತೆ ಆ ದಿನ ರಾತ್ರಿ ಮಹಿಳೆಯ ಮನೆಗೆ ಯುವಕನು ಬಂದಿದ್ದು, ಇದನ್ನು ಗಮನಿಸಿದ ಮಹಿಳೆಯ ಪತಿ ಮನೆಯ ಬಾಗಿಲನ್ನು ಹಾಕಿ ತನ್ನ ತಮ್ಮ ಹಾಗೂ ಮತ್ತಿತರರನ್ನು ಕರೆದಿದ್ದಾನೆ.


Ad Widget

Ad Widget

Ad Widget

ಇದಾದ ಬಳಿಕ ಇಬ್ಬರನ್ನೂ ಮನೆಯ ಪಕ್ಕದಲ್ಲೇ ಇರುವ ಕಂಬವೊಂದಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ. ವಿಷಯ ತಿಳಿದು ಗ್ರಾಮದ ಹಿರಿಯರು ಮಹಿಳೆ ಹಾಗೂ ಯುವಕನನ್ನು ರಕ್ಷಿಸಿದ್ದು ಪ್ರಕರಣ ರಾಜಿಯಲ್ಲಿ ಕೊನೆಕಂಡಿತ್ತು.

ತನ್ನ ಹಾಗೂ ಅಮಾಯಕ ಯುವಕನ ಮೇಲಿನ ಹಲ್ಲೆಯ ವಿರುದ್ಧ ಮಹಿಳೆ ಠಾಣೆಯ ಮೆಟ್ಟಿಲೇರಿದ್ದು, ಸದ್ಯ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ರಾಜ್ಯ ಮಹಿಳಾ ಆಯೋಗವೂ ಜಿಲ್ಲಾ ಪೊಲೀಸ್ ಅಧಿಕ್ಷಕರ ವರದಿಯನ್ನು ಕೇಳಿದೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: