ವಿವಾಹ ನಿಗದಿಯಾಗಿದ್ದ ಗೋಳಿತೊಟ್ಟು ಗ್ರಾ.ಪಂ.ಸದಸ್ಯ ಮಹೇಶ್ ಡೆಬ್ಬೆಲಿ ಜ್ವರದಿಂದ ನಿಧನ

Share the Article

ಕಡಬ : ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ ಡೆಬ್ಬೇಲಿ ನಿವಾಸಿ ಮಹೇಶ್(27ವ.)ರವರು ನ.27ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಮಹೇಶ್‌ರವರಿಗೆ ಕೆಲ ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ನ.26ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಕರೆತಂದಿದ್ದರು. ಬಳಿಕ ರಾತ್ರಿ ವೇಳೆ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ನ.27ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.ಇವರು ಇಲಿಜ್ವರದಿಂದ ಮೃತಪಟ್ಟಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ.

ಮಹೇಶ್‌ರವರು ಗೋಳಿತ್ತೊಟ್ಟು ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರಾಗಿದ್ದರು. ನೆಲ್ಯಾಡಿ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಕಾರ್ಯದರ್ಶಿಯೂ ಆಗಿದ್ದರು. ಅಲ್ಲದೇ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅವರು ಚಿರಪರಿಚಿತರಾಗಿದ್ದರು. ಮೃತ ಮಹೇಶ್‌ರವರಿಗೆ ವಿವಾಹ ನಿಗದಿಯಾಗಿದ್ದು ಮುಂದಿನ ಜನವರಿಯಲ್ಲಿ ಮದುವೆ ನಡೆಯಲಿತ್ತು.

Leave A Reply

Your email address will not be published.