ಬೆಳ್ತಂಗಡಿ:ವಿದ್ಯಾರ್ಥಿನಿ ನಿಲಯದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪತ್ತೆ!

ಬೆಳ್ತಂಗಡಿ :ವಿದ್ಯಾರ್ಥಿನಿ ನಿಲಯದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾಗಿದ್ದು, ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

 

ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂಡಿಗೆರೆ ನಿವಾಸಿ ಕಿಟ್ಟ ಎನ್ ರವರ ಪುತ್ರಿ ಸಿಂಧು ಬೆಳಿಗ್ಗೆ ವಿದ್ಯಾರ್ಥಿಗಳ ಜೊತೆಗೆ ಕಾಲೇಜಿಗೆಂದು ಹೊರಟು ಹೋದವರು, ಕಾಲೇಜಿಗೂ ಹೋಗದೆ ಇತ್ತ ಸಂಜೆ 5.00 ಗಂಟೆಯವರೆಗೆ ಹಾಸ್ಟೆಲ್ ಗೂ ಮರಳಿ ಬಾರದೆ ನಾಪತ್ತೆಯಾಗಿದ್ದಳು.ಈ ಕುರಿತು ಹಾಸ್ಟೆಲ್ ವಾರ್ಡನ್ ಶುಭಾ ನಾಯಕ್ ರವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದೀಗ ಪೊಲೀಸರ ಕಾರ್ಯಾಚರಣೆ ಬಳಿಕ ವಿಧ್ಯಾರ್ಥಿ ಸಿಕ್ಕಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.ಆದರೆ ಆಕೆ ನಾಪತ್ತೆಯಗಲು ಕಾರಣ, ಎಲ್ಲಿ ಹೋಗಿದ್ದಳು ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

Leave A Reply

Your email address will not be published.