ಇನ್ಮುಂದೆ ಎಟಿಎಂ ನಲ್ಲಿ ದೊರೆಯಲಿದೆ ಹಬೆಯಾಡುವ ಇಡ್ಲಿ, ಕಮ್ಮನೆಯ ಸಾಂಬಾರ್, ಚಟ್ನಿ !!
ಬೆಂಗಳೂರು : ಇನ್ನು ಮುಂದೆ ಎಟಿಎಂನಲ್ಲಿ ನಿಮಗೆ ಹಣದ ಜತೆ ಬಿಡಿ ಬಿಸಿ ಬಿಸಿ ಹಬೆಯಾಡುವ ಇಡ್ಲಿಯ ಜತೆ ಕಮ್ಮನೆಯ ರುಚಿಯಾದ ಸಾಂಬಾರ್ ಕೂಡ ಸವಿಯುವ ಸೌಭಾಗ್ಯ. ಇದು ಇಡ್ಲಿ ಇಷ್ಟ ಪಡುವ ಜನರಿಗೆ ಇದೊಂದು ರುಚಿಕರ ಸುದ್ದಿ. ಇನ್ನು ಎಟಿಎಂನಲ್ಲಿ ನಮಗೆ ಹಣ ಸಿಗುವಂತೆ ಇನ್ನು
ಮುಂದೆ ಎಟಿಐ (ಎನಿ ಟೈಮ್ ಇಡ್ಲಿ) ಮೂಲಕ ನಿಮಗೆ ಇಡ್ಲಿ
ದೊರೆಯುತ್ತದೆ.
ಇನ್ಮುಂದೆ ಬೆಳಗ್ಗೆ ಯಾ ಸಂಜೆ ಹೊಟ್ಟೆಯಲ್ಲಿ ಹಸಿವು ಚುರುಗುಟ್ಟಿದರೆ ಸೀದಾ ಎದ್ದು ಹೋಟೆಲ್ ಗೆ ನಡೆಯೋ ಆಗತ್ಯ ಇಲ್ಲ. ಎಟಿಎಂನಲ್ಲಿ ಹಣ ತೆಗೆದು ಎಟಿಎಂನಲ್ಲಿ ಇಡ್ಲಿ ಪಡೆಯಬಹುದು !!
ಈ ನವೀನ ಯಂತ್ರದಲ್ಲಿ ಇಡ್ಲಿ ಬೇಯೋದು ಮಾತ್ರವಲ್ಲ, ಇಡ್ಲಿಯನ್ನು ಪ್ಯಾಕ್ ಮಾಡಿ ಕೂಡಾ ಕೊಡಲಾಗುತ್ತದೆ. ಪ್ಯಾಕಿಂಗ್ ಕೆಲಸವನ್ನು ಕೂಡ ಇಡ್ಲಿ ಮಶೀನ್ ನೆ ನಿರ್ವಹಿಸಲಿದೆ. ‘ಇಡ್ಲಿ ಬೋಟ್’ ಹೆಸರಿನ ಈ ಎರಡು
ಯಂತ್ರದಲ್ಲಿ ಒಂದು ಇಡ್ಲಿಯನ್ನು ಬೇಯಿಸಿದರೆ ಮತ್ತೊಂದರಲ್ಲಿ
ಇಡ್ಲಿ ಚಟ್ಟಿ ಮತ್ತು ಸಾಂಬಾರ್ ದೊರೆಯುತ್ತದೆ.
ಇದೀಗ ಇಡ್ಲಿ ಎಟಿಐ ಸಂಸ್ಥಾಪಕರು ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು, ಅದರ ಮೂಲಕ ಯಾರು ಬೇಕಾದರೂ ಇಡ್ಲಿಗೆ ಆರ್ಡರ್ ಕೊಡಬಹುದು.
ಈ ಇಡ್ಲಿಗೆ ಇನ್ನೂ ಕೂಡಾ ದರ ನಿಗದಿಯಾಗಿಲ್ಲವಾದರೂ ಆದರ ಬೆಲೆ 20 ರಿಂದ 25 ರೂ. ಗೆ ಎರಡು ಇಡ್ಲಿ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಯೋಜನೆ 10 ತಿಂಗಳ ಹಿಂದೆಯೇ ಜಾರಿಗೆ ಬರಬೇಕಾಗಿತ್ತು.
ಕೊರೊನಾ ಕಾರಣದಿಂದಾಗಿ ಇಡ್ಲಿ ಬೇಯಿಸುವುದು ಏಟಿಎಂ ನಲ್ಲಿ ಇಡ್ಲಿ ಬೇಯಿಸುವುದು ತಡವಾಯಿತು ಎಂದಿದ್ದಾರೆ ತಯಾರಕರು ! ಬರುವ 2022 ರ ಎಪ್ರಿಲ್ ಒಳಗೆ ಇಡ್ಲಿ ಯಂತ್ರಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದಾರೆ ಇದರ ಸಂಸ್ಥಾಪಕರು. ಇವುಗಳನ್ನು
ಮಾಲ್ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸುವ
ಯೋಜನೆ ಇದ್ದು, ಇದಕ್ಕೆ ಸುಮಾರು 200 ರಿಂದ 300 ಚದರ ಅಡಿ ಜಾಗದ ಅವಶ್ಯಕತೆ ಇರುತ್ತದೆ.