ಹುಡುಗಿಯ ಬ್ರಾ ಸೈಜ್​, ಸೊಂಟದ ಅಳತೆ ಇಷ್ಟೇ ಇರಬೇಕು ಎಂದು ಮ್ಯಾಟ್ರಿಮೊನಿಯಲ್ ಜಾಹೀರಾತು ಹಾಕಿದ ವರ !

ವಧು ಹುಡುಕುವ ಹುಡುಗರು ಹುಡುಗಿಯ ಬಣ್ಣ, ಎತ್ತರ ವಿದ್ಯಾಭ್ಯಾಸ ಕುಲ ಗೋತ್ರ ಮುಂತಾದುವನ್ನು ಗಮನಿಸುವುದು ಮತ್ತು ಕೇಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮದುವೆಯಾಗುವ ಹುಡುಗಿಯ ಎದೆಗೆ ಮತ್ತು ಸೊಂಟಕ್ಕೆ ಕಣ್ಣು ಹಾಕಿದ್ದಾನೆ.
ವಧು ಬೇಕಾಗಿರುವ ಈ ಹುಡುಗನಿಗೆ, ಹುಡುಗಿಯ ಎತ್ತರ ಇಂತಿಷ್ಟೇ ಇರಬೇಕೆಂದು ಕಂಡೀಷನ್ ಹಾಕುವ ಜತೆಗೇ ಆಕೆಯ
ಬ್ರಾದ ಸೈಜ್, ಸೊಂಟದ ಅಳತೆ ಇಷ್ಟೇ ಇರಬೇಕೆಂದು ಕಂಡೀಷನ್ ಮಡಗಿದ್ದಾನೆ.

ವಧು ವರರನ್ನು ಹುಡುಕಬೇಕು ಅಂದಾಕ್ಷಣ ಮೊದಲು ನೆನಪಾಗುವುದೇ ಮೆಟ್ರಿಮೋನಿಯಲ್. ಮೆಟ್ರೊಮೋನಿಯಲ್ ಮೂಲಕ  ಜನರು ತಮಗೆ ಇಷ್ಟವಾಗುವ ವಧು, ವರರನ್ನು ಹುಡುಕಿಕೊಂಡಿದ್ದಾರೆ. ತಮಗೆ ಇಷ್ಟದ ಹುಡುಗಿ ಅಥವಾ ಇಷ್ಟಪಡುವ ಗುಣ, ವಯಸ್ಸು, ಎತ್ತರ ಹೀಗೆ ತಮಗೆ ಬೇಕಿರುವ ಬೇಡಿಕೆಗಳನ್ನು ಇಡುವುದರ ಮೂಲಕ ಸರಿ ಹೊಂದುವ ವಧು, ವರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ಬಗ್ಗೆ ಆತ ಮೆಟ್ರೊಮೋನಿಯಲ್ ಜಾಹಿರಾತು ನೀಡಿದ್ದು ಅದು ಇದೀಗ ಫುಲ್ ವೈರಲ್ ಆಗಿದ್ದು, ನೆಟ್ಟಿಗರ ಕುತೂಹಲಕ್ಕೆ ಮತ್ತು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಹುಡುಗನು ತನಗೆ ಇಷ್ಟವಾಗುವ ಹುಡುಗಿಯಲ್ಲಿರಬೇಕಾದ ಕೆಲವು ಬೇಡಿಕೆಗಳನ್ನು ಹೇಳಿದ್ದಾನೆ. ಹುಡುಗಿ ತೆಳ್ಳಗೆ, ಬೆಳ್ಳಗೆ ಸುಂದರವಾಗಿರಬೇಕು ಎಂಬ ಆಸೆ ಇರುವುದು ತಪ್ಪೇನಲ್ಲ, ಆದರೆ ಈತನ ಬೇಡಿಕೆಯಲ್ಲಿ ಹುಡುಗಿಯ ಬ್ರಾ ಸೈಜ್​ ಇಂತಿಷ್ಟೇ ಇರಬೇಕು. ಸೊಂಟದ ಅಳತೆ ಮತ್ತು ವಯಸ್ಸು ಆತ ಗೊತ್ತು ಮಾಡಿದ ಹಾಗಿರಬೇಕು. ಆಕೆಯ ಪಾದದ ಅಳತೆ, ಎತ್ತರ  ಎಲ್ಲವೂ ಆತ ಹೇಳಿದಷ್ಟೇ ಇರಬೇಕು. ಹಾಗಿದ್ದರೆ ಮಾತ್ರ ಕ್ವಾಲಿಟಿ ಪಾಸ್ !!

ಈತನ ಬೇಡಿಕೆಗಳನ್ನು ಕೇಳಿದ ಸೋಷಿಯಲ್ ಮೀಡಿಯಾ ಅದೇನು ಹುಡುಗಿ ಎಂಬುದು ಇಂತಿಷ್ಟೇ ಸೈಜಿಗೆ ಹೊಲಿದು ಕೊಡಲು ಅದೇನು ಬಟ್ಟೆಯೇ ಎಂದು ಪ್ರಶ್ನಿಸಿದ್ದಾರೆ. ಆತ ಹೇಳಿದಂತೆ ಅಳತೆ ಸಿಗಲು ಆತ ಬಟ್ಟೆ ಹೊಲಿಯುವ ಟೈಲರ್​ ಏನು? ಎಂದು ಪ್ರತಿಕ್ರಿಯಿಸಿದ್ದಾರೆ. ಆತನ ಮನದನ್ನೆಯ ಹಲವು ಸೈಜುಗಳು ಹೀಗಿರಬೇಕಂತೆ. ಅದನ್ನು.ಆತನ ಬಾಯಲ್ಲೇ ಕೇಳಿದ್ರೆ ಒಳ್ಳೇದು.

“ನಾನು ಮದುವೆ ಆಗಲು ವಧುವನ್ನು ಹುಡುಕುತ್ತಿದ್ದೇನೆ. ಹುಡುಗಿಯ ಎತ್ತರ 5.2 ರಿಂದ 5.6 ಇರಬೇಕು. ಬ್ರಾ ಸೈಜ್ 32ಬಿ ಯಿಂದ 32 ಸಿ ಒಳಗಿರಬೇಕು, ಸೊಂಟದ ಅಳತೆ 12 ರಿಂದ 16 ರೊಳಗಿರಬೇಕು, ಹುಡುಗಿ 18 ರಿಂದ 26ರ ವಯಸ್ಸಿನೊಳಗಿನವಳಾಗಿರಬೇಕು” ಎಂದು ಹುಡುಗ ಬರೆದುಕೊಂಡಿದ್ದಾನೆ.
ಇಷ್ಟೇ ಅಲ್ಲದೇ, ಹುಡುಗಿ ನ್ಯಾಚುರಲ್ ಆಗಿರಬೇಕು, ಪಾದಗಳು ಬೆಳ್ಳಗಿರಬೇಕು, ಕ್ಯಾಶುವಲ್ ಆಗಿ ಶೇ 80ರಷ್ಟು ಹಾಗೂ ಫಾರ್ಮಲ್ ಆಗಿ ಶೇ 20ರಷ್ಟು ಉಡುಪು ಧರಿಸಬೇಕು ಎಂದು ಪರ್ಸೆಂಟೇಜ್ ವಾರು ಲೆಕ್ಕ ಕೂಡ ಕೇಳಿದ್ದಾನೆ. ಅಲ್ಲದೆ ಕುಟುಂಬದವರೊಡನೆ ಹೊಂದಿಕೊಳ್ಳಬೇಕು, ನಾಯಿಯನ್ನು ಪ್ರೀತಿಸಬೇಕು ಎಂದಿದ್ದಾನೆ.

ಕೌತುಕದ ವಿಷಯವೇನೆಂದರೆ, ಆಕೆ  ಬೆಡ್​ರೂಂನಲ್ಲಿ ‘ಅದಕ್ಕೆ’ ಮೊದಲು ಸಿಂಗಾರಗೊಳ್ಳಬೇಕು ಎಂದು ತನ್ನ ರಸ ಗಳಿಗೆಯ ಬಯಕೆ ಬಿಚ್ಚಿಟ್ಟಿದ್ದಾನೆ. ಅಲ್ಲದೆ ಸಿನಿಮಾ, ಟ್ರಿಪ್ ಹೋಗುವುದು ಇವೆಲ್ಲವನ್ನು ಇಷ್ಟಪಡಬೇಕು, ಮಕ್ಕಳು ಬೇಡ ಹೀಗೆ ಒಂದಲ್ಲಾ ಎರಡಲ್ಲಾ ಹತ್ತು ಹಲವು ಬೇಡಿಕೆಗಳನ್ನು ಹೇಳಿದ್ದಾನೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ವ್ಯಕ್ತಿಯ ವಿರುದ್ಧ ನೆಟ್ಟಿಗರು ತಿರಸ್ಕಾರ ಹೊರಹಾಕಿದ್ದಾರೆ. ವ್ಯಕ್ತಿಯ ಜಾಹಿರಾತು ಪ್ರಕಟಿಸಿದ ಮೆಟ್ರೊಮೋನಿಯಲ್, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಮೆಟ್ರೊಮೊನಿಯಲ್​ನಿಂದ ಆತನನ್ನು ಬ್ಲಾಕ್ ಮಾಡಿದೆ. ಈ ಜಾಹಿರಾತಿನ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಲ್ಲಿದೆ.

https://twitter.com/ThatNaimish/status/1461601488808022016/photo/1?ref_src=twsrc%5Etfw%7Ctwcamp%5Etweetembed%7Ctwterm%5E1461601488808022016%7Ctwgr%5E%7Ctwcon%5Es1_&ref_url=https%3A%2F%2Fd-10521226021645881205.ampproject.net%2F2111060251009%2Fframe.html

Leave A Reply

Your email address will not be published.