ದೋಸೆ ಪ್ರಿಯರ ಜೊತೆ ತಯಾರಕರಿಗೂ ಶುಭ ಸುದ್ದಿ | ಅದೆಷ್ಟೇ ಪ್ರಯತ್ನಿಸಿದರೂ ಯಾವುದೋ ದೇಶದ ಮ್ಯಾಪ್ ಆಕೃತಿಯ ದೋಸೆ ನೋಡಿ ವ್ಯಥೆ ಪಡುತ್ತಿದ್ದ ಗೃಹಿಣಿಯರಿಗಾಗಿ ಬಂದಿದೆ ‘ದೋಸೆ ಮೇಕರ್’ !!

ದಕ್ಷಿಣ ಭಾರತದ ಭಕ್ಷ್ಯಗಳು ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ ಬೇರೆ. ಇಲ್ಲಿನ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ತುಂಬಾನೇ ರುಚಿಕರವಾಗಿರುತ್ತದೆ. ಇಲ್ಲಿನ ತಿಂಡಿಗಳಲ್ಲಿ ಪ್ರಮುಖವಾದದ್ದು ಇಡ್ಲಿ ಹಾಗೂ ದೋಸೆ.

 

ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿ ಆ ಪರಿಪೂರ್ಣವಾದ, ದುಂಡಗಿನ ದೋಸೆ ಪಡೆಯಲು ಹೆಣಗಾಡುತ್ತಾರೆ. ನಾವು ಮಾಡುವ ದೋಸೆ ಯಾವುದೋ ದೇಶದ ಮ್ಯಾಪ್‌ ರೀತಿ ಆಗಿರುತ್ತದೆ ಎಂದು ನಮಗೆ ನಾವೇ ಆಡಿಕೊಳ್ಳುತ್ತಿರುತ್ತೇವೆ ಅಥವಾ ಬೇರೆಯವರನ್ನು ಹೀಯಾಳಿಸುತ್ತಿರುತ್ತೇವೆ. ಹಾಗಾಗಿ ದೋಷರಹಿತ ವೃತ್ತಾಕಾರದ ರೀತಿಯಲ್ಲಿ ಪ್ಯಾನ್ ಮೇಲೆ ದೋಸೆ ಹಿಟ್ಟನ್ನು ಹರಡಲು ಸಾಧನ ಇದ್ದರೆ ಹೇಗೆ ಅಂತೀರಾ..? ಇನ್ಮುಂದೆ ಅದೂ ಕೂಡ ಸಾಧ್ಯವಿದೆ.

ಹೌದು, ಈಗ ಸುಲಭವಾಗಿ ದೋಸೆ ಮಾಡಲು ಸಹಾಯ ಮಾಡುವ ಸಾಧನವೊಂದು ಬಂದಿದೆ. ಜನಪ್ರಿಯ ಆಹಾರ ಉತ್ಪನ್ನಗಳ ಕಂಪನಿಯು ಇತ್ತೀಚೆಗೆ ತಾವು ‘’ದೋಸೆ ತಯಾರಕ’’ದೊಂದಿಗೆ ಹೊರಬರುತ್ತಿರುವುದಾಗಿ ಘೋಷಿಸಿತು. ಇದು ದೋಸೆ ಪ್ರಿಯರಿಗೆ ಮನೆಯಲ್ಲಿ ಪರಿಪೂರ್ಣವಾದ, ದುಂಡಗಿನ ದೋಸೆಗಳನ್ನು ಮಾಡಲು ಸಹಾಯ ಮಾಡುವ ನಾವೀನ್ಯತೆಯಾಗಿದೆ.

ಈ ವೈರಲ್‌ ವೀಡಿಯೋ ಸಾಧನದ ಡೆಮೋವನ್ನು ತೋರಿಸುತ್ತದೆ. ಅದು ಮೇಲ್ಭಾಗದಲ್ಲಿ ತಿರುಗುವ ಯಂತ್ರ ಅಥವಾ ರೊಟೇಟರ್‌ ಅನ್ನು ಹೊಂದಿರುವ ಮುಚ್ಚಳವನ್ನು ಒಳಗೊಂಡಿರುತ್ತದೆ. ಒಂದು ಬಿಸಿಯಾದ ಬಾಣಲೆಯ ಮೇಲೆ ಸೌಟಿನ ಮೂಲಕ ದೋಸೆ ಹಿಟ್ಟನ್ನು ಸುರಿಯಿರಿ. ನಂತರ ಅದನ್ನು “ದೋಸಾ ತಯಾರಕ” ದಿಂದ ಮುಚ್ಚಿ ಮತ್ತು ಲೋಹದ ಹಿಡಿಕೆಯನ್ನು ಮೇಲಕ್ಕೆ ತಿರುಗಿಸಿದರೆ ಅದು ಕೆಳಗಿರುವ ದೋಸೆ ಹಿಟ್ಟನ್ನು ವೃತ್ತಾಕಾರವಾಗಿ ಹರಡುತ್ತದೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅನೇಕ ಜನರು ಈ ಸಾಧನವನ್ನು ಟ್ರೈ ಮಾಡಲು ಉತ್ಸುಕರಾಗಿದ್ದಾರೆ.

ID ಕಂಪನಿಯ ಸಿಇಒ ಮುಸ್ತಫಾ ಪಿ. ಲಿಂಕ್ಟ್‌ಇನ್‌ನಲ್ಲಿ ಮೊದಲು ಇದನ್ನು ಶೇರ್‌ ಮಾಡಿಕೊಂಡಿದ್ದರು. ನಂತರ ಇತ್ತೀಚೆಗೆ ಕಾರ್ತಿಕ್‌ ಎನ್ನುವವರು ಇದನ್ನು ಟ್ವಿಟ್ಟರ್‌ಗೆ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಅಲ್ಲದೆ, ನೆಟ್ಟಿಗರು ಇದಕ್ಕೆ ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನೂರಾರು ಟ್ವೀಟಿಗರು ರೀಟ್ವೀಟ್‌ ಮಾಡಿಕೊಂಡಿದ್ದರೆ, ಇನ್ನು ನೂರಾರು ನೆಟ್ಟಿಗರು ಕ್ವೋಟ್‌ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಸುಮಾರು 800 ಮಂದಿ ಈ ದೋಸಾ ಮೇಕರ್ ವೀಡಿಯೋಗೆ ಲೈಕ್‌ ಒತ್ತಿದ್ದಾರೆ.

Leave A Reply

Your email address will not be published.