ಸಿಂಹವಿದ್ದ ಪ್ರದೇಶಕ್ಕೆ ನುಗ್ಗಿದ ವ್ಯಕ್ತಿ | ಮುಂದೇನಾಯ್ತು ಗೊತ್ತಾ? ವಿಡಿಯೋ ನೋಡಿ !
ಹೈದರಾಬಾದ್: ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಆಫ್ರಿಕನ್ ಸಿಂಹವಿದ್ದ ಆವರಣಕ್ಕೆ ವ್ಯಕ್ತಿಯೊಬ್ಬ ಹೊಕ್ಕಿದ್ದಾನೆ. ಅಲ್ಲಿ ಅಲೆದಾಡುತ್ತಿದ್ದ 31 ವರ್ಷದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನ ಸಿಬ್ಬಂದಿ ರಕ್ಷಿಸಿದ್ದಾರೆ.
ರಕ್ಷಣೆ ಮಾಡಿದ ನಂತರ ಮೃಗಾಲಯದ ಅಧಿಕಾರಿಗಳು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿ, ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ವ್ಯಕ್ತಿಯನ್ನು ಜಿ ಸಾಯಿಕುಮಾರ್ ಎಂದು ಗುರುತಿಸಲಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿಂಹವಿದ್ದ ಆವರಣಕ್ಕೆ ವ್ಯಕ್ತಿ ಎಂಟ್ರಿ ನೀಡಿದ್ದಾನೆ. ನಂತರ ವ್ಯಕ್ತಿಯು ಬಂಡೆಯ ಮೇಲೆ ಕುಳಿತುಕೊಂಡಿದ್ದಾನೆ, ಆಗ ಸಿಂಹ ಆತನಿಗೆ ಎದುರಾಗಿದೆ. ಆ ಸಿಂಹ ಆತನನ್ನು ದಿಟ್ಟಿಸಿ ನೋಡಿದೆ. ಜನರು ಆ ವ್ಯಕ್ತಿಗೆ ಕೂಗುತ್ತಾ, ಜಾಗರೂಕರಾಗಿರಿ ಎಂದು ಹೇಳುವುದು ಮತ್ತು ಸಹಾಯಕ್ಕಾಗಿ ಕರೆ ಮಾಡುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
ನೆಹರು ಝೂಲಾಜಿಕಲ್ ಪಾರ್ಕ್ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಜಿ ಸಾಯಿಕುಮಾರ್ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸಿಂಹದ ಆವರಣದೊಳಗೆ ಹೋಗಿದ್ದ ಮತ್ತು ಬಂಡೆಗಳ ಮೇಲೆ ನಡೆಯುತ್ತಿದ್ದ. ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಸಂಪೂರ್ಣವಾಗಿ ನಿಷೇಧಿತ ಪ್ರದೇಶವಾಗಿರುವ ಪ್ರದರ್ಶಿತ ಆವರಣದಲ್ಲಿ ಸಿಂಹಗಳನ್ನು ಬಿಡಲಾಗುತ್ತದೆ. ವಿಷಯ ಗಮನಕ್ಕೆ ಬಂದ ಕೂಡಲೇ ಭೂ ಅಧಿಕಾರಿಗಳು ಧಾವಿಸಿ ಬಂದು ವ್ಯಕ್ತಿಯನ್ನು ರಕ್ಷಿಸಿ ಮೃಗಾಲಯದ ಸಿಬ್ಬಂದಿ ಹಿಡಿದು ಬಹದ್ದೂರ್‌ಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅದೃಷ್ಟವಶಾತ್ ಸಿಂಹದ ಬಾಯಿಂದ ಸಾವನ್ನು ಎದುರಾ ಬದುರು ನಿಂತು ಎದುರಿಸಿ ಬಂದಿದ್ದಾನೆ ಆತ. ಹಾಗೆ ಸಿಂಹದ ಬೋನು ಪ್ರವೇಶಿಸಿದವನು ಮತಿಭ್ರಮಣೆ ಗೊಂಡವನು ಎನ್ನಲಾಗಿದೆ.