ಮನೆಯಿಂದ ಮಟನ್ ಮಾಂಸ ಹೊತ್ತೊಯ್ದ ಬೀದಿ ನಾಯಿಯನ್ನು ಅಮಾನವೀಯವಾಗಿ ಹೊಡೆದು ಕೊಂದ ವ್ಯಕ್ತಿ !!

Share the Article

ಬೀದಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಅಮಾನವೀಯ ಘಟನೆ ಇಂದೋರ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿ ಭಾನುವಾರ ರಾತ್ರಿ ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್(40) ಎಂಬುವರ ಮನೆಗೆ ನುಗ್ಗಿ ಮಟನ್ ಮಾಂಸದ ಚೀಲವನ್ನು ಬಾಯಿಗೆ ತುರುಕಿಕೊಂಡು ಅಲ್ಲಿಂದ ಪರಾರಿಯಾಗಿತ್ತು. ಇದರಿಂದ ಆಕ್ರೋಶಗೊಂಡ ಜಗದೀಶ್ ಹಿಂಬಾಲಿಸಿಕೊಂಡು ಬಂದು ನಾಯಿ ಸಾಯುವವರೆಗೂ ಕೋಲಿನಿಂದ ನಿರ್ದಯವಾಗಿ ಥಳಿಸಿದ್ದಾನೆ.

ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಚೌಹಾಣ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

Leave A Reply