ಮುರುಡೇಶ್ವರ : ವಿಹಾರಕ್ಕೆಂದು ಬಂದ ಕನಕಪುರದ ಯುವಕರು,ಓರ್ವ ಸಮುದ್ರ ಪಾಲು,ಇನ್ನೊಬ್ಬ ಗಂಭೀರ

Share the Article

ಕಾರವಾರ : ಕನಕಪುರದಿಂದ 10 ಜನ ಯುವಕರು ಟೆಂಪೋ ಟ್ರಾಕ್ಸ್ ಮಾಡಿಕೊಂಡು ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಮುರುಡೇಶ್ವರ ದೇವಸ್ಥಾನದಿಂದ 1 ಕಿ.ಮೀ ದೂರದಲ್ಲಿರುವ ತೂದಳ್ಳಿಯ ಸಮುದ್ರದಲ್ಲಿ ಈಜುತ್ತಿದ್ದಾಗ ಅಲೆಯ ಹೊಡೆತಕ್ಕೆ ಈರ್ವರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಓರ್ವನನ್ನು ರಕ್ಷಣೆ ಮಾಡಲಾಗಿದೆ.

ಮೃತಪಟ್ಟವರನ್ನು ರಘುನಂದನ (17) ಕನಕಪುರ ಎಂದು ಗುರುತಿಸಲಾಗಿದೆ. ಇನ್ನೊರ್ವ ಪ್ರವಾಸಿಗ ಬಸವರಾಜು(21) ಎನ್ನುವವರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

ರಘುನಂದನ್ ಮಾತ್ರ ಅಲೆಯಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದು, ಕೆಲ ತಾಸುಗಳ ಬಳಿಕ ರಘುನಂದನ್ ಮೃತದೇಹ ಪತ್ತೆಯಾಗಿದೆ. ರಕ್ಷಣೆ ಮಾಡಿದ ಬಸವರಾಜ್ ಗೆ ಪ್ರಥಮ ಚಿಕಿತ್ಸೆ ನೀಡಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.

ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.

Leave A Reply