ಕಾರ್ತಿಕ ಮಾಸದ ಸಂಕಷ್ಟ ಚತುರ್ಥಿಯ ಮಹತ್ವ- ಪೂಜಾ ವಿಧಿ ವಿಧಾನಗಳು.
ಗಣೇಶನ ಆರಾಧನೆಗೆ ಸಂಕಷ್ಟ ಚತುರ್ಥಿ ವಿಶೇಷ ದಿನ. ಪ್ರತಿ ತಿಂಗಳ ಹುಣ್ಣಿಮೆಯ ಅಂದರೆ ಕೃಷ್ಣ ಪಕ್ಷದ ನಾಲ್ಕನೇ ದಿನವೇ ಈ ಸಂಕಷ್ಟ ಚತುರ್ಥಿ ಬರುತ್ತದೆ.
ಯಾವುದೇ ಶುಭ ಸಮಾರಂಭದ ಪೂಜೆ ಇರಲಿ ಮೊದಲ ಆದ್ಯತೆ ಗಣೇಶನಿಗೆ ಗಣೇಶ ಎಲ್ಲಾ ಅಡೆತಡೆಗಳು ಮತ್ತು ವಿಘ್ನ ವಿನಾಶಕ ಎಂದು ಪರಿಗಣಿಸಲಾಗಿದೆ. ಗಣಪತಿಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ಮತ್ತು ತೊಂದರೆಗಳು ದೂರವಾಗುವುದರ ಜೊತೆಗೆ ಎಲ್ಲಾ ಮಂಗಳಕರ ಪ್ರಯೋಜನ ಆಗಲಿದೆ. ಅದರಲ್ಲೂ ಪ್ರತಿ ತಿಂಗಳು ಬರುವ ಗಣೇಶ ಚತುರ್ಥಿಯಂದು ಪೂಜಿಸಿದರೆ, ವಿಘ್ನ ವಿನಾಶಕನ ಕರುಣೆ ಸಿಗಲಿದೆ ಎಂಬ ಪ್ರತೀತಿ ಇದೆ. ಗಣೇಶನ ಆರಾಧನೆಗೆ ಸಂಕಷ್ಟ ಚತುರ್ಥಿ ವಿಶೇಷ ದಿನ.
ಪ್ರತಿ ತಿಂಗಳ ಹುಣ್ಣಿಮೆಯ ಅಂದರೆ ಕೃಷ್ಣ ಪಕ್ಷದ ನಾಲ್ಕನೇ ದಿನವೇ ಈ ಸಂಕಷ್ಟ ಚತುರ್ಥಿ ಬರುತ್ತದೆ. ಇಂದು ಉಪವಾಸ ವ್ರತ ಮಾಡಿ ಈ ಸಂಕಷ್ಟ ಚತುರ್ಥಿ ಆಚರಿಸುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತದೆ.ಗಣೇಶ ಪೂಜೆಯ ಪೂಜಾ ವಿಧಿ ವಿಧಾನಕಾರ್ತಿಕ ಮಾಸದ ಸಂಕಷ್ಟ ಚತುರ್ಥಿಯ ದಿನದಂದು ಮೊದಲನೆಯದಾಗಿ, ಸ್ನಾನ ಇತ್ಯಾದಿಗಳ ಆದ ಬಳಿಕ ಉಪವಾಸದ ಪ್ರತಿಜ್ಞೆ ಮಾಡಬೇಕು. ಇದರ ನಂತರ, ಒಂದು ಕೆಂಪು ಅಥವಾ ಹಳದಿ ಬಟ್ಟೆಯ ಮೇಲೆ ಗಣೇಶನ ವಿಗ್ರಹವನ್ನು ಸ್ಥಾಪಿಸಬೇಕು ವಿಗ್ರಹಕ್ಕೆ ನಂತರ, ಧೂಪ, ದೀಪ, ಅಕ್ಷತೆ ಹಾಕುವ ಮೂಲಕ ಗಣೇಶನನ್ನು ಆವಾಹಿಸ ಬೇಕು. ಬಳಿಕ ದೇವರಿಗೆ ಹೂವು, ಹಣ್ಣು, ನೈವೇದ್ಯ ನೀಡಬೇಕು. ಅದರಲ್ಲಿ ಮೋದಕ ಅಥವಾ ಲಡ್ಡುಗಳನ್ನು ಅರ್ಪಿಸಿ. ಪೂಜೆಯಲ್ಲಿ ಗಣೇಶನಿಗೆ ದುರ್ವಾ ಅರ್ಪಿಸಿ. ಇದರ ನಂತರ, ಗಣೇಶರ ಮಂತ್ರಗಳನ್ನು ಪಠಿಸಬೇಕು ಮತ್ತು ಪೂಜೆಯನ್ನು ಗಣೇಶ ಆರತಿ ಹಾಡುವ ಮೂಲಕ ಕೊನೆಗೊಳಿಸಬೇಕು.
ರಾತ್ರಿ ಚಂದ್ರ ದರ್ಶನದ ಬಳಿಕ ವ್ರತ ಸಂಪನ್ನಗೊಳಿಸಿ, ಗಣೇಶನ ಪೂಜಿಸಿ ಆಹಾರ ಸೇವಿಸಬೇಕು.ಗರಿಕೆ ಅರ್ಪಿಸಿಗಣೇಶನಿಗೆ ಗರಿಕೆಗಳು ಎಂದರೆ ಬಲು ಪ್ರೀತಿ. ಈ ಹಿನ್ನಲೆ 27 ಗರಿಕೆಗಳನ್ನು ಗಣೇಶನಿಗೆ ಅರ್ಪಿಸಿ, ಮನೋಬಲ ಈಡೇರಿಕೆಗೆ ಪ್ರಾಪ್ತಿಸಿದರೆ ಒಳಿತು. ಕಾರ್ತಿಕ ಮಾಸದಲ್ಲಿ ಬರುವ ಈ ಚೌತಿಯಂದು ಗಣೇಶನನ್ನು ಪ್ರತಿಷ್ಟಾಪಿಸಿ ಆಚರಿಸುವ ಪ್ರತೀತಿ ಕೂಡ ಇದೆ .ವಿನಾಯಕನ ಮಂತ್ರ ಜಪಿಸಿವಕ್ರತುಂಡ ಸಂಕಷ್ಟ ಚತುರ್ಥಿಯ ದಿನ ಗಣೇಶನ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಜೊತೆಗೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ವಿವಿಧ ಹೆಸರುಗಳಿಂದ ಕರೆಯುವ ಗಣೇಶನ 21 ಹೆಸರುಗಳನ್ನು ಜಪಿಸಬೇಕು.
ಸಂಕಷ್ಟ ಚತುರ್ಥಿಯ ಮಹತ್ವ
ಸಂಕಷ್ಟಿ ಎಂದರೆ ಸಂಕಷ್ಟದ ಸಮಯದಲ್ಲಿ ಮುಕ್ತಿ ಪಡೆಯುವುದು ಎಂದು ಅರ್ಥ, ಆದ್ದರಿಂದ, ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಗಣೇಶನನ್ನು ಪೂಜಿಸಲಾಗುತ್ತದೆ. ಈ ಉಪವಾಸವನ್ನು ಆಚರಿಸುವುದರಿಂದ ಒಬ್ಬರ ಜೀವನದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.ಗಣೇಶನ ಆರಾಧನೆಯಿಂದ ಭಕ್ತರಿಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತದೆ. ಭಾರತದ ಉತ್ತರ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಇದನ್ನು ಆಚರಿಸಲಾಗುತ್ತದೆ ಏಕೆಂದರೆ ಉಪವಾಸವು ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ನಂಬಲಾಗಿದೆ…