ಮದ್ಯದ ಮೇಲಿನ ಶೇ.50ರಷ್ಟು ಅಬಕಾರಿ ಸುಂಕ ಕಡಿತ, ಇನ್ನು ಇಲ್ಲಿ ಮದ್ಯ ಅಗ್ಗದ ಬೆಲೆಯಲ್ಲಿ
ಮಹಾರಾಷ್ಟ್ರ ಸರ್ಕಾರ ಆಮದು ಮಾಡಿಕೊಳ್ಳುವ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.50ರಷ್ಟು ಕಡಿತಗೊಳಿಸಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಮದ್ಯ ಅಗ್ಗವಾಗಲಿದೆ.
ಅಬಕಾರಿ ಸುಂಕದಲ್ಲಿನ ಕಡಿತವು ರಮ್, ಬ್ರಾಂಡಿ, ವೋಡ್ಕಾ ಮತ್ತು ಜಿನ್ಗಳಿಗೆ ಅನ್ವಯಿಸಿದ್ದು, ಗ್ರಾಹಕರು 1 ಲೀಟರ್ ಮದ್ಯವನ್ನು ಖರೀದಿಸಿದರೆ, 15 ರೂ. ಸ್ಥಿರ ಅಬಕಾರಿ ಸುಂಕವನ್ನು ಪಾವತಿಸಬೇಕಾಗುತ್ತದೆ.
ಈವರೆಗೆ ಆಮದು ಮಾಡಿಕೊಳ್ಳುವ ಸ್ಕಾಚ್ ಮಾರಾಟದಿಂದ ವಾರ್ಷಿಕವಾಗಿ 100 ಕೋಟಿ ರೂ. ಆದಾಯ ಗಳಿಸಿತ್ತಿತ್ತು. ಈಗ ಸುಂಕ ಇಳಿಕೆಯಿಂದ ಒಂದು ಲಕ್ಷ ಬಾಟಲಿಗಳಿಂದ 2.5 ಲಕ್ಷ ಬಾಟಲಿಗಳಿಗೆ ಮಾರಾಟವಾಗುವ ನಿರೀಕ್ಷೆ ಇದೆ. ಹೀಗಾಗಿ ಆದಾಯ 250 ಕೋಟಿರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.