ಚಡ್ಡಿ ಹಕ್ಕೊಂಡವರಿಗೆ ಇನ್ಮುಂದೆ SBI ಬ್ಯಾಂಕ್ ಒಳಗೆ ಹೋಗಲು ಅನುಮತಿ ಇಲ್ಲ !! |ಹೀಗೊಂದು ರೂಲ್ಸ್ ತಂದಿದೆ ಸಾರ್ವಜನಿಕ ವಲಯದ ದೈತ್ಯ ಬ್ಯಾಂಕ್ !
ಆಫೀಸ್ ಗೆ ಹೋಗುವಾಗ,ಸ್ಕೂಲ್ ಹೋಗುವಾಗ ನಾವು ಡ್ರೆಸ್ ಕೋಡ್ ಅನುಸರಿಸುವುದು ಸಾಮಾನ್ಯ. ಆದರೆ ಬ್ಯಾಂಕ್ ಗ್ರಾಹಕರಿಗೆ ಇಲ್ಲಿವರೆಗೂ ಬಾರದ ರೂಲ್ಸ್ ಇನ್ನು ಬರುವುದೇ!? ಚಡ್ಡಿ ಹಾಕೊಂಡು ಹೋದ ಗ್ರಾಹಕನನ್ನು ತಡೆದ ಬ್ಯಾಂಕ್ ಸಿಬ್ಬಂದಿ ಇನ್ನು ಪಂಚೆ ಹಾಕಿಕೊಂಡು ಹೋದರೆ??
ಹೌದು.ಇತ್ತೀಚೆಗೆ ಗ್ರಾಹಕ ಚಡ್ಡಿ ಹಾಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗೆ ಪ್ರವೇಶಿಸಿದ್ದ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಜಗಳಕ್ಕಿಳಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕ ಟ್ವಿಟ್ಟರ್ ನಲ್ಲಿ ತನಗಾದ ಅವಮಾನವನ್ನು ಪ್ರಶ್ನಿಸಿ ಪೋಸ್ಟ್ ಮಾಡಿದ್ದಕ್ಕೆ ಎಸ್ ಬಿಐ ಪ್ರತಿಕ್ರಿಯಿಸಿದೆ.
‘ಬ್ಯಾಂಕ್ ಒಳಗೆ ಪ್ರವೇಶಿಸಲು ಶಾರ್ಟ್ಸ್ ಯೋಗ್ಯವಲ್ಲ, ಪ್ಯಾಂಟ್ ಧರಿಸಿ ನಂತರ ನೀವು ಬನ್ನಿ ‘ಎಂದು ಎಸ್‍ಬಿಐ ಸಿಬ್ಬಂದಿ ಗ್ರಾಹಕನ ಬಳಿ ಜಗಳವಾಡಿ ಅಲ್ಲಿಂದ ಕಳುಹಿಸಿದ್ದು,ಈ ಹಿನ್ನೆಲೆ ಕೋಪಕೊಂಡ ಕೋಲ್ಕತ್ತಾದದ ಗ್ರಾಹಕನಾದ ಆಶಿಶ್ ಟ್ವಿಟ್ಟರ್ ನಲ್ಲಿ ಎಸ್‍ಬಿಐ ಅನ್ನು ಟ್ಯಾಗ್ ಮಾಡಿದ್ದು, ಬ್ಯಾಂಕ್‍ಗೆ ಭೇಟಿ ನೀಡಲು ಡ್ರೆಸ್ ಕೋಡ್ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಟ್ವೀಟ್ ನಲ್ಲಿ ನಡೆದ ಘಟನೆಯ ಬಗ್ಗೆ ವಿವರವಾಗಿ ಬರೆದ ಆಶಿಶ್, ಡ್ರೆಸ್ ಕೋಡ್ ವಿಚಾರದಲ್ಲಿ ನನಗೂ ಮತ್ತೆ ಬ್ಯಾಂಕ್ ಸಿಬ್ಬಂದಿಗೂ ವಾಗ್ವಾದ ನಡೆಯಿತು. ಈ ವೇಳೆ ನಾನು ನನ್ನ ಖಾತೆಯನ್ನು ಮುಚ್ಚಲು ಬ್ಯಾಂಕ್‍ಗೆ ಹೋಗಿದ್ದೆ. ನಾನು ಹೋಗಿ ಇನ್ನೂ ಯಾವುದೇ ರೀತಿ ಅಲ್ಲಿ ಮಾತು ಸಹ ಹಾಡಿರಲಿಲ್ಲ. ಶಾಖೆಯನ್ನು ಪ್ರವೇಶಿಸಿದ ತಕ್ಷಣ, ನನ್ನನ್ನು ಶಾಟ್ರ್ಸ್ ಧರಿಸಿದ್ದಿರಾ, ಪ್ಯಾಂಟ್‍ನಲ್ಲಿ ಬನ್ನಿ ಎಂದು ಸಿಬ್ಬಂದಿ ಹೇಳಿದನು. ನಾನು ಈ ನಿಯಮವನ್ನು ಎಲ್ಲಿ ಬರೆದಿಲ್ಲ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದೆ. ಆದರೆ ಆತ ನನ್ನ ಬಳಿ ಜಗಳವಾಡಲು ಪ್ರಾರಂಭಿಸಿದ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಟ್ವೀಟ್ ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಬ್ಯಾಂಕ್‍ನ ಇತರ ಶಾಖೆಗಳಲ್ಲಿ ತಮಗೆ ಆದ ಇದೇ ರೀತಿಯ ಘಟನೆಯನ್ನು ಹಂಚಿಕೊಂಡಿದ್ದಾರೆ.ಚರ್ಚೆ ವಗ್ವಾದ ನಡೆದ ಬಳಿಕ ಆಶಿಶ್ ಅವರ ಟ್ವೀಟ್‍ಗೆ ಎಸ್‍ಬಿಐ ಪ್ರತಿಕ್ರಿಯಿಸಿದ್ದಾರೆ.’ನಾವು ನಿಮ್ಮ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಗೌರವಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವುದೇ ನೀತಿ ಅಥವಾ ನಿಗದಿತ ಡ್ರೆಸ್ ಕೋಡ್ ಇಲ್ಲ. ಅವರು ತಮ್ಮ ಆಯ್ಕೆಯ ಪ್ರಕಾರ ಡ್ರೆಸ್ ಮಾಡಬಹುದು ಮತ್ತು ಬ್ಯಾಂಕ್ ಶಾಖೆಯಂತಹ ಸಾರ್ವಜನಿಕ ಸ್ಥಳಕ್ಕಾಗಿ ಸ್ಥಳೀಯವಾಗಿ ಸ್ವೀಕಾರಾರ್ಹವಾದ ಸಂಪ್ರದಾಯ ಮತ್ತು ಸಂಸ್ಕಂತಿಯನ್ನು ಪರಿಗಣಿಸಬಹುದು. ನೀವು ಈ ಸಮಸ್ಯೆಯನ್ನು ಎದುರಿಸಿದ ಶಾಖೆಯ ಕೋಡ್ ಅಥವಾ ಹೆಸರನ್ನು ಹಂಚಿಕೊಳ್ಳಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ನಾವು ಇದನ್ನು ಪರಿಶೀಲಿಸುತ್ತೇವೆ’ ಎಂದು ತಿಳಿಸಿದೆ.
ಆದ್ರೆ ಇವಾಗ ಎಲ್ಲರ ತಲೆಯಲ್ಲಿ ಓಡುತ್ತಿರುವ ಪ್ರಶ್ನೆ ಒಂದೇ ಆಗಿದೆ. ಇನ್ನು ಎಸ್ ಬಿಐ ಹೋಗಬೇಕಾದರೆ ಡ್ರೆಸ್ ಕೋಡ್ ಬೇರೆ ಬರಲಿದೆಯೇ? ಇಷ್ಟೆಲ್ಲಾ ಘಟನೆ ಚಡ್ಡಿ ಹಾಕಿಕೊಂಡು ಹೋದವನಿಗೆ ಆಗಿದೆ. ಇನ್ನು ಲುಂಗಿಯಲ್ಲಿ ಹೋಗುವವನ ಪಾಡು!??