ಪುತ್ತೂರು : ವಿವಾಹ ನಿಶ್ಚಿತಾರ್ಥಕ್ಕೆ ದಿನ ನಿಗದಿಯಾಗಿದ್ದ ಯುವಕನ ಮನೆಗೆ ಬಂತು ಬೇರೊಂದು ಯುವತಿಯ ದಿಬ್ಬಣ :ನಾಪತ್ತೆಯಾದ ಯುವಕ ಆತ್ಮಹತ್ಯೆ
ಪುತ್ತೂರು:ನ 25ರ೦ದು ವಿವಾಹ ನಿಶ್ಚಿತಾರ್ಥ ನಡೆಯಲ್ಲಿದ್ದ ಯುವಕನನ್ನು ಮದುವೆಯಾಗಲೆಂದು ಬೇರೊಂದು ಹುಡುಗಿ ಕಡೆಯವರು ದಿಬ್ಬಣ ಸಮೇತರಾಗಿ ಬಂದ ಘಟನೆ ಮತ್ತು ಈ ವೇಳೆ ನಾಪತ್ತೆಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ಕರೆಂಟಿಯಡ್ಕದಲ್ಲಿ ನಡೆದಿದೆ.
ಸುಳ್ಯ ಪದವು ಶಬರಿನಗರ ನಿವಾಸಿ ಕೂಸಪ್ಪ ಪೂಜಾರಿ ಅವರ ರವಿರಾಜ್ ಪುತ್ರ ರವಿರಾಜ್ ಎಂಬವರು ಆತ್ಮಹತ್ಯೆ ಮಾಡಿಕೊಂಡವರು.ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ರವಿರಾಜ್ ಅವರಿಗೆ ನ.25ಕ್ಕೆ ವಿವಾಹ ನಿಶ್ಚಿತಾರ್ಥ ದಿನ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಿಂದ ನ.19ಕ್ಕೇ ಊರಿಗೆ ಬಂದಿದ್ದರು. ನ.19ರಂದು ಅವರು, ಪುತ್ತೂರಿನಲ್ಲಿರುವ ಸ್ನೇಹಿತನ ಮನೆಗೆ ಹೋಗಿ ನ.21ರಂದು ಸಂಜೆ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು.
ಕುಂದಾಪುರದಿಂದ ಬಂತು ದಿಬ್ಬಣ
ನ.25ರಂದು ರವಿರಾಜ್ ಅವರ ವಿವಾಹ ನಿಶ್ಚಿತಾರ್ಥ ನಡೆಸಲು ಮನೆಯವರು ನಿರ್ಧರಿಸಿದ್ದರು.ಈ ನಡುವೆ ರವಿರಾಜ್ ಅವರನ್ನು ಮದುವೆಯಾಗಲೆಂದು ನ.21ರಂದು ಕುಂದಾಪುರದಿಂದ ಬೇರೊಂದು ಹುಡುಗಿಯ ದಿಬ್ಬಣ ದಿಢೀರ್ ಬಂದಾಗ ಗೊಂದಲಕ್ಕೊಳಗಾದ ಮನೆಯವರು ರವಿರಾಜ್ ಅವರನ್ನು ಹುಡುಕಾಡಿದರು, ಆದರೆ ಅವರು ಮನೆಯಲ್ಲಿರಲಿಲ್ಲ. ಆತಂಕಿತರಾಗಿ ಮನೆಯವರು ಹುಡುಕಾಟ ಮುಂದುವರಿಸಿದಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ವಿದೇಶದಲ್ಲಿರುವ ರವಿರಾಜ್ ಅವರ ಸಹೋದರನ ಇನ್ನೂ ಗೃಹಪ್ರವೇಶ ನಡೆಯದ ಹೊಸ ಮನೆಯ ಬಚ್ಚಲು ಕೋಣೆಯಲ್ಲಿ ರವಿರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಕುಂದಾಪುರದಿಂದ ಬಂದಿದ್ದ ಮದುವೆ ದಿಬ್ಬಣ ರವಿರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ನಾನಾಸಾಗಿದೆ.ಘಟನಾ ಸ್ಥಳಕ್ಕೆ ಈಶ್ವರಮಂಗಲ ಹೊರಕಾಣೆಯ ಎ.ಎಸ್.ಐ ಜಾಚಾರ್ಯರವರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ಮೃತ ರವಿರಾಜ್‌ರವರು ತಂದೆ ತಾಯಿ ಹಾಗೂ ಸಹೋದರನನ್ನು ಆಲಿದ್ದಾರೆ.ಮೃತರ ತಂದೆ ನೀಡಿದ ದೂರಿನಂತೆ ಸಂಖ್ಯೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರವಿರಾಜ್ ಅವರಿಗೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸಂದರ್ಭ ಕುಂದಾಪುರದ ಯುವತಿಯ ಪರಿಚಯವಾಗಿ ದೇವಕರವಾಗಿ ರವಿರಾಜ್ ಆಕೆಯನ್ನು ಮದುವೆಯಾಗುವ ಭರವಸೆ ನೀಡಿರಬಹುದು ಇಲ್ಲವೇ ಅವರೀರ್ವರೂ ಮದುವೆಯಾಗಲು ತೀರ್ಮಾನಿಸಿರಬಹುದು. ಈ ಮಧ್ಯೆ ಆತನ ಮನೆಯವರು ಬೇರೆ ಹುಡುಗಿಯ ಜೊತೆ ರವಿರಾಜ್ ಅವರಿಗೆ ಮದುವೆ ಮಾಡಿಸಲು ತೀರ್ಮಾನಿಸಿದ್ದ ವಿಚಾರ ತಿಳಿದು ಕುಂದಾಪುರದ ಹುಡುಗಿ ಮನೆಯವರು ದಿಬ್ಬಣ ಸಮೇತರಾಗಿ ಬಂದಿರಬಹುದು. ಈ ವಿಚಾರ ತಿಳಿದು ರವಿರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯವಾಗಿ ಸುದ್ದಿಯಾಗಿದೆ.ಪೊಲೀಸ್ ತನಿಖೆಯಿಂದ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.