ಅಕ್ರಮ ಗಣಿಗಾರಿಕೆ ತಹಶೀಲ್ದಾರ್ ದಿಢೀರ್ ದಾಳಿ : ಹಿಟಾಚಿ ಹಾಗೂ ಲಾರಿ ವಶಕ್ಕೆ

Share the Article

ಮೂಡುಬಿದಿರೆ : ಪಡು ಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಂದ್ರಕೆರೆ ಗಂಪದದ್ದ ಗ್ರಾನೈಟ್ ಕಲ್ಲಿನ ಕೋರೆಗೆ ರವಿವಾರ ರಾತ್ರಿ ದಿಢೀರ್ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.

ದಾಳಿಯ ವೇಳೆ ಗ್ರಾನೈಟ್ ಕಲ್ಲು ಲೋಡ್ ಹೊಂದಿದ್ದ ಒಂದು ಲಾರಿ, ಒಂದು ಹಿಟಾಚಿ ಮತ್ತು ಗ್ರಾನೈಟ್ ಕಟ್ಟಿಂಗ್ ಬ್ಲಾಸ್ಟಿಂಗ್ ಯಂತ್ರವೊಂದನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಸರಕಾರಿ ಜಾಗವೊಂದರಲ್ಲಿ ಹಾಸನ ಮೂಲದ ವ್ಯಕ್ತಿಯೋರ್ವರು ಕಳೆದ ಕೆಲವು ತಿಂಗಳುಗಳಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು ಎಂಬ ಸಾರ್ವಜನಿಕರ ದೂರಿನ ಆಧಾರದಲ್ಲಿ ರವಿವಾರ ರಾತ್ರಿ 10 ಗಂಟೆಯ ವೇಳೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಮುಗೇರಕ ರಸ್ತೆಯಲ್ಲಿ ಎರಡು ಬೃಹತ್ ಗ್ರಾನೈಟ್ ಕಲ್ಲುಗಳನ್ನು ಹೇರಿದ್ದ ಲಾರಿ ಪತ್ತೆಯಾಗಿದ್ದು, ಅವುಗಳನ್ನು ತಹಶೀಲ್ದಾರ್ ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Leave A Reply