ಕಳ್ಳತನ ಮಾಡಲೆಂದೇ 10 ಕೆಜಿ ತೂಕ ಇಳಿಸಿಕೊಂಡ ಭೂಪ
ನಾವು ಸಿನಿಮಾಗಳಲ್ಲಿ ಎಂತಹ ದರೋಡೆಗಳನ್ನು, ಮನೆ ಕಳತನಗಳನ್ನು ನೋಡಿದ್ದೇವೆ. ವಿಭಿನ್ನವಾಗಿ ಯಾವುದೇ ಸುಳಿವು ಬಿಡದೇ ಕಳ್ಳತನ ಮಾಡಲು ಅನೇಕ ಕಾರ್ಯತಂತ್ರಗಳನ್ನು ರೂಪಿಸುತ್ತಾರೆ.
ಕಳ್ಳರು ಒಂದು ಮನೆಯನ್ನು ವಿಶ್ವ ಕಳ್ಳತನ ಮಾಡಲು ವಾರಗಟ್ಟಲೆ ರೂಪರೇಷಗಳನ್ನು ತಯಾರಿಸಿಕೊಂಡು ಆನಂತರ ಕಳ್ಳತನಕ್ಕೆ ಕೈ ಹಾಕುತ್ತಾರೆ. ಜನರು ಚಲನಚಿತ್ರಗಳಲ್ಲಿ ತೋರಿಸುವ ಕಾಲನಿಕ ಅಪರಾಧಗಳಿಂದ ಪ್ರೇರಿತರಾಗಿ ಅದನ್ನು ನಿಜ ಜೀವನದಲ್ಲೂ ಪ್ರಯತ್ನಿಸಿ ಸಿಕ್ಕಿ ಹಾಕಿಕೊಳ್ಳುತ್ತಾರೆ.
ಇಲ್ಲಿಯೂ ಅದೇ ರೀತಿಯ ಘಟನೆ ನಡೆದಿದೆ. ಗುಜರಾತಿನಲ್ಲಿ ಮನೆ ಕೆಲಸಗಾರನೊಬ್ಬ ಕಳ್ಳತನ ಮಾಡಲು ಏನೆಲ್ಲಾ ಕಸರತ್ತು ಮಾಡಿದ್ದಾನೆಂದು ಇಲ್ಲಿ ನೋಡಿ. 2 ವರ್ಷಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಮನೆಯೊಂದನ್ನು ಚೆನ್ನಾಗಿ ಗಮನಿಸಿದ 34 ವರ್ಷದ ಮನೆ ಕೆಲಸ ಮಾಡುವ ಮೋತಿ ಸಿಂಗ್ ಚೌಹಾಣ್ ಅದೇ ಮನೆಯಲ್ಲಿಯೇ ಕಳ್ಳತನ ಮಾಡಲು ತನ್ನ ದೇಹದ ತೂಕ ಇಳಿಸಿಕೊಳ್ಳಲು 3 ತಿಂಗಳ ಕಾಲ ಕಟ್ಟುನಿಟ್ಟಾದ ಆಹಾರ ಕ್ರಮ ಪಾಲಿಸಿದ್ದಾನೆ.
ಭೋಪಾಲ್‌ನಲ್ಲಿರುವ ಆ ಮನೆಯಲ್ಲಿರುವ ಅತ್ಯಂತ ದುರ್ಬಲ ಸ್ಥಳ ನೆನಪಿಸಿಕೊಂಡು, ಒಂದು ಗಾಜಿನ ಕಿಟಕಿಯಿದ್ದು, ಆ ಮೂಲಕ ಮನೆಯೊಳಗೆ ಹೋಗಲು ಇನ್ನೂ ತೆಳ್ಳಗಿರಬೇಕು ಎಂಬುದನ್ನು ಅರಿತ ಮೋತಿ ಸಿಂಗ್ ಆ ಆಕಾರಕ್ಕೆ ಬರಲು 3 ತಿಂಗಳುಗಳ ಕಾಲ ಬರೀ ಒಂದು ಬಾರಿ ಅಷ್ಟೇ ಊಟ ಮಾಡಿದರು. ಇದರಿಂದಾಗಿ 10 ಕೆಜಿ ತೂಕ ಇಳಿಸಿಕೊಂಡಿದ್ದರು.
ಮನೆಯ ಕುಟುಂಬವು ಕೆಲವು ದಿನಗಳ ಕಾಲ ರಜೆಗೆ ಹೋಗುತ್ತಿರುವುದು ಚೌಹಾಣ್‌ಗೆ ತಿಳಿಯಿತು. ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ತಪ್ಪಿಸಿ, ಕಿಟಕಿಯ ಗಾಜುಗಳನ್ನು ಉಪಕರಣದ ಮೂಲಕ ಕತ್ತರಿಸಿ , ಆ ಮೂಲಕ ಒಳಗೆ ಹೋದನು. ನಂತರ ಮನೆಯಲ್ಲಿದ್ದ 37.14 ಲಕ್ಷ ರೂಪಾಯಿ ಮೊತ್ತದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದನು.