ಕಂಪ್ಯೂಟರ್ ಸೈನ್ಸ್ ಪದವೀಧರೆಗೆ ಭಿಕ್ಷೆ ಬೇಡುವ ಪರಿಸ್ಥಿತಿ|ಅಷ್ಟಕ್ಕೂ ಇವಳ ಈ ಪರಿಸ್ಥಿತಿ ಹಿಂದಿರುವ ಕಾರಣ!
ನಿಜವಾಗಿಯೂ ಹೇಳುವುದಾದರೆ ನಮ್ಮೆಲ್ಲರ ಜೀವನದ ಹಣೆ ಬರಹವನ್ನು ಬರೆಯುವುದು ಭಗವಂತನೆಂದೇ ಹೇಳಬಹುದು.ಕೆಲವರು ನಮ್ಮ ಬುದ್ದಿವಂತಿಕೆಯಿಂದ, ಶಿಕ್ಷಣದಿಂದ ಎಂದು ವಾದಿಸಬಹುದು. ಆದರೂ ಈ ಮಾತು ಎಷ್ಟು ಸತ್ಯವೋ ಅಷ್ಟೇ ಭಗವಂತನ ಆಶೀರ್ವಾದ ಮುಖ್ಯ ಎಂದೇ ಹೇಳಬಹುದು. ಯಾಕಂದ್ರೆ ಇಲ್ಲೊಂದು ಕಡೆ ನಡೆದ ಘಟನೆಯೇ ಸಾಕ್ಷಿ.
ಅದೆಷ್ಟೋ ಮಂದಿ,ಕಲಿಕೆಯಲ್ಲಿ ಮುಂದಿದ್ದು ಉನ್ನತಭ್ಯಾಸ ಮಾಡಿದ್ದರೆ ಹಾಗೂ ಇಂಗ್ಲೀಷ್ ಚೆನ್ನಾಗಿ ಬಲ್ಲವರಾಗಿದ್ದರೆ ಖಂಡಿತಾ ಉತ್ತಮ ಜೀವನ ನಡೆಸುತ್ತಿರುತ್ತಾರೆ ಅಂತಾ ಅನೇಕರು ಭಾವಿಸುತ್ತಿರುತ್ತಾರೆ.ಇನ್ನು ಅವಿದ್ಯಾವಂತರನ್ನು ಕಡೆಗಣಿಸೋರೆ ಹೆಚ್ಚು.ಆದರೆ, ಕೆಲವೊಬ್ಬರ ಜೀವನದಲ್ಲಿ ಇದು ಸುಳ್ಳಾಗಿದೆ.
ಮಂಗಳೂರು : 8 ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ
ಹೌದು.ಈಕೆ ಓದಿನಲ್ಲಿ ಮುಂದಿದ್ದು ಪದವಿ ಶಿಕ್ಷಣ ಮುಗಿಸಿದ್ದಾಳೆ.ನಿರರ್ಗಳವಾಗಿ ಇಂಗ್ಲಿಷ್ ಮಾತಾಡುವ ಈಕೆ ಯಾರಿಗೂ ಕಮ್ಮಿ ಇಲ್ಲದ ವ್ಯಕ್ತಿತ್ವ. ಆದರೆ ಈಕೆಯ ಪರಿಸ್ಥಿತಿ!!. ಈಕೆ ಸ್ವಾತಿ ಎಂಬ ಹೆಸರಿನ ಮಹಿಳೆ.ಇವಳಿಗೆ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ವಾರಣಾಸಿಯ ಅಸ್ಸಿ ಘಾಟ್‌ನಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ. ಅಷ್ಟಕ್ಕೂ ಆಕೆಯ ಈ ಸ್ಥಿತಿಗೆ ಕಾರಣವೇನೆಂದು ನೀವೇ ನೋಡಿ.
ಸ್ವಾತಿ ಭಿಕ್ಷೆ ಬೇಡುತ್ತಿದ್ದುದನ್ನು ಗಮನಿಸಿದ ವ್ಯಕ್ತಿ ಆಕೆಯ ಇಂಗ್ಲಿಷ್ ಮಾತುಗಳನ್ನು ಗಮನಿಸಿ ಆಕೆಯ ಬಳಿ ಬಂದು ಮಾತನಾಡಿದ್ದಾನೆ.ಮಹಿಳೆಯ ಹಿನ್ನೆಲೆಯನ್ನು ಕೇಳುತ್ತಾ ಅದನ್ನು ವಿಡಿಯೋ ಮಾಡಿದ್ದಾರೆ. ಸ್ವಾತಿಯು ಕಂಪ್ಯೂಟರ್ ಸೈನ್ಸ್ ಪದವೀಧರೆಯಾಗಿದ್ದು, ತಾನು ದಕ್ಷಿಣ ಭಾರತದಿಂದ ಇಲ್ಲಿಗೆ ಬಂದಿರುವುದಾಗಿ ಹೇಳಿದ್ದಾರೆ.ಇನ್ನು ಉತ್ತಮ ವಿದ್ಯಾಭ್ಯಾಸ ಮಾಡಿದ ಈಕೆ, ತನ್ನ ಕುಟುಂಬ ಮತ್ತು ಪತಿಯೊಂದಿಗೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಳು. ಆದರೆ, ಈಕೆಯ ದುರಾದೃಷ್ಟ ಎಂಬಂತೆ ಮೊದಲ ಮಗುವಿಗೆ ಜನ್ಮ ನೀಡಿದಾಗ ಸ್ವಾತಿಯ ದೇಹದ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಗಿದೆ. ಇದರಿಂದ ಈಕೆಯನ್ನು ಬಲವಂತವಾಗಿ ಮನೆಯಿಂದ ಹೊರಹಾಕಲಾಯಿತು. ನಂತರ ಈಕೆ ತಲುಪಿದ್ದು ವಾರಣಾಸಿಗೆ.
ಸ್ವಾತಿ ಕಳೆದ ಮೂರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ದಾರಿಹೋಕರ ದಾನವೇ ಆಕೆಯ ಜೀವನಕ್ಕಿರುವ ಭರವಸೆಯಾಗಿದೆ. ಈಕೆಯನ್ನು ನೋಡುವಾಗ ಕೆಲವರಿಗೆ ಮಾನಸಿಕವಾಗಿ ಜರ್ಜರಿತಳಾದ ರೀತಿಯಂತೆ ಕಾಣಬಹುದು. ಆದರೆ, ಸ್ವಾತಿ ಮಾತ್ರ ಇನ್ನೂ ಕೂಡ ತನ್ನ ಜೀವನವನ್ನು ಉತ್ತಮಪಡಿಸಬಹುದಾದ ಮಾರ್ಗಗಳನ್ನು ನಿರೀಕ್ಷಿಸುತ್ತಿದ್ದಾಳೆ. ಇನ್ನು ವಿಡಿಯೋ ಮಾಡಿದ ವ್ಯಕ್ತಿ ಬಳಿ ಕೂಡ ತನಗೆ ಕೆಲಸ ಮಾಡುವ ಬಯಕೆಯಿದೆ ಎಂಬುದನ್ನು ಸ್ವಾತಿ ವ್ಯಕ್ತಪಡಿಸಿದ್ದಾಳೆ.
ಇದು ಒಂದೇ ಘಟನೆ ಅಲ್ಲ,90ರ ಹರೆಯದ ಐಐಟಿ ಪದವೀಧರನೊಬ್ಬ ಗ್ವಾಲಿಯರ್‌ನಲ್ಲಿ ಭಿಕ್ಷೆ ಬೇಡುತ್ತಿರುವ ಬಗ್ಗೆ ಕಳೆದ ವರ್ಷ ವರದಿಯಾಗಿತ್ತು. ಸುರೇಂದ್ರ ವಶಿಷ್ಠ್ ಎಂಬುವವರು 1969 ರಲ್ಲಿ ಐಐಟಿ ಕಾನ್ಪುರದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಮತ್ತು 1972 ರಲ್ಲಿ ಲಕ್ನೋದಿಂದ ಎಲ್‌ಎಲ್‌ಎಂ ಅನ್ನು ಪೂರ್ಣಗೊಳಿಸಿದರು. ಆದರೆ, ಜೀವನದ ಏರಿಳಿತಗಳು ಅವರನ್ನು ಭಿಕ್ಷೆ ಬೇಡುವ ಹಂತಕ್ಕೆ ತಂದವು.ಅದಕ್ಕೆ ಹೇಳುವುದು ಎಲ್ಲಾ ಭಗವಂತನ ಲೀಲೆ!!