ಇನ್ಮುಂದೆ ವ್ಯಕ್ತಿ ಸಾಯುವ ಮೊದಲೇ ಅವರ ಕುಟುಂಬಸ್ಥರಿಗೆ ಸಾವಿನ ಸಂಗತಿ ಗೊತ್ತಾಗುತ್ತದೆ | ನರ್ಸ್ ಜೂಲಿ ಹೇಳಿದ Rally ಬಗ್ಗೆ ತಿಳ್ಕೊಂಡ್ರೆ ಸಾವಿನ ಬಗ್ಗೆ ಮುನ್ಸೂಚನೆ ಖಚಿತ !!

ಅದೆಷ್ಟೋ ಜನರಿಗೆ ತಮ್ಮ ಸಾವಿನ ಬಗೆಗೆ ಕುತೂಹಲವಿರುತ್ತೆ. ನಾವು ಸಾಯುವಾಗ ಯಾವ ಸ್ಥಿತಿಯಲ್ಲಿ ನಮ್ಮ ಮನಸ್ಸು ಇರುತ್ತೆ? ಇನ್ನೇನು ಸಾಯುವ ಸ್ಪಲ್ಪ ಮುನ್ನ ನಮಗೆ ನಮ್ಮ ಸಾವಿನ ಬಗ್ಗೆ ಮುನ್ಸೂಚನೆ ದೊರೆಯುತ್ತದಾ ? ನಮ್ಮ ಕೊನೆಯ ಮಾತೇನು? ನಿಜಕ್ಕೂ ಸಾವಿನ ಸೂಚನೆ ಮುಂಚೆಯೇ ತಿಳಿಯುವುದೇ? ಹೀಗೆ ಹತ್ತು-ಹಲವು ಪ್ರಶ್ನೆಗಳು ಯಾರು ಉತ್ತರಿಸಲಾಗದ ಮೂಡುತ್ತದೆ. ಆದರೆ ಈ ಬಾರಿ ಅದಕ್ಕೆ ಉತ್ತರ ಸಿಕ್ಕಿದೆ.

ಮಂಗಳೂರು : 8 ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ

. ನಮ್ಮೆಲ್ಲರ ಪ್ರಶ್ನೆಗೆ ಉತ್ತರವಾಗಿದ್ದಾರೆ ಈ ಜೂಲಿ. ಈ ಜೂಲಿ ಯಾರು ಎಂಬ ಕುತೂಹಲವೇ? ಇವರು ಸತ್ತ ಹೆಣಗಳ ಜೊತೆಗೆ ಬದುಕುವವರೆಂದೇ ಹೇಳಬಹುದು. ಹಾಗಂತ ಇವರು ಮೋಹಿನಿಯೇ ಎಂಬ ಗೊಂದಲಕ್ಕೆ ನೀವು ಸಿಲುಕಿಕೊಂಡರೆ ಅದು ತಪ್ಪು. ಇವರು ಲಾಸ್ ಏಂಜಲೀಸ್‌ ನ ಓರ್ವ ನರ್ಸ್. ಜೂಲಿ ಮ್ಯಾಕ್‌ಫ್ಯಾಡೆನ್ ಆಕೆಯ ಪೂರ್ಣ ನಾಮಧೇಯ. ನಮಗಾರಿಗೂ ತಿಳಿಯದ ಸಾವಿನ ಕೊನೆಯ ಮಾತು ಇವರಿಗೆ ತಿಳಿದಿದೆಯಂತೆ ! ಅಂತಹಾ ಮಾತನ್ನು ಆಕೆ ಈಗ ಎಲ್ಲರೊಂದಿಗೆ ಹೇಳಿಕೊಂಡಿದ್ದಾಳೆ.

ಹೌದು. ಇವರು ಐದು ವರ್ಷಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದು, ಆಗಾಗ ತನ್ನ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಕೆಲಸದ ವಿಶೇಷ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅವರು ಹೆಚ್ಚಾಗಿ ಸಾವಿನಂಚಿನಲ್ಲಿರುವ ರೋಗಿಯ ಜತೆ ಇರುವುದರಿಂದ ಜನರು ಇನ್ನೇನು ಸಾಯುವಾಗ, ಆ ವ್ಯಕ್ತಿಯ ಅಂತಿಮ ಕ್ಷಣದಲ್ಲಿ ಆಗುವ ಬದಲಾವಣೆಯನ್ನು ಜೂಲಿ ಗಮನಿಸಿದ್ದಾರೆ. ಅದನ್ನು ಆಕೆ ಟಿಕ್ ಟಾಕ್ ಮೂಲಕ ಹಂಚಿಕೊಂಡಿದ್ದಾಳೆ.

ಹೆಚ್ಚಿನ ಜನರಲ್ಲಿ ಸಾಯುವ ಮೊದಲು ಏನಾದರೂ ವಿಶೇಷ ಬದಲಾವಣೆ ಆಗುತ್ತದೆ. ಹುಷಾರಿಲ್ಲದ ಮಲಗಿರುವ ರೋಗಿಯಲ್ಲಿಯೂ ಸಹಾ ವಿಶೇಷ ಬದಲಾವಣೆ ಕಂಡುಬರುತ್ತದೆ. ಮಾತಾಡಲು ಆಗದೆ ಸುಮ್ಮನಿರುವ ರೋಗಿಗಳಲ್ಲಿ ಕೆಲವರಿಗೆ ಸಡನ್ನಾಗಿ ಮಾತಾಡಲು ಸಾಧ್ಯವಾಗುತ್ತದೆ. ಊಟ ಬಿಟ್ಟವರು ಮತ್ತೆ ಮಾಮೂಲಿನಂತೆ. ಊಟ ಮಾಡಲು ಶುರು ಮಾಡುತ್ತಾರೆ. ಮಲಗಿ ಹಾಸಿಗೆ ಹಿಡಿದಿರುವ ಕೆಲವರು ಎದ್ದು ನಡೆಯಲೂ ಪ್ರಾರಂಭಿಸುತ್ತಾರೆ. ಈ ಎಲ್ಲಾ ಚೆಂಜಸ್ ನೋಡಿದ ಅವರ ಸಂಬಂಧಿಕರಲ್ಲಿ ಸಖತ್ ಆಶ್ಚರ್ಯ ಮೂಡುತ್ತದೆ. ಇನ್ನೇನು ರೋಗಿ ರಿಕವರಿ ಆಗಿಬಿಟ್ಟರು ಅಂತ ಅನ್ನಿಸಲು ಅವರಿಗೆ ಪ್ರಾರಂಭ ಆಗುತ್ತದೆ. ಆದರೆ ಅಸಲಿ ವಿಷಯವೇ ಬೇರೆ !!  ಈ ಅನೂಹ್ಯ ಸಾವಿಗೆ ಇನ್ನೇನು ಮುನ್ನುಡಿ ಬರೆದ ಹಾಗೆ !!!

ಇದಕ್ಕೆ ಟೆಕ್ನಿಕಲ್ ಪರಿಭಾಷೆಯಲ್ಲಿ ರ್ಯಾಲಿ ( rally) ಎಂದು ಕರೆಯಲಾಗುತ್ತದೆ. ಇದೆಲ್ಲಾ ಆಗಿ ಕೇವಲ ದಿನಗಳಲ್ಲಿ ರೋಗಿ ಸಾಯುತ್ತಾನೆ/ಳೆ. ಹೆಚ್ಚಿನ ಸಂದರ್ಭಗಳಲ್ಲಿ ಇನ್ನೆರಡು ದಿನ ಅಷ್ಟೇ! ತಪ್ಪಿದರೆ ವಾರದ ಒಳಗೆ ಜೀವನ ಖಲಾಸ್ ಆಗಿಬಿಡುತ್ತದೆ. ಅಷ್ಟೇ ಅಲ್ಲ, ಇದು ಸಾಮಾನ್ಯವಾಗಿ ‘ಐ ಲವ್ ಯು’ ಅಥವಾ ಅವರು ತಮ್ಮ ತಾಯಿ ಅಥವಾ ತಂದೆಯನ್ನು ಕರೆಯುತ್ತಾರೆ. ತಾಯಿ ಅಥವಾ ತಂದೆ ಮೊದಲೇ ಮೃತಪಟ್ಟಿದ್ದರೂ ಇದು ಸಾಮಾನ್ಯವಾಗಿರುತ್ತದೆ. ತನ್ನ ಪ್ರೀತಿಯನ್ನು ನೆನಪಿಸಿಕೊಳ್ಳುವುದು ಕೂಡ ಸಾಮಾನ್ಯ. ಕೊನೆಯ ಕ್ಷಣದಲ್ಲಿ ಉಸಿರಾಟದ ಬದಲಾವಣೆ, ಚರ್ಮದ ಬಣ್ಣ ಬದಲಾವಣೆ, ಜ್ವರ ಮುಂತಾದ ಲಕ್ಷಣಗಳು ವೇಗವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆಗ ಸಾವಿನ ಟಿಕೆಟ್ ಕನ್ಫರ್ಮ್ ಆದ ಹಾಗೆಯೇ !

ಇಂತಹ, ಸಾವು ಸನ್ನಿಹಿತವಾದ ಸಂದರ್ಭದಲ್ಲಿ ರೋಗಿಗಳನ್ನು ಸಂಭಾಳಿಸುವ ಮತ್ತು ರೋಗಿಗಳ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸವನ್ನೂ ಜೂಲಿ ಮಾಡುತ್ತಲೇ ಆಕೆ ಸಾವಿನ ಪ್ರಾರಂಭದ ಅನುಭವ ಬಿಚ್ಚಿಟ್ಟಿದ್ದಾರೆ. ಅದೀಗ ಬಹಳ ವೈರಲ್ ಆಗಿದೆ.

Leave A Reply

Your email address will not be published.