ಕುಂಡಡ್ಕ‌ : ಶ್ರೀ ಆದಿಬ್ರಹ್ಮ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂಡಡ್ಕ :ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಶ್ರೀ ಆದಿ ಬ್ರಹ್ಮ ಮೊಗೇರ್ಕಳ‌, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮವು ಡಿ.18 ಮತ್ತು‌ 19 ರಂದು ನಡೆಯಲಿದ್ದು ನ. 20 ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದೈವಸ್ಥಾನದ ಆವರಣದಲ್ಲಿ ನಡೆಯಿತು.

ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆದು ಬ್ರಹ್ಮಕಲಶವು ಪೂರ್ಣಗೊಂಡು ಇದೀಗ ನೇಮೋತ್ಸವಕ್ಕೆ ಅಣಿಯಾಗಿದೆ. ಸರ್ವ ಭಕ್ತರು ಕೈ ಜೋಡಿಸುವ ಮೂಲಕ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ಯಶಸ್ಸಿಗೆ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ ಮುಕ್ಕೂರು, ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಸಂಚಾಲಕ ಉಮೇಶ್ ಕೆಎಂಬಿ, ಕಾರ್ಯದರ್ಶಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಕೋಶಾಧಿಕಾರಿ ಕುಶಾಲಪ್ಪ ಗೌಡ ಪೆರುವಾಜೆ, ಆರ್ಥಿಕ ಸಮಿತಿಯ ದಯಾನಂದ ರೈ ಕನ್ನೆಜಾಲು, ಜಯಂತ ಗೌಡ ಕುಂಡಡ್ಕ, ಜತೆ ಕಾರ್ಯದರ್ಶಿ ಲಿಂಗಪ್ಪ ಗೌಡ ಕುಂಡಡ್ಕ, ಅನುವಂಶಿಕ ಆಡಳಿತದಾರ ಗುರುವ ಕುಂಡಡ್ಕ, ಆಡಳಿತ ಸಮಿತಿಯ ಚನಿಯ ಕುಂಡಡ್ಕ, ಉಪಾಧ್ಯಕ್ಷ ಕೃಷ್ಣಪ್ಪ ಕುಂಡಡ್ಕ, ಕಾರ್ಯದರ್ಶಿ ವಾಸು ಕುಂಡಡ್ಕ, ಜತೆ ಕಾರ್ಯದರ್ಶಿ ಪುರುಷೋತ್ತಮ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!
Scroll to Top
%d bloggers like this: