ಕಾರ್ಪೊರೇಷನ್ ಚುನಾವಣೆಯಲ್ಲಿ ಸೋತ ವ್ಯಕ್ತಿಯೊಬ್ಬರಿಂದ ಅರ್ಧ ತಲೆ, ಅರ್ಧ ಮೀಸೆ ಬೋಳಿಸಿ ಪ್ರತಿಭಟನೆ |ತನ್ನ ನೆಚ್ಚಿನ ನಾಯಕ ಮುಖ್ಯಮಂತ್ರಿ ಆಗೋತನಕ ಹಾಗೇ ಇರೋದಾಗಿ ಭೀಷ್ಮ ಪ್ರತಿಜ್ಞೆ
ನೆಲ್ಲೂರು:ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತ ಟಿಡಿಪಿ ಮುಖಂಡರೊಬ್ಬರು,ಶುಕ್ರವಾರ ಅರ್ಧ ತಲೆ ಕೂದಲು ಹಾಗೂ ಅರ್ಧ ಮೀಸೆಯನ್ನು ಬೋಳಿಸಿಕೊಂಡಿದ್ದಾರೆ.ಅಲ್ಲದೆ,ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ನಾನು ಹೀಗೆ ಇರುತ್ತಿನೆಂದು ಪಣ ತೊಟ್ಟಿದ್ದಾರೆ.
ಆಂಧ್ರ ಪ್ರದೇಶ ಮಾಜಿ ಸಿಎಂ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಮತ್ತೆ ಸಿಎಂ ಗದ್ದಿಗೆ ಏರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಶಪಥ ಗೈದಿದ್ದಾರೆ.ಹಾಗೆಯೇ ಟಿಡಿಪಿ ಮುಖಂಡ ಕಪ್ಪೆರ ಶ್ರೀನಿವಾಸಲು ‘ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ತನ್ನ ಅರ್ಧ ಮೀಸೆಯನ್ನು ಬೋಳಿಸಿ ಇದೇ ರೀತಿಯಲ್ಲಿ ಇರುವುದಾಗಿ’ ಪ್ರತಿಜ್ಞೆ ಮಾಡಿದ್ದಾರೆ.
ಅಷ್ಟೇ ಅಲ್ಲದೇ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಕೆಳಗಿಳಿಸಿ, ಚಂದ್ರಬಾಬು ನಾಯ್ಡು ಅವರನ್ನು ಮತ್ತೆ ಚುನಾಯಿಸಬೇಕೆಂದು ಸ್ಟೇಟ್ ಹಿಡಿದು ಜನರನ್ನು ಒತ್ತಾಯಿಸುತ್ತಿದ್ದಾರೆ.ತಾನೂ ಚುನಾವಣೆಯಲ್ಲಿ ಸೋಲಲು ಆಡಳಿತಾರೂಢ ವೈಎಸ್ ಆರ್ ಪಿ ಕೈವಾಡವಿದೆ. ಸಚಿವ ಅನಿಲ್ ಕುಮಾರ್ ಮತ್ತಿತರ ಅವರ ಬೆಂಬಲಿಗರು ನೆಲ್ಲೂರಿನಲ್ಲಿ ಹಣ ಕೊಟ್ಟು ವೋಟುಗಳನ್ನು ಖರೀದಿಸಿದ್ದಾರೆ ಎಂದು ಶ್ರೀನಿವಾಸಲು ಆರೋಪಿಸಿದ್ದಾರೆ.