ಮಸೀದಿಗೆ ಹಿಂದೂ ಮಹಿಳೆಯರ ಪ್ರವೇಶ | ಮುಸ್ಲಿಂ‌ ಮಹಿಳೆಯರಿಗೆ ಇಲ್ಲದ ಅವಕಾಶ ಹಿಂದೂಗಳಿಗೆ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಚರ್ಚೆಗೆ ಕಾರಣವಾದ ವಿಚಾರದ ಬಗೆಗೆ ಕೆಲ ಹಿಂದೂ ಮುಖಂಡರುಗಳು ಕೂಡಾ ಗರಂ ಆಗಿದ್ದಾರೆ. ಲವ್ ಜಿಹಾದ್ ತಡೆ ಮುಂತಾದ ಹಲವು ವಿಚಾರಗಳ ಬಗೆಗೆ ಸದಾ ಹೋರಾಟ ನಡೆಸುತ್ತಿರುವ ಹಿಂದೂ ಸಂಘಟನೆಗಳು ಈ ವಿಚಾರದಲ್ಲಿ ಮಾತ್ರ ಕೊಂಚ ಸುಮ್ಮನಿದೆ ಎಂದನಿಸಿದರೂ ತಾಮ್ಮೊಳಗೆ ತಾವೇ ಕೋಪವನ್ನು ಅರಗಿಸಿಕೊಳ್ಳುತ್ತಿದ್ದಾರಂತೆ.ಎಲ್ಲಾ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡಿ ದೊಡ್ಡಸುದ್ದಿಯಾಗಿದ್ದ, ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದ,ಒಂದು ಸಮುದಾಯ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕ ಮಹಿಳೆಯರನ್ನು ಬಳಸಿಕೊಂಡಿದೆ ಎಂದೆಲ್ಲಾ ಸುದ್ದಿ ಹಬ್ಬಿದೆ.ಹಾಗಾದರೆ ವೈರಲ್ ಆದ ವೀಡಿಯೋ ಯಾವುದು, ಜಿಲ್ಲೆಯಲ್ಲಿ ಆ ವೀಡಿಯೋ ಯಾಕಷ್ಟು ಪ್ರಚಾರವಾಯಿತು ಎಂದು ಹೇಳ್ತೇವೆ ಬನ್ನಿ.

ಹಿಂದೂ ಯುವತಿಯರು, ಮಹಿಳೆಯರ ಸಹಿತ ಪುರುಷರು ಕಳೆದ ಶುಕ್ರವಾರ ಮಸೀದಿಯೊಂದಕ್ಕೆ ತೆರಳಿದ್ದಾರೆ. ಆ ಬಳಿಕ ಮಾಧ್ಯಮವೊಂದಕ್ಕೆ ಹೇಳಿಕೆಯನ್ನು ಕೂಡಾ ನೀಡಿದ್ದು, ಅದರಲ್ಲಿ ಇಸ್ಲಾಂ ಧರ್ಮ ಸಹೋದರತ್ವ ಸಾರುತ್ತದೆ, ಮಸೀದಿಯಲ್ಲಿ ಏನು ಮಾಡುತ್ತಾರೆ ಹಾಗೂ ಶುಕ್ರವಾರದ ದಿನ ನಡೆಯುವ ಸಾಮೂಹಿಕ ಪ್ರಾರ್ಥನೆ ಹೇಗೆ ಮನಸ್ಸು ಹಗುರಗೊಳಿಸುತ್ತದೆ ಎಂದೆಲ್ಲಾ ತಿಳಿದೆವು.ಅಬ್ಬಾ ಮನಸ್ಸಿಗೆ ನೆಮ್ಮದಿಯಾಗಿದೆ ಎಂದು ಹೇಳಿಕೆ ನೀಡುತ್ತಾರೆ.

ಇದಾದ ಕೆಲವೇ ಹೊತ್ತಿನಲ್ಲಿ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಎರ್ರಾಬಿರ್ರಿ ಓಡಾಡಿದೆ.ಇಲ್ಲಿಂದ ಮುಂದಕ್ಕೆ ಆಕ್ರೋಶಗಳು ಕೂಡಾ ಹೊರಬಿದ್ದಿದೆ. ಮುಸ್ಲಿಂ ಮಹಿಳೆಯರಿಗೆ ಮಸೀದಿಯೊಳಗೆ ಇಲ್ಲದ ಪ್ರವೇಶ ಹಿಂದೂ ಮಹಿಳೆಯರಿಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ. ಅದೇ ವಿಚಾರವಾಗಿ ಹಿಂದೂ ಸಂಘಟನೆಗಳ ಹಲವಾರು ವಾಟ್ಸಪ್ ಗ್ರೂಪ್ ಗಳಲ್ಲೂ ಬಿಸಿಬಿಸಿ ಚರ್ಚೆಯಾಗಿದೆ.

ಈ ಬಗ್ಗೆ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರದೀಪ್ ಸರಿಪಲ್ಲ ಕಿಡಿಕಾರಿದ್ದು, “ಮುಸ್ಲಿಮರು ಮಸೀದಿಯೊಳಗೆ ಹಿಂದೂ ಮಹಿಳೆಯರನ್ನು ಬಿಟ್ಟುಕೊಳ್ಳುವುದು ಲಾಭಕ್ಕಾಗಿ. ಹಿಂದೂ ದೇವಾಲಯಗಳಿಗೆ ಮುಸ್ಲಿಂ ಮಹಿಳೆಯರು ಬರಲಿ, ನಾವು ಅವರಿಗೂ ಪ್ರವೇಶ ಕಲ್ಪಿಸುತ್ತೇವೆ.ಹಿಂದೂಗಳು ಮುಸ್ಲಿಮರ ಟೋಪಿ ಧರಿಸಿ ಪೋಸ್ ಕೊಟ್ಟಹಾಗೇ ಮುಸ್ಲಿಮರು ಹಿಂದೂಗಳ ಕುಂಕುಮ ಹಚ್ಚಿಕೊಂಡು ಪೋಸ್ ಕೊಡಲಿ!. ಅದು ಅವರಿಂದ ಸಾಧ್ಯವಿದೆಯಾ? ಇದೆಲ್ಲಾ ಲವ್ ಜಿಹಾದ್ ಹಾಗೂ ಇನ್ನಿತರ ಚಟುವಟಿಕೆಗಳ ಒಂದು ಭಾಗವಾಗಿದೆ. ಇದನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತದೆ ಹಾಗೂ ಇದರ ಬಗ್ಗೆ ತನಿಖೆಗೆ ಆಗ್ರಹಿಸುತ್ತದೆ” ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.