ವಿಧಾನ ಪರಿಷತ್ ಚುನಾವಣೆಯಿಂದ ಹಿಂದಕ್ಕೆ ಸರಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ | ವರ್ಕೌಟ್ ಆಯಿತೇ ಎಸ್.ಟಿ.ಸೋಮಶೇಖರ್ ಟಾಂಗ್
ಉಡುಪಿ : ದ.ಕ. ಉಡುಪಿ ಮತಕ್ಷೇತ್ರದಿಂದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರ ಮಾಡಿ ಉಭಯ ಜಿಲ್ಲೆಗಳ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದ್ದ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ ಕುಮಾರ್ ಅವರು ಇದೀಗ ಸ್ಪರ್ಧಾ ನಿರ್ಧಾರದಿಂದ ಹಿಂದೆ ಸರಿಯಲು ನಿರ್ಧರಿಸಿ ಅಚ್ಚರಿ ಮೂಡಿಸಿದ್ದಾರೆ.
ವೇದಿಕೆಗೆ ಬಂದ ಮೇಲೆ ಏನಾದರೂ ಮಾತನಾಡಬೇಕಲ್ಲಾ -ಸೋಮಶೇಖರ್ ಹೇಳಿಕೆಗೆ ರಾಜೇಂದ್ರ ಕುಮಾರ್ ಪ್ರತಿಕ್ರಿಯೆ
ಉಭಯ ಜಿಲ್ಲೆಗಳ ಸಹಕಾರಿ ಧುರೀಣರುಗಳು ಚುನಾವಣೆಗೆ ಸ್ಪಧಿಸುವಂತೆ ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸ್ಪರ್ಧೆಯ ನಿರ್ಧಾರ ಮಾಡಿದ್ದರು. ನ.16ರಂದು ಅವರ ಚುನಾವಣಾ ಕಚೇರಿ ಮಂಗಳೂರಿನಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿತ್ತು. ಆದರೆ ಇದೀಗ ಅವರು ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ತಾನು ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತನಾಗಿ ಉಳಿಯುವ ಬಯಕೆಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿರುವುದಾಗಿ ವರದಿಯಾಗಿದೆ. ಈ ನಿರ್ಧಾರದ ಹಿಂದಿರುವ ಕಾರಣಗಳೇನೆಂದು ತಿಳಿದು ಬಂದಿಲ್ಲ.
ವೇದಿಕೆಗೆ ಬಂದ ಮೇಲೆ ಏನಾದರೂ ಮಾತನಾಡಬೇಕಲ್ಲಾ -ಸೋಮಶೇಖರ್ ಹೇಳಿಕೆಗೆ ರಾಜೇಂದ್ರ ಕುಮಾರ್ ಪ್ರತಿಕ್ರಿಯೆ
ಉಡುಪಿಯ ಪುರಭವನದಲ್ಲಿ ನಡೆದ ಜನ ಸ್ವರಾಜ್’ ಸಮಾವೇಶದಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರು ಡಿಸಿಸಿ ಬ್ಯಾಂಕಿನಿಂದ ಅಕ್ರಮವಾಗಿ ನವೋದಯ ಟ್ರಸ್ಟ್ ಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಡಾ.ರಾಜೇಂದ್ರ ಕುಮಾರ್ ಅವರ ವಿರುದ್ದ ಈ ಗಂಭೀರ ಆರೋಪ ಮಾಡಿದ್ದರು.
ವೇದಿಕೆಗೆ ಬಂದ ಮೇಲೆ ಏನಾದರೂ ಮಾತನಾಡಬೇಕಲ್ಲಾ -ಸೋಮಶೇಖರ್ ಹೇಳಿಕೆಗೆ ರಾಜೇಂದ್ರ ಕುಮಾರ್ ಪ್ರತಿಕ್ರಿಯೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಜಾ ಮಾಡುವ ಅಧಿಕಾರ ಸಹಕಾರ ಇಲಾಖೆಗೆ ಇದೆ.ಅವರ ವಿರುದ್ದ ಈಗಾಗಲೇ ದೂರುಗಳು ಬಂದಿವೆ.ಅವು ತನಿಖಾ ಹಂತದಲ್ಲಿದೆ ಎಂದರು.
ಈ ಹೇಳಿಕೆ ಡಾ.ಎಂ.ಎನ್.ಆರ್ ಅವರು ಹಿಂದಕ್ಕೆ ಸರಿಯಲು ಕಾರಣವಾಯಿತಾ ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.