ರವಿ ಪೂಜಾರಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ: ಪ್ರಕರಣ ರದ್ದುಪಡಿಸಿದ ಕೋರ್ಟ್‌

Share the Article

ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ನಿವಾಸಿಯೊಬ್ಬರಿಗೆ ರವಿ ಪೂಜಾರಿ ಹೆಸರಿನಲ್ಲಿ ಕರೆ ಮಾಡಿ 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆಯೊಡ್ಡಿದ ಪ್ರಕರಣವನ್ನು ಬಂಟ್ವಾಳ ನ್ಯಾಯಾಲಯ ರದ್ದು ಪಡಿಸಿದೆ.

ಘಟನೆಯ ಕುರಿತು ವಿಟ್ಲ ಪೊಲೀಸ್‌ ಠಾಣೆಯಲ್ಲಿ 2010ರ ಜು. 14ರಂದು ಪ್ರಕರಣ ದಾಖಲಾಗಿದ್ದು, ಇಡ್ಕಿದು ಗ್ರಾಮದ ವೆಂಕಟರಮಣ ಭಟ್‌ ಅವರು, ತಾವು ಮಾತೃಶ್ರೀ ಕೃಪಾ ಮನೆಯಲ್ಲಿರುವ ವೇಳೆ ತಮ್ಮ ಮೊಬೈಲ್‌ಗೆ ರವಿ ಪೂಜಾರಿ ಹೆಸರಿನಲ್ಲಿ ಕರೆ ಬಂದು 25 ಲಕ್ಷ ರೂ. ಬೇಡಿಕೆ ಇಟ್ಟು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದರು.

ಪ್ರಕರಣದ ಕುರಿತು ತನಿಖೆ ನಡೆಸಿದ ವಿಟ್ಲ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯ ಹಂತದಲ್ಲಿರುವ ವೇಳೆಯಲ್ಲಿ ದೂರುದಾರರು ಪ್ರಕರಣ ವನ್ನು ಮುಂದುವರಿಸದಿರಲು ನಿರ್ಧರಿಸದ ಕಾರಣ ಬಂಟ್ವಾಳ ಜೆಎಂಎಫ್ ಸಿ ನ್ಯಾಯಾಲಯ ಪ್ರಕರಣವನ್ನು ರದ್ದುಪಡಿಸಿದೆ.

Leave A Reply