ಹುಚ್ಚನ ಸಾವಿಗೆ ಕಣ್ಣೀರಾದ ಊರ ಜನತೆ | ವಿಐಪಿ ಯಂತೆ ಅಂತ್ಯಕ್ರಿಯೆ ನಡೆಸಿ ನೋವಿನ ವಿದಾಯ|ಈ ಹುಚ್ಚ ಬಸ್ಯಾ ಇಷ್ಟು ಅಭಿಮಾನಿ ಬಳಗ ಹೊಂದಲು ಕಾರಣವಾದ್ರೂ ಏನು!? ಅಷ್ಟಕ್ಕೂ ಯಾರೀತ??

Share the Article

ಅನೇಕ ಸಾಧನೆಯನ್ನು ಮಾಡಿರುವವರಿಗೆ, ಸಿನಿಮಾಗಳಲ್ಲಿ ನಟಿಸೋರಿಗೆ, ರಾಜಕಾರಣಿಗಳು ಸಾಮಾನ್ಯವಾಗಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಇಂತವರಿಗೆ ಅದೇನೇ ತೊಂದರೆ ಅಥವಾ ಏನಾದರೂ ಸುದ್ದಿ ಪ್ರಚಾರವಾದ ಕೂಡಲೇ ಎಲ್ಲಾ ಜನರು ಸ್ಥಳಕ್ಕೆ ಆಗಮಿಸುತ್ತಾರೆ.ಆದರೆ ಇಲ್ಲೊಬ್ಬ ಸ್ಟಾರ್‌ ಅಲ್ಲ, ರಾಜಕಾರಣಿಯೂ ಅಲ್ಲ ನಮ್ಮ ನಿಮ್ಮಂತೆ ಸಾಮಾನ್ಯನು ಅಲ್ಲ, ಆದ್ರೂ ಕೂಡ ಈತನ ಅಂತ್ಯಕ್ರಿಯೆಗೆ ಸಾವಿರಾರು ಜನ ಸೇರಿದ್ದರು ಅಂದ್ರೆ ಆತನ ಬಗ್ಗೆ ನಮಗೆ ಕೂತುಹಲ ಮೂಡುವುದು ಸಹಜ ಅಲ್ವಾ?ಹೌದು. ಈತನ ಸ್ಟೋರಿ ಡಿಫರೆಂಟ್ ಆಗೇ ಇದ್ರೂ ಇಂಟರೆಸ್ಟಿಂಗ್ ಆಗೇ ಇದೆ.

ಅಷ್ಟಕ್ಕೂ ಆತ ನಮ್ಮ ನಿಮ್ಮಂತೆ ಸಾಮಾನ್ಯನಲ್ಲ ಈ ವ್ಯಕ್ತಿ ಮಾನಸಿಕ ಅಸ್ವಸ್ಥ, ಆತನಿಗೆ ಆ ಊರಿನ ಜನತೆ ಪ್ರೀತಿಯಿಂದ ಇಟ್ಟ ಹೆಸರೇ ಹುಚ್ಚ ಬಸ್ಯಾ.ಈ ಹುಚ್ಚ ಬಸ್ಯಾ,ಬಳ್ಳಾರಿ ಜಿಲ್ಲೆಯ ಹಡಗಲಿ ಪಟ್ಟಣದಲ್ಲಿದ್ದು,ತನ್ನೆಲ್ಲ ಜೀವನವನ್ನು ಆ ಊರಲ್ಲೇ ಕಳೆದಿದ್ದ. ಆದ್ರೆ ಮೊನ್ನೆ ಊರಿನವರ ಪ್ರೀತಿಯ ಹುಚ್ಚ ಬಸ್ಯಾ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಈತನ ಸಾವಿನ ಸುದ್ದಿ ಕೇಳಿ ಇಡೀ ಊರಿಗೆ ಊರೇ ಕಣ್ಣೀರಾಗಿದ್ದು, ಈತನ ಶವವನ್ನು ಟ್ಯಾಕ್ಟರ್‌ನಲ್ಲಿ ಇಟ್ಟು ಊರಿನ ಪ್ರಮುಖರು ಮೆರವಣಿಗೆ ಮಾಡಿ ಸಾವಿರಾರು ಮಂದಿ ಈತನ ಅಂತ್ಯಕ್ರಿಯೆಯನ್ನು ನೇರವೇರಿಸಿದ್ದಾರೆ. ಕೊನೆಗೂ ನಮ್ಮ ನಡುವಿನ ಮನುಷ್ಯರು ಹುಚ್ಚು ಬದಿಗಿಟ್ಟು ಪ್ರಾಜ್ಞಾರಾಗಿ ಯೋಚಿಸಿದ್ದಾರೆ. ಅಷ್ಟಕ್ಕೂ ಈತನಿಗೆ ಇಷ್ಟು ಅಭಿಮಾನಿ ಬಳಗ ಹೊಂದಲು ಕಾರಣ ಏನೆಂಬ ಕುತೂಹಲ ಮೂಡಿರಬೇಕಲ್ಲ? ನಿಮ್ಮ ಕಾತುರಕ್ಕೆ ಉತ್ತರ ಮುಂದೆ ಇದೆ ನೋಡಿ.

ಹುಚ್ಚ ಬಸ್ಯಾ ಮಾನಸಿಕ ಅಸ್ವಸ್ಥನಾಗಿದ್ದರು ಕೂಡ ಯಾರಿಗೂ ತೊಂದ್ರೆ ಕೊಡದೆ, ಕೇವಲ ಒಂದೇ ಒಂದು ರೂ.ಗಳಿಗೆ ತೃಪ್ತಿಪಟ್ಟುಕೊಳ್ಳುತ್ತಿದ್ದನಂತೆ. ಇದರಿಂದ ಪಟ್ಟಣದಲ್ಲಿ ಈತನನ್ನು ಕಂಡರೇ ಜನತೆಗೆ ಇನ್ನಿಲ್ಲದ ಪ್ರೀತಿ, ಯಾರಿಗೂ ತೊಂದ್ರೆ ಕೊಡದ ಬಸ್ಯಾ ಅಪಘಾತದಲ್ಲಿ ಸಾವನ್ನಪ್ಪಿದ್ದನ್ನು ನೋಡಿದ ಜನತೆ ತಮ್ಮ ಮನೆಯ ಮಗನನ್ನೇ ಕಳೆದುಕೊಂಡತೆ ಕಣ್ಣೀರಿಟ್ಟು ಆತನ ಅಂತ್ಯ ಸಂಸ್ಕಾರವನ್ನು ಶಾಸ್ತ್ರಪೂರ್ಣರಾಗಿ ನೇರವೇರಿಸಿದ್ದಾರೆ.

Leave A Reply

Your email address will not be published.