ಬೆಳ್ತಂಗಡಿ:ಉಜಿರೆ ಕಡೆಗೆ ಪ್ರಯಾಣಿಸುತಿದ್ದ ವೇಳೆ ಬ್ಯಾಗ್ ನಲ್ಲಿದ್ದ 18 ಪವನ್ ಚಿನ್ನ ಕಳ್ಳತನ!

Share the Article

ಬೆಳ್ತಂಗಡಿ :ಉಜಿರೆ ಗ್ರಾಮದ ಹಳೆಪೇಟೆ ನಿವಾಸಿ ಪೆರ್ಲಾಪುವಿನಿಂದ ಕಡೇಶಿವಾಲ್ಯ-ಅಮೈ ಉಪ್ಪಿನಂಗಡಿ ಮಾರ್ಗವಾಗಿ ಎರಡು ರಿಕ್ಷಾ ಹಾಗೂ ಸರಕಾರಿ ಬಸ್ಸಿನಲ್ಲಿ ಉಜಿರೆ ಕಡೆಗೆ ಪ್ರಯಾಣಿಸಿದ್ದ ವೇಳೆ ಬ್ಯಾಗ್ ನಲ್ಲಿದ್ದ ಚಿನ್ನ ಕಳ್ಳತನವಾದ ಪ್ರಕರಣ ವರದಿಯಾಗಿದೆ.

ಅಬ್ದುಲ್ ಲತೀಫ್ ಅವರ ಪತ್ನಿ ಐಸಮ್ಮ ತನ್ನ ಮಕ್ಕಳು ಮತ್ತು ತಂದೆಯ ಜೊತೆಗೆ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದಾಗ,ಮದುವೆ ಸಮಾರಂಭವೊಂದರಲ್ಲಿ ಧರಿಸಲೆಂದು ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಲಾಗಿದ್ದ 18 ಪವನ್ ಚಿನ್ನ ಕಾಣೆಯಾಗಿದೆ. ಈ ಕುರಿತು ಐಸಮ್ಮರ ಪತಿ ಅಬ್ದುಲ್ ಲತೀಫ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವ್ಯಾನಿಟಿ ಬ್ಯಾಗ್‌ನಲ್ಲಿ 1 ಸರ, 5 ಉಂಗುರ, 2 ಬಳೆ, 2 ಬ್ರೇಸ್ಲೆಟ್,1 ಪೆಂಡೆಂಟ್ ಸಹಿತ 18 ಪವನ್ ತೂಕದ ಚಿನ್ನಾಭರಣವಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈ ಕಳ್ಳತನ ಆಟೋದಲ್ಲಿ ನಡೆಯಿತೋ ಅಥವಾ ಬಸ್ ನಲ್ಲಿ ಚಿನ್ನ ಕಳವು ಆಯಿತೋ ಎಂಬುದು ತಿಳಿದಿಲ್ಲ.

ಚಿನ್ನಾಭರಣ ಸಿಕ್ಕಿದವರು ಈ ಕೂಡಲೇ ಮೊ. ಸಂ:8971449546,9901725660ಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

Leave A Reply