ಸವಣೂರು ಸೀತಾರಾಮ ರೈ ಅವರ ಜನ್ಮದಿನದ ಅಮೃತಮಹೋತ್ಸವ | ಅಭಿನಂದನಾ ಗ್ರಂಥ, ಸಾಕ್ಷ್ಯಚಿತ್ರ ಬಿಡುಗಡೆಗೆ ತೀರ್ಮಾನ
ಪುತ್ತೂರು:ಸಹಕಾರಿ, ಸಮಾಜಸೇವಕ ಕೆ.ಸೀತಾರಾಮ ರೈ ಸವಣೂರುರವರ ಜನ್ಮದಿನದ ಅಮೃತ ಮಹೋತ್ಸವವು ಬರುವ ವರ್ಷದ ಜೂ.9ರಂದು ನಡೆಯಲಿದ್ದು ಈ ಸಮಾರಂಭದಲ್ಲಿ ಹುಟ್ಟುಹಬ್ಬದ ಆಚರಣೆಯ ಸವಿನೆನಪನ್ನು ಸ್ಥಾಯಿಯಾಗಿಸುವ ಸಲುವಾಗಿ ಮೌಲಿಕವಾದ ಅಭಿನಂದನಾ ಗ್ರಂಥ ಹಾಗೂ ಸಾಕ್ಷ್ಯಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿದೆ.
ದರ್ಬೆ ಪ್ರಶಾಂತ್ ಮಹಲ್‌ನಲ್ಲಿರುವ ಸೆನೆಟ್ ಹಾಲ್‌ನಲ್ಲಿ ನ.14ರಂದು ನಡೆದ ಕೋರ್ ಕಮಿಟಿಯ ಸಮಾಲೋಚನಾ ಸಭೆಯಲ್ಲಿ ಈ ಕುರಿತ ತೀರ್ಮಾನ ಕೈಗೊಳ್ಳಲಾಯಿತು.
ಸಮಾರಂಭ ಯಶಸ್ವಿಗೊಳಿಸುವ ಕುರಿತಂತೆ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹಾಗೂ ಅಧ್ಯಕ್ಷ ಕೆ.ಆರ್.ಗಂಗಾಧರ್ ಮಾತನಾಡಿದರು. ಅಭಿನಂದನಾ ಗ್ರಂಥದ ಸಂಪಾದಕ ಪಿ.ಬಿ.ಹರೀಶ್ ರೈ ಮತ್ತು ಸಾಕ್ಷ್ಯ ಚಿತ್ರದ ನಿರ್ದೇಶಕ ದುರ್ಗಾಕುಮಾರ್ ನಾಯರ್‌ಕೆರೆ ಯೋಜನೆಯ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುವುದು ಎಂದು ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೇವಳ ಮಾಹಿತಿ ನೀಡಿದರು. ವಿದ್ಯಾರ್ಥಿಗಳು, ಶಿಕ್ಷಕರು, ಸಹಕಾರಿಗಳು ಮತ್ತು ಸಹಕಾರಿ ಸಂಸ್ಥೆಗಳ ಉದ್ಯೋಗಿಗಳು ಹಾಗೂ ಯುವಕ ಯುವತಿ ಮಂಡಲಗಳ ಸದಸ್ಯರಿಗೆ ಮೂರು ತಾಲೂಕುಗಳ ವಿವಿಧ ವಲಯಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸವಣೂರು ಸೀತಾರಾಮ ರೈ, ಅಮೃತ ಮಹೋತ್ಸವ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಎನ್.ಸುಂದರ್ ರೈ ನಡುಮನೆ, ಅಧ್ಯಕ್ಷ ಕೆ.ಆರ್.ಗಂಗಾಧರ್, ಕೋಶಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ಜೊತೆಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ ವೇದಿಕೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು. ಪಿ.ಬಿ.ದಿವಾಕರ್ ರೈ, ಬೂಡಿಯಾರು ರಾಧಾಕೃಷ್ಣ ರೈ, ಪಿ.ಎ.ಮಹಮ್ಮದ್, ಚಂದ್ರಶೇಖರ ಮೇಲ್ಪಾಡ್, ಡಾ.ರಾಜೇಶ್ ರೈ, ಹರಿಣಾಕ್ಷಿ ಜೆ.ಶೆಟ್ಟಿ, ಎನ್.ಜೈರಾಜ್ ಭಂಡಾರಿ, ಹೂವಯ್ಯ ಸೂಂತೋಡು, ವಸಂತ ಜಾಲಾಡಿ, ಸಂತೋಷ್ ಶೆಟ್ಟಿ, ಆಸ್ಕರ್ ಆನಂದ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.