ಅನ್ನ ಕೊಡುವ ಸಂಸ್ಥೆಗೆ ಕನ್ನ ಹಾಕಿದ ಕದೀಮರು. ತಾವು ಕೆಲಸ ಮಾಡುವ ಸಂಸ್ಥೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ ಸಾವಿರದ ಎಪ್ಪತ್ತು ಲಪ್ಟಾಪ್ಸ್ ಗಳನ್ನು ಕದ್ದ ಮೂವರು ಐಟಿ ಉದ್ಯೋಗಿಗಳು!!

ಈಗಿನ ಯುಗದಲ್ಲಿ ಅತಿ ವೇಗವಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಣವನ್ನು ಸಂಪಾದಿಸುವುದರ ಬಗ್ಗೆ ಜನರು ಮೋಹವನ್ನು ಹೊಂದಿದ್ದಾರೆ. ಅದಕ್ಕಾಗಿ ಅವರು ಎಂತಹ ಹೀನ ಕೃತ್ಯವನ್ನು ಎಸಗಲು ತಯಾರಾಗಿದ್ದಾರೆ. ಇಂತಹ ಒಂದು ಘಟನೆ ಬೆಂಗಳೂರಿನ ಎಲೆಕ್ಟ್ರಾನ್ ಸಿಟಿಯಲ್ಲಿ ನಡೆದಿದೆ. ತಾವು ಕೆಲಸ ಮಾಡುವ ಸಂಸ್ಥೆಯಲ್ಲಿ ಲ್ಯಾಪ್ಟಾಪ್ ಗಳನ್ನು ಕದಿಯುವ ಮೂಲಕ 3 ಜನರು ಬಂಧಿತರಾಗಿದ್ದಾರೆ. ಇವರೇನು ಅನಕ್ಷರಸ್ಥರಲ್ಲ ಐಟಿ ಕಂಪನಿಯ ಉದ್ಯೋಗಿಗಳು.!!

 

ಬೆಂಗಳೂರಿನ ಎಲೆಕ್ಟ್ರಾನ್ ಸಿಟಿ ಯ ಖಾಸಗಿ ಸಂಸ್ಥೆಯೊಂದರ ಮೂವರು ಉದ್ಯೋಗಿಗಳು 32 ಲಕ್ಷದ ಬರೋಬ್ಬರಿ ಸಾವಿರದ ಎಪ್ಪತ್ತು ಲ್ಯಾಪ್ಟಾಪ್ ಗಳನ್ನು ಕದ್ದ ಆರೋಪದ ಮೇಲೆ ಬಂಧಿತರಾಗಿದ್ದಾರೆ.

ಚಿಕ್ಕ ತೋಗೂರಿನ ಜಗದೀಶ್, ದೇವರಚಿಕ್ಕನಹಳ್ಳಿ ಯ ಸುರೇಶ್ ಮತ್ತು ಇಂದಿರಾನಗರದ ಲೋಕೇಶ್ ಬಂದಿತ ಆರೋಪಿಗಳಾಗಿದ್ದಾರೆ. ಈ ಮೂರು ಆರೋಪಿಗಳು ಐಟಿ ಕಂಪನಿಯಲ್ಲಿ ಸೇವಾ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಅಕ್ಟೋಬರ್ 15ರಂದು ಸಂಸ್ಥೆಯ ಎಲೆಕ್ಟ್ರಿಕಲ್ ಚೇಂಬರ್ ನಲ್ಲಿ ಇರಿಸಲಾಗಿದ್ದ 10 ಲ್ಯಾಪ್ಟಾಪ್ ಗಳನ್ನು ಮೇಲ್ವಿಚಾರಕ ಗಮನಿಸಿದಾಗ ಲ್ಯಾಪ್ಟಾಪ್ ಕಳವಾಗಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ಸ್ಟೋರ್ ರೂಮ್ ಗೆ ಹೋಗಿ ಸಿಸಿ ಟಿವಿ ಕ್ಯಾಮರಾಗಳನ್ನು ಸ್ವಿಚ್ ಆಫ್ ಮಾಡಿ ನಂತರ ಲ್ಯಾಪ್ಟಾಪ್ ಗಳನ್ನು ಕದ್ದಿದ್ದಾರೆ ಎಂದು ಭದ್ರತಾ ಮೇಲ್ವಿಚಾರಕ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಕಳ್ಳತನದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

Leave A Reply

Your email address will not be published.