ಶಬರಿಮಲೆ ಅರವಣ ಪ್ರಸಾದದಲ್ಲಿ ಹಲಾಲ್ ಪ್ರಮಾಣ ಪತ್ರ ,ಅರಬೀ ಹೆಸರು | ಸ್ಪಷ್ಟನೆ ನೀಡಿದ ದೇವಸ್ವಂ ಬೋರ್ಡ್

ತಿರುವನಂತಪುರ : ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೆ
ದರ್ಶನಕ್ಕೆ ಕನಿಷ್ಟ ನಿಯಮಗಳೊಂದಿಗೆ ಅವಕಾಶ ನೀಡಲಾಗಿದ್ದು,ಮಾಲಾಧರಣೆ ಆರಂಭಗೊಂಡಿದೆ.ಈತನ್ಮದ್ಯೆ ದೇವಸ್ಥಾನದ ‘ಆರಾವಣಾ ಪಾಯಿಸಮ್’ ಪ್ರಸಾದದಲ್ಲಿ ಅರಬಿ ಹೆಸರು ಹಾಗೂ ಹಲಾಲ್ ಪ್ರಮಾಣಪತ್ರ ಇದೆ ಎಂಬುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್ ಸ್ಪಷ್ಟನೆ ನೀಡಿದ್ದು,ಶಬರಿಮಲೆ ದೇವಸ್ಥಾನದ್ದು ಎಂದು ಹೇಳಿಕೊಳ್ಳಲಾಗಿರುವ ಆರವಣಾ ಪಾಯಿಸಮ್ ಹೆಸರಿನ ಪ್ರಸಾದ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ. ಆದರೆ, ಈ ರೀತಿ ಪ್ರಸಾದವನ್ನು ತಾವು ಮಾರಾಟ ಮಾಡುತ್ತಿಲ್ಲ ಎಂದು ಹೇಳಿದೆ.

ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿರುವ ಪ್ರಸಾದಕ್ಕೂ ಶಬರಿಮಲೆ ದೇವಾಲಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಹ ದೇವಸ್ವಂ ಮಂಡಳಿ ತಿಳಿಸಿದೆ.

ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಕ ಭಾರಿ ಚರ್ಚೆಗೆ ಗ್ರಾಸವಾಗಿತ್ತು.ಇದೀಗ ದೇವಸ್ವಂ ಬೋರ್ಡ್ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ.

Leave A Reply

Your email address will not be published.