ರಾಜ್ಯ ರಾಜಕಾರಣದಲ್ಲಿ ಮತ್ತೆ ಮೂಡಿದ ಬಿರುಕು!!ಬೊಮ್ಮಾಯಿ ಕೆಳಗಿಳಿಸಲು ಘಟಾನುಘಟಿ ನಾಯಕರಿಂದ ನಡೆಯುತ್ತಿದೆ ಷಡ್ಯಂತ್ರ!

ರಾಜ್ಯ ರಾಜಕಾರಣದಲ್ಲಿ ಮೆಲ್ಲನೆ ಬಿರುಗಾಳಿ ಬೀಸಿದ್ದು ಮತ್ತೊಮ್ಮೆ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ ಎಂಬ ಮಾಹಿತಿಯೊಂದು ಕೆಲ ಮೂಲಗಳ ಪ್ರಕಾರ ಲಭಿಸಿದ್ದು, ಇದೆಲ್ಲದರ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಕುರ್ಚಿಗೂ ಪಕ್ಷದವರಿಂದಲೇ ಷಡ್ಯಂತ್ರ ನಡೆಯುತ್ತಿದೆ. ಮಾಜಿ ಸಿ.ಎಂ ಯಡಿಯೂರಪ್ಪ ಕುರ್ಚಿಯಲ್ಲಿದ್ದ ಸಂದರ್ಭ ಪಕ್ಷದ ಇತರರು ತಮ್ಮತಮ್ಮೊಳಗೇ ಇದ್ದ ಅಸಮಾಧಾನ, ಭಿನ್ನಮತಗಳಿಂದಾಗಿ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಯಿತಾದರೂ ಆ ಸ್ಥಾನಕ್ಕೆ ಉತ್ತರಕನ್ನಡದ ಓರ್ವ ಪ್ರಬಲ ನಾಯಕ ಪೈಪೋಟಿ ನಡೆಸಿದ್ದರ ನಡುವೆಯೇ ಬೊಮ್ಮಾಯಿ ಮುಖ್ಯಮಂತ್ರಿ ಎಂದು ಘೋಷಿಸಲಾಯಿತು. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬಿಟ್ ಕಾಯಿನ್ ದಂಧೆ ಬೊಮ್ಮಾಯಿ ಕುರ್ಚಿಗೆ ಕುತ್ತು ತರುವಂತೆ ಮಾಡಿದೆ.

ಇದೆಲ್ಲದರ ನಡುವೆ ಗೌರವಾನ್ವಿತ ಪಕ್ಷನಿಷ್ಠರು ಒಂದೆಡೆ ಸೇರಿ ಮೀಟಿಂಗ್ ನಡೆಸಿದ್ದು ಇದರಲ್ಲಿ ರಾಜ್ಯದ ಕೆಲ ಘಟನುಘಟಿ ನಾಯಕರು ಕೂಡಾ ಪಾಲು ಪಡೆದಿದ್ದು, ಇದೆಲ್ಲವನ್ನು ಕಂಡಾಗ ಸ್ವಪಕ್ಷದವರೇ ಮುಖ್ಯಮಂತ್ರಿ ಪಟ್ಟಕ್ಕಾಗಿ ನರಿಯಂತೆ ಹೊಂಚು ಹಾಕಿ ಕುಳಿತಿರುವಂತೆ ಭಾಸವಾಗುತ್ತಿದೆ. ಇತ್ತ ಬೊಮ್ಮಾಯಿ ಕೂಡಾ ಅಲರ್ಟ್ ಆಗಿದ್ದು ಬಿಟ್ ಕಾಯಿನ್ ಬಗೆಗೆ ಪ್ರಧಾನಿ ಮೋದಿ ಸಹಿತ ಬಿಜೆಪಿ ವರಿಷ್ಠರಿಗೆ ದೂರು ನೀಡಿದ್ದಾರೆ.

ಬಿಟ್ ಕಾಯಿನ್ ಹಗರಣ ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸ್ವತಃ ತಮ್ಮ ಪಕ್ಷದವರೇ ಪ್ರಯತ್ನನಿಸುತ್ತಿದ್ದಾರೆ, ಹಗರಣದ ವಿಚಾರವನ್ನು ಪ್ರತಿಪಕ್ಷದವರ ಕಿವಿಗೆ ತಮ್ಮ ಪಕ್ಷದ ನಾಯಕರೇ ತುಂಬಿಸಿದ್ದಾರೆ ಹಾಗೂ ಮಾಧ್ಯಮಗಳಿಗೂ ಈ ವಿಷಯವನ್ನು ನೀಡಿದ್ದಾರೆ ಎಂದು ದೂರು ನೀಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: