ಬೆಳ್ತಂಗಡಿ | ಮನೆ ದರೋಡೆ ಗ್ಯಾಂಗ್ ಅರೆಸ್ಟ್, 13 ಲಕ್ಷ ವಶ !

ಕಳೆದ ಅಕ್ಟೋಬರ್ 31 ರಂದು ಬೆಳ್ತಂಗಡಿಯಲ್ಲಿ ಕಳವಾದ ದೊಡ್ಡ ಮೊತ್ತದ ಮನೆ ಕಳ್ಳರನ್ನು ಪತ್ತೆ ಹಚ್ಚಲಾಗಿದೆ. ಎಲ್ಲಾ ಆರೋಪಿಗಳೂ ಈಗ ಪೊಲೀಸ್ ಬಂಧನದಲ್ಲಿ ಬಿದ್ದಿದ್ದಾರೆ.

ಬೆಳ್ತಂಗಡಿ ತಾಲೂಕು, ಇಂದಬೆಟ್ಟು ಗ್ರಾಮ ಮಹಮ್ಮದ್ ಎಂಬವರು ದಿನಾಂಕ : 31-10-2021 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಗೋದ್ರೇಜ್ ನಲ್ಲಿಟ್ಟಿದ್ದ 13 ಪವನಿನ ಚಿನ್ನದ ನೆಕ್ಲೀಸ್ 01, ಒಂದು ಪವನಿನ ಚಿನ್ನದ ಚೈನ್ 01 , ಒಂದು ಪವನಿನ ಚಿನ್ನದ ಸಣ್ಣ ಚೈನ್ – 01 , ಒಂದೂವರೆ ವವನಿನ ಚಿನ್ನದ ಮಕ್ಕಳ ಚೈನ್ – 02 , ತಲಾ ಒಂದು ಒಂದು ಪವನಿನ ಚಿನ್ನದ ಕಾಯಿನ್ಸ್ – 04 , ತಲಾ ನಾಲ್ಕು ಪವನಿನ ಚಿನ್ನದ ಬಿಸ್ಕೆಟ್ – 04 – ಎರಡು ಪವನಿನ ಚಿನ್ನದ ಗಟ್ಟಿ – 01 ಅರ್ಧ ಪವನಿನ ಚಿನ್ನದ ಬ್ರಾಸ್ ಲೈಟ್ – 01 : ಅರ್ಧ ಪವನಿನ ಚಿನ್ನದ ತುಂಡಾದ ಬಳೆ ಹಾಗೂ ಪೆಂಡೆಂಟ್ – 01, ಅರ್ಧ ಪವನಿನ ಚಿನ್ನದ ಮಗುವಿನ ಕಿವಿ ಓಲೆ -01 ಜೊತೆ , ಮುಂತಾದ ಸುಮಾರು 12,05,200 ರಷ್ಟು ದೊಡ್ಡ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು ನಗದು ಹಣ 5200 ರೂಪಾಯಿ ಕಳವು ಆಗಿತ್ತು.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳಾದ ನಾವೂರು ಗ್ರಾಮದ ನಿರಿಂದಿ ಮನೆಯ ಮಹಮ್ಮದ್ ಸ್ವಾಲಿ, ಲಾಯಿಲಾ ಗ್ರಾಮದ ಕುಂಟಿನಿ ಮನೆ ಯಾಹ್ಯಾ, ಬಿ.ಹೆಚ್ ನೌಫಲ್, ನಾವೂರು ಎಂಬವರುಗಳನ್ನು ಹೆಡೆ ಮುರಿ ಕಟ್ಟಲಾಗಿದೆ. ಮತ್ತು ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಕೆಎ , 21 ಎಂ 8376 ನೇ ಅಲ್ಲೋ ಕಾರು , ಪಲ್ಸರ್ ಎನ್ ಎಸ್ ಮೋಟಾರು ಸೈಕಲ್, ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ ಇವುಗಳ ಒಟ್ಟು ಮೌಲ್ಯ 1,69,500 ರೂಗಳು , ಹಾಗೂ ಕಳವಾದ 12,05,200 ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣಗಳು, ನಗದು 1230 ರೂ ಗಳನ್ನು ಸ್ವಾಧೀನಪಡಿಸಿಕೊಂಡು ಸ್ವಾಧೀನ ಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 13,75,930 ರೂಪಾಯಿ ಆಗಿದ್ದು , ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸದ್ರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮಾನ್ಯ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸೋನವನ ಋಷಿಕೇಶ್ ಭಗವಾನ್ ಐ.ಪಿ.ಎಸ್ , ಶ್ರೀ ಶಿವಕುಮಾರ್ ಗುಣಾರೆ , ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರುಗಳ ನಿರ್ದೇಶನದಂತೆ ದೊಡ್ಡ ತಂಡ ಕಟ್ಟಿ ಫೀಲ್ಡ್ ಗೆ ಇಳಿದಿದ್ದರು. ಆ ತಂಡದಲ್ಲಿ ಶ್ರೀ ಶಿವಾಂಶು ರಜಪೂತ್ ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರವರ ಸೂಚನೆಯಂತೆ ಈ ಪ್ರಕರಣದ ತನಿಖಾಧಿಕಾರಿಯಾದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ , ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ ನಂದ ಕುಮಾರ್ , ಪ್ರೊ.ಪಿಎಸ್‌ಐ ಮೂರ್ತಿ , ಎಎಸೈ , ದೇವಪ್ಪ ಎಂಕ , ಸಿಬ್ಬಂದಿಗಳಾದ ಲಾರೆನ್ಸ್ ರಾಜೇಶ್ ಎನ್ , ವೃಷಭ , ಪ್ರಮೋದ್ ನಾಯ್ಕ , ಇಬ್ರಾಹಿಂ ಗರ್ಡಾಡಿ , ಲತೀಫ್ , ವಿಜಯ ಕುಮಾರ್ ರೈ , ವೆಂಕಟೇಶ್ , ಬಸವರಾಜ್ , ಚರಣ್ , ಅವಿನಾಶ್ , ವಾಹನ ಚಾಲಕರಾದ ಮಹಮ್ಮದ್ ಆಸೀಫ್ , ಸತೀಶ್ , ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ, ಸಂಪತ್ ಕುಮಾರ್ ಗಳ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

Leave A Reply

Your email address will not be published.