ಕೋಡಿಂಬಾಳ: ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಅಪರಿಚಿತ ಕಾರು ಚಾಲಕ | ಪೊಲೀಸರಿಗೆ ಮಾಹಿತಿ

Share the Article

ಕಡಬ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ಹಠಾತ್ತನೆ ಕಾರಿನಿಂದ ಇಳಿದು ವಿದ್ಯಾರ್ಥಿಯತ್ತ ಬಂದಿದ್ದು, ದಿಗ್ಬ್ರಮೆಗೊಂಡ ಬಾಲಕಿ ಓಡಿ ಆತನಿಂದ ತಪ್ಪಿಸಿಕೊಂಡ ಘಟನೆ ಕೋಡಿಂಬಾಳ ಗ್ರಾಮದ ಮಡ್ಯಡ್ಕ ಸಮೀಪ ನ.9ರಂದು ಸಂಜೆ ನಡೆದಿದೆ.

ಕಡಬ ಸರಸ್ವತೀ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೋಡಿಂಬಾಳ ದಿಂದ ಮಡ್ಯಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು ಉಂಡಿಲ ಕ್ರಾಸ್ ಎಂಬಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಕಾರನ್ನು ಹಠಾತ್ತನೆ ನಿಲ್ಲಿಸಿ ಬಾಲಕಿಯತ್ತ ಧಾವಿಸಿದ್ದ ಇದನ್ನು ಗಮನಿಸಿದ ಬಾಲಕಿ ಕೂಡಲೇ ಓಡಿದ್ದಾಳೆ, ಆದರೂ ಅಪರಿಚಿತ ಸ್ವಲ್ಪ ದೂರ ಹಿಂಬಾಲಿಸಿ ಕಲ್ಲನ್ನು ಎಸೆಯಲು ಪ್ರಯತ್ನಿಸಿದ್ದ ಆದರೆ ಬಾಲಕಿ ಆತನ ಕೈಗೆ ಸಿಗದಿದ್ದಾಗ ಆತ ಕಾರಿನಲ್ಲಿಯೇ ಹೋದ ಎಂದು ಬಾಲಕಿ ತನ್ನ ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಈ ಬಗ್ಗೆ ಬಾಲಕಿಯ ತಂದೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

Leave A Reply