ಗಡ್ಡ ಧರಿಸಿದವರು ಇನ್ನು ಮದುವೆಯಾಗುವಂತಿಲ್ಲ, ದಂಪತಿಗಳನ್ನು ಆಶೀರ್ವದಿಸುವ ಮಹಿಳೆಯರು ತಮ್ಮ ಕೂದಲನ್ನು ಓಪನ್ ಬಿಡಲು ಅವಕಾಶ ಇಲ್ಲ | ಕಟ್ಟಪ್ಪಣೆ ವಿಧಿಸಿದ ಕೊಡವ ಸಮಾಜ

ಮಡಿಕೇರಿ: ಇನ್ನು ಮುಂದೆ ಗಡ್ಡ ಇರುವವರು ಮದುವೆಯಾಗುವಂತೆಯೆ ಇಲ್ಲ. ಕೊಡವ ವಿವಾಹ ಸಮಾರಂಭಗಳಲ್ಲಿ ಮದುಮಗ ಗಡ್ಡ ಧರಿಸುವುದು, ಮದುವೆ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಸಾಂಪ್ರದಾಯಿಕವಲ್ಲದ ಆಚರಣೆಗಳು ಎಂದಿರುವ ವಿರಾಜಪೇಟೆಯ ಕೊಡವ ಸಮಾಜ ಅವುಗಳನ್ನು ನಿಷೇಧಿಸಿದೆ.

ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆದ 99ನೇ ಮಹಾಸಭೆಯಲ್ಲಿ ಸರ್ವಾನುಮತದಿಂದ ಇಂತಹಾ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಹೀಗೆ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಮದುವೆಯ ಸಮಯದಲ್ಲಿ ಆಚರಿಸುವ ಮೂಲ ಆಚರಣೆ ಮತ್ತು ಸಂಪ್ರದಾಯಗಳಲ್ಲ ಎಂದಿರುವ ಸಂಸ್ಥೆಯು, ಸಮಾರಂಭದಲ್ಲಿ ವಧು ಮತ್ತು ವರನಿಗೆ ಹಲವಾರು ಇತರ ನಿರ್ಬಂಧಗಳನ್ನು ವಿಧಿಸಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಕೊಡವ ಮದುಮಗನು ಮದುವೆಯ ಸಂದರ್ಭದಲ್ಲಿ ಗಡ್ಡ ಇರಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಕೊಡವ ಸಂಸ್ಕೃತಿಗೆ ವಿರುದ್ಧವಾಗಿದೆ. ವರನು ತನ್ನ ಮದುವೆ ಸಮಾರಂಭದಲ್ಲಿ ಕ್ಲೀನ್ ಶೇವ್ ಲುಕ್‌ನಲ್ಲಿ ಮಾತ್ರ ಭಾಗವಹಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ.

ಇದಲ್ಲದೆ, ಮದುವೆಗೆ ಹಾಜರಾಗಿ ದಂಪತಿಗಳನ್ನು ಆಶೀರ್ವದಿಸುವ ಮಹಿಳೆಯರು ತಮ್ಮ ಕೂದಲನ್ನು ಓಪನ್ ಬಿಡಲು ಅವಕಾಶ ಇಲ್ಲ ಮತ್ತು ಕೂದಲನ್ನು ಪ್ಲೇಟ್ ಮಾಡಲು ಕಡ್ಡಾಯಗೊಳಿಸಲಾಗಿದೆ ಮತ್ತು ಚಿಕ್ಕ ಕೂದಲಿನ ಸಂದರ್ಭದಲ್ಲಿ ಅವರು ತಲೆಗೆ ಬಟ್ಟೆಯನ್ನು ಸುತ್ತಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
“ಕೊಡವ ಸಂಪ್ರದಾಯದ ಅಂತ್ಯ ಸಂಸ್ಕಾರದ ವೇಳೆ ಮಾತ್ರ ಮಹಿಳೆಯರು ಕೂದಲು ಓಪನ್ ಬಿಡುತ್ತಾರೆ ಎಂಬ ಕಾರಣದಿಂದ ಈ ನಿರ್ಧಾರವನ್ನು ಕಡ್ಡಾಯಗೊಳಿಸಲಾಗಿದೆ” ಎಂದು ಸದಸ್ಯರು ವಿವರಿಸಿದ್ದಾರೆ.

ಅಲ್ಲದೆ ಗಂಗಾಪೂಜೆಯ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಮತ್ತು ಸಾಂಪ್ರದಾಯಿಕ ಡೋಲು ‘ದೇವತ್’ ಬಳಸಿ ‘ವಾಲಗ’ದ ಸಾಂಪ್ರದಾಯಿಕ ಸಂಗೀತವನ್ನು ನುಡಿಸುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಾರಂಭಕ್ಕೆ ರಾತ್ರಿ 10 ಗಂಟೆಗೆ ಗಡುವು ನಿಗದಿಪಡಿಸಲಾಗಿದೆ. ಅಲ್ಲದೆ, ಯಾವುದೇ ಕೊಡವ ಹುಡುಗಿ ಬೇರೆ ಸಮುದಾಯದ ವರನನ್ನು ಮದುವೆಯಾದರೆ, ವರನಿಗೆ ಕೊಡವ ಸಾಂಪ್ರದಾಯಿಕ ‘ಕುಪ್ಯಾಚಾಲೆ’ ಮತ್ತು ಸಾಂಪ್ರದಾಯಿಕ ‘ಪಥಕ್’ ಆಭರಣ ಧರಿಸುವುದನ್ನು ನಿಷೇಧಿಸಲಾಗಿದೆ.

ಈ ಹಿಂದೆ, ಪೊನ್ನಂಪೇಟೆ ಕೊಡವ ಸಮಾಜವು ಮದುವೆಗಳ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ಹಾಕಿತ್ತು, ಈ ನಿರ್ಧಾರಗಳು ಕೊಡವ ಆಚರಣೆ ಮತ್ತು ಸಂಪ್ರದಾಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಸಮಾಜದ ಮುಖ್ಯಸ್ಥರು ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: