ವಿಶ್ವದ ಅತ್ಯಂತ ‘ಕೊಳಕು’ಮನೆ ಮಾರಾಟಕ್ಕಿದೆ!! | ಈ ಮನೆಯ ವಿಚಿತ್ರ ವೈಶಿಷ್ಟ್ಯ ತಿಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ
ಪುಟ್ಟದಾದರೂ ಸರಿಯೆ ಸ್ವಂತ ಮನೆಯನ್ನು ಹೊಂದಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದಿದ್ದೆ. ಹೊಸ ಮನೆ ಕೊಳ್ಳಬೇಕು ಅಥವಾ ಕಟ್ಟಿಸಬೇಕು ಎಂಬುದು ಪ್ರತಿಯೊಬ್ಬರ ಆಯ್ಕೆಯಾಗಿರುತ್ತದೆ. ಹಾಗೆಯೇ ನಗರಗಳ ಬೀದಿ ಬೀದಿಗಳಲ್ಲಿ To-let ಎಂಬ ಬೋರ್ಡ್ ಕಣ್ಣಿಗೆ ಬೀಳದೆ ಇರದು. ಹಾಗೆಯೇ ಇಲ್ಲೊಂದು ಮನೆ ಮಾರಾಟಕ್ಕಿದೆ. ಅದು ಕೂಡ ವಿಶ್ವದ ಅತ್ಯಂತ ‘ಕೊಳಕು’ ಮನೆ. ಈ ಮನೆಯನ್ನು ಕೊಳ್ಳುವವರು ಯಾರಾದರೂ ಇದ್ದರೆ ಈ ಮನೆಯ ವಿಭಿನ್ನ ವೈಶಿಷ್ಟ್ಯವನ್ನೊಮ್ಮೆ ತಿಳಿದುಕೊಳ್ಳಿ.
ಮನೆಯ ಮಾಸ್ಟರ್ ಬೆಡ್ ರೂಮಿನಲ್ಲಿ ಕಸದ ರಾಶಿಯೇ ಬಿದ್ದಿದೆ. ಈ ಮನೆಯ ಬಾತ್ ರೂಂ ಚಿತ್ರಗಳನ್ನು ನೀವೂ ನೋಡಿದ್ರೆ, ಫೋಟೋ ನೋಡಿದ ತಕ್ಷಣ ವಾಂತಿ ಬರುವ ಸಾಧ್ಯತೆ ಇದೆ. ಟಾಯ್ಲೆಟ್ ಸೀಟ್‌ನ ಸ್ಥಿತಿ ತುಂಬಾ ಕೆಟ್ಟದಾಗಿದ್ದು, ಮೂಲ ಬಣ್ಣವನ್ನು ಗುರುತಿಸುವುದು ಸಹ ಕಷ್ಟಕರವಾಗಿದೆ.
ಅಡುಗೆ ಮನೆಯ ಚಿತ್ರಗಳನ್ನು ನೋಡಿದರೆ ನೀವು ಇದ್ದಲ್ಲಿಗೆ ಅದರ ಗಬ್ಬುನಾಥ ಬರುವಂತಿದೆ. ಅಡುಗೆ ಮನೆಯಲ್ಲಿ 13 ವರ್ಷಗಳಿಂದ ತೊಳೆಯದ ಕೊಳಕು ಪಾತ್ರೆಗಳು ಬಿದ್ದಿವೆ. ಕೊಳಕು ಸಿಂಕ್ ಮತ್ತು ಸ್ಟವ್ ಮೇಲೆ ಇಡಲಾದ ಆಹಾರವನ್ನು ಸಹ ಅದೇ ರೀತಿಯಲ್ಲಿ ಇರಿಸಲಾಗುತ್ತದೆ.
ಮನೆಯೊಳಗಿನ ಮೆಟ್ಟಿಲುಗಳ ಮೇಲೆ ತುಂಬ ಕಸ ಹರಡಿಕೊಂಡಿದ್ದು, ಇಡೀ ನಗರದ ಕಸವನ್ನು ಅಲ್ಲಿ ತಂದು ಸುರಿದಂತಿದೆ. ಕಳೆದ 13 ವರ್ಷಗಳಿಂದ ಕಸವನ್ನು ಇಲ್ಲಿ ಹರಡಲಾಗುತ್ತಿದೆ ಎಂದು ನಂಬಲಾಗಿದೆ.
ಹೊರಗೆ ನಿಂತರೆ ಕಾಡಿನಂತೆ ಭಾಸವಾಗುತ್ತದೆ :
ಈ ಮನೆಯ ಹೊರಗಿನ ಚಿತ್ರಗಳನ್ನು ನೋಡಿದಾಗ ಮನೆಯ ಹೊರಗೆ ಸಾಕಷ್ಟು ಹುಲ್ಲು ಬೆಳೆದಿರುವುದು ಗೊತ್ತಾಗುತ್ತದೆ. ಮನೆಯ ಗಡಿಯ ಮೂಲಕ, ಈ ಹುಲ್ಲು ಛಾವಣಿಯವರೆಗೆ ತಲುಪಿದೆ. ವರ್ಷಗಳೇ ಕಳೆದರೂ ಅದನ್ನು ಕಟ್ ಮಾಡಿಲ್ಲ.
ಅಷ್ಟಕ್ಕೂ ಈ ಮನೆ ಯಾರದ್ದು ಅಂತ ಯೋಚಿಸುತ್ತಿದ್ದೀರಾ?? ಪ್ರಸ್ತುತ, ಈ ಮನೆಯನ್ನು ಪ್ರಾಪರ್ಟಿ ಕಂಪನಿ ಸ್ವಾಧೀನಪಡಿಸಿಕೊಂಡಿದೆ. ಈ ಮನೆಯು ಮೂಲತಃ ವಯಸ್ಸಾದ ದಂಪತಿಗಳು ಮತ್ತು ಅವರ ಮಗನಿಗೆ ಸೇರಿದ್ದಂತೆ. ಮನೆಯ ಸ್ಥಿತಿ ನೋಡಿದರೆ ವೃದ್ಧ ತಂದೆ-ತಾಯಿ ಇಬ್ಬರೂ ತೀರಿ ಹೋಗಿದ್ದು, ಮನೆಯ ಹೊರಗೆ ವಾಸವಿದ್ದ ಮಗನಿಗೆ ಈ ಮನೆಯನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೇ ಅವನು ಈ ಮನೆಯನ್ನು ಕೆಟ್ಟ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದ. ಡಿಸೆಂಬರ್ 2008 ರ ಹಿಂದಿನ ಬೆಡ್ ರೂಮ್‌ನ ನೆಲದ ಮೇಲೆ ಅವಶೇಷಗಳ ನಡುವೆ ಬಿದ್ದಿರುವ ವೃತ್ತಪತ್ರಿಕೆ ಕಂಡುಬಂದಿದೆ. ಇದರಿಂದ ಮನೆ ಹಲವು ವರ್ಷಗಳಿಂದ ಪಾಳು ಬಿದ್ದಿರುವುದು ಗೊತ್ತಾಗುತ್ತದೆ.
ಹಲವು ವರ್ಷಗಳಿಂದ ಖಾಲಿ ಬಿದ್ದಿರುವ ಈ ಮನೆ ಈಗ ಮಾರಾಟವಾಗಲಿದೆ. ಆದರೆ, ಮನೆಯನ್ನು ಸ್ವಚ್ಛಗೊಳಿಸದೇ ಮಾರಾಟಕ್ಕೆ ಇಟ್ಟಿರುವುದು ಅತ್ಯಂತ ಅಚ್ಚರಿಯ ಸಂಗತಿ. ಅದಲ್ಲದೆ, ಈ ಮನೆಯನ್ನು ಯಾರು ಖರೀದಿಸುತ್ತಾರೋ ಅವರಿಗೆ 13 ವರ್ಷಗಳಿಂದ ಸಂಗ್ರಹವಾದ ಕಸವೂ ಬಿಟ್ಟಿಯಾಗೇ ಸಿಗುತ್ತದೆ.