ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿ, ಅಂಗನವಾಡಿಗಳು ಆರಂಭ
ನ. 8ರಿಂದ ಪೂರ್ವ ಪ್ರಾಥಮಿಕ ತರಗತಿಗಳು ಮತ್ತು ಅಂಗನವಾಡಿಗಳು ಆರಂಭವಾಗಲಿವೆ.
ಅಂಗನವಾಡಿ ಕೇಂದ್ರಗಳನ್ನು ಮೊದಲಿನ ಹಂತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತೆರೆಯಬಹುದಾಗಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಟಿಕ ಆಹಾರವನ್ನು ಮನೆಗೆ ನೀಡಲಾಗುವುದು. 15 ದಿನಗಳ ಅನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪೌಷ್ಟಿಕ ಆಹಾರವನ್ನು ಕೇಂದ್ರದಲ್ಲಿಯೇ ನೀಡಲಾಗುತ್ತದೆ.
ದ.ಕ. ಜಿಲ್ಲೆಯಲ್ಲಿ 2,108 ಅಂಗನವಾಡಿಗಳಿದೆ. ಫಲಾನುಭವಿಗಳ ಅಂದಾಜು ಸಂಖ್ಯೆ 1.80 ಲಕ್ಷವಿದ್ದು, ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರು 4,200 ಮಂದಿ ಇದ್ದಾರೆ.
ಎಲ್ಕೆಜಿ ಹಾಗೂ ಯುಕೆಜಿಯು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9.30ರಿಂದ ಅಪರಾಹ್ನ 3.30ರ ವರೆಗೆ ನಡೆಸಲು ಸೂಚನೆ ನೀಡಲಾಗಿದೆ. ತರಗತಿಗಳನ್ನು ಸಿಂಗರಿಸಲಾಗಿದ್ದು, ಪುಟಾಣಿಗಳ ಸ್ವಾಗತಕ್ಕೆ ಸಕಲ ತಯಾರಿ ಮಾಡಲಾಗಿದೆ.