ಹಿಂದೂ ಪ್ರೇಮಿಯ ಜತೆ ಸೀರೆ ಉಟ್ಟು ಲಕ್ಷಣವಾಗಿ ದೀಪಾವಳಿ ಆಚರಿಸಿಕೊಂಡ ಮುಸ್ಲಿಂ ಯುವತಿ | ಫೋಟೋ ವೈರಲ್ !

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅವರ ಮೊದಲ ಪತ್ನಿಯ ಮಗಳಾಗಿರುವ ಇರಾ ಖಾನ್ ನೂಪುರ್ ಶಿಖರೆ ಎಂಬ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದು, ಆತನ ಜತೆ ದೀಪಾವಳಿಯನ್ನು ಆಚರಿಸಿಕೊಂಡಿದ್ದಾಳೆ. ಇದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇರಾ ಖಾನ್ ದೀಪಾವಳಿಯ ಸಂದರ್ಭದಲ್ಲಿ ರೇಷ್ಮೆ ಸೀರೆಯನ್ನು ಧರಿಸಿ ಲಕ್ಷಣವಾಗಿ ಪ್ರೇಮಿಯ ಜತೆ ದೀಪಾವಳಿ ಆಚರಿಸಿಕೊಂಡಿರುವ ಚಿತ್ರ ಪ್ರಕಟವಾಗಿದೆ. ಹಿಂದೂ ಆಗಿರುವ ನೂಪುರ್ ಶಿಖರೆ ಫಿಟ್‌ನೆಸ್‌ ತರಬೇತುದಾರರಾಗಿದ್ದಾನೆ. ಇರಾ ತಮ್ಮಿಬ್ಬರ ಲವ್ ಸ್ಟೋರಿಯನ್ನು ಕಳೆದ ಫೆಬ್ರುವರಿಯಲ್ಲಿ ಪ್ರೇಮಿಗಳ ದಿನದ ಮುಂಚಿತವಾಗಿ ಬರುವ ‘ಪ್ರಾಮಿಸ್ ಡೇ’ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಬಹಿರಂಗಗೊಳಿಸಿದ್ದಳು. ಕೆಲವು ಕಾರಣಗಳಿಂದ ನಾನು ಖಿನ್ನತೆಯಿಂದ ಬಳಲುತ್ತಿದ್ದೆ, ಜತೆಗೆ ಮಾನಸಿಕ ಆರೋಗ್ಯ ಸಮಸ್ಯೆ ಇದ್ದವು. ಇವೆಲ್ಲವನ್ನೂ ಸರಿ ಮಾಡಿ ನನ್ನ ಮನಸ್ಸನ್ನು ಹತೋಟಿಗೆ ಬಂದವನು ನೂಪುರ್ ಎಂದೂ ಆಕೆ ಬರೆದುಕೊಂಡಿದ್ದಳು. ಹಾಗೆ ಮನಸ್ಸನ್ನು ಆಕ್ರಮಿಸಿಕೊಂಡವನು ಪ್ರೀತಿ ಮಾಡಿದ್ದ.

ಇರಾಗೆ ಈಗ 24 ವರ್ಷ ವಯಸ್ಸು, ಈಕೆ ಅಮೀರ್ ಖಾನ್ ನ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಗಳು  ಈ ದಂಪತಿಗೆ ಜುನೈದ್ ಎಂಬ ಮಗ ಕೂಡ ಇದ್ದಾನೆ. ಇರಾ ಖಾನ್ 2019 ರ ‘ಯೂರಿಪಿಡ್ಸ್’ ಮೀಡಿಯಾ’ ಎಂಬ ಸ್ಟೇಜ್ ಪ್ರೊಡಕ್ಷನ್ ಜತೆಗೆ ನಿರ್ದೇಶನ ಲೋಕಕ್ಕೆ ಕಾಲಿಟ್ಟಿದ್ದಾಳೆ. ಈಗ ಪ್ರೀತಿಗೆ ಅಡಿಯಿರಿಸಿದ್ದಾಳೆ. ದಾಂಪತ್ಯ ಜೀವನಕ್ಕೆ ಯಾವಾಗ ಕಾಲಿಡೋದು ಅಂತ ಅಭಿಮಾನಿಗಳು ಕೇಳ್ತಿದ್ದಾರೆ. ಇರಿ ಸ್ವಲ್ಪ ಕಾಯಿರಿ ಅಂದಿದ್ದಾಳೆ ಇರಾ !

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: