ಬೆಳ್ಳಾರೆ : ಬಾಳಿಲದಲ್ಲಿ ಕಟ್ಟಡದಿಂದ ಕೆಳಗೆ ಬಿದ್ದು ಯುವಕ‌ ಮೃತ್ಯು

Share the Article

ಸುಳ್ಯ : ಬೆಳ್ಳಾರೆ ಸಮೀಪದ ಬಾಳಿಲದಲ್ಲಿ ಕಟ್ಟಡದಿಂದ ಯುವಕನೋರ್ವ ಕೆಳಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಬಾಳಿಲದಲ್ಲಿರುವ ಆಶ್ರಮ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು ಅದರ ಕೆಲಸಕ್ಕೆಂದು ಬಂದಿದ್ದ ಮದ್ಯಪ್ರದೇಶದ ಮಹೇಶ್ ಸಿಂಗ್ (20)ಎಂಬವರು ಹೊಸ ಕಟ್ಟಡದ ಹತ್ತಿರವಿರುವ ಹಳೆಯ ಕಟ್ಟಡದಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply