ಕುಮಾರಸ್ವಾಮಿ ಆರೆಸ್ಸೆಸ್ ಟೀಕಿಸಿದ್ದಕ್ಕೆ ಪಾತಾಳ ತಲುಪಿದ ಜೆಡಿಎಸ್ ?!

2023 ರ ಚುನಾವಣೆ ನಾನು ಆಕ್ಟೀವ್ ಆಗಿ ಕೆಲಸ ಮಾಡ್ತೀನಿ. 2023 ರ ಚುನಾವಣೆಗೆ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಅದನ್ನ ಹಂತ ಹಂತವಾಗಿ ಅನುಷ್ಠಾನ ಮಾಡ್ತೀವಿ. ನವೆಂಬರ್ 8 ರಿಂದ ಪಕ್ಷ ಸಂಘಟನೆಯ ಸಭೆಗಳನ್ನ ಪ್ರಾರಂಭ ಮಾಡ್ತೀವಿ. ನಾವು ಯಾವುದೇ ಕಾರಣಕ್ಕೂ ಕುಳಿತುಕೊಳ್ಳೋದಿಲ್ಲ. ಉಪ ಚುನಾವಣೆ ಬಗ್ಗೆ ನಾನು ಮಾತಾಡೊಲ್ಲ. ಫಲಿತಾಂಶ ನಾನು ಸ್ವೀಕಾರ ಮಾಡ್ತೀನಿ. ಅದರ ವಿಶ್ಲೇಷಣೆ ನಾನು ಮಾಡಲ್ಲ. ಜನತೆ ತೀರ್ಪು ಒಪ್ಪುತ್ತೇವೆ‌ ಆದ್ರೂ ಪಕ್ಷ ಉಳಿಸಲು ನಾವು ಕೆಲಸ ಮುಂದುವರಿಸುತ್ತೇವೆ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇ ಗೌಡ ಹೇಳಿದರು.

ಅವರು ಜೆಡಿಎಸ್ ಕಛೇರಿಯಲ್ಲಿ ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿ ಮಾಧ್ಯಮದ ಜತೆ ಮಾತನಾಡಿದರು.

ಸಿಂದಗಿಯಲ್ಲಿ 38 ಸಾವಿರ ಮುಸ್ಲಿಂ ಮತ ಇದೆ. ಅಲ್ಲಿ ಅ ಮತಗಳು ಯಾರಿಗೆ ಹೋಯ್ತು. ಅ ಮತಗಳು ಬಿಜೆಪಿಗೆ ಹೋಯ್ತಾ? ಕಾಂಗ್ರೆಸ್ ಅವರು ಜೆಡಿಎಸ್ ಗೆ ಮತ ಹಾಕಬೇಡಿ ಅದು ಬಿಜೆಪಿ ಗೆ ಹೋಗುತ್ತೆ ಅಂದ್ರು ನಮ್ಮ ಅಭ್ಯರ್ಥಿಗೆ 4 ಸಾವಿರ ವೋಟ್ ಬಂತು. ಉಳಿದ ಮತ ಯಾರಿಗೆ ಹೋಯ್ತು ಅಂತ ಜನರೇ ತೀರ್ಮಾನ ಮಾಡಲಿ.

ಕಾಂಗ್ರೆಸ್ ಅಭ್ಯರ್ಥಿ 32 ಸಾವಿರ ಮತದಿಂದ ಸೋತ್ರು. ಹಾಗಾದ್ರೆ ಮುಸ್ಲಿಂ ಮತ ಯಾರಿಗೆ ಹೋಯ್ತು. ಬಸವ ಕಲ್ಯಾಣದಿಂದಲೂ ನಮ್ಮ ಮೇಲೆ ಕಾಂಗ್ರೆಸ್ ಆರೋಪ ಮಾಡ್ತಿದೆ. ನಾನು ಯಾವುದೇ ಉಪ ಚುನಾವಣೆಗೆ ಪ್ರಚಾರಕ್ಕೆ ಹೋಗಿಲ್ಲ. ಆದ್ರೆ ಸಿಂದಗಿಯಲ್ಲಿ ನಾನು ಕೆಲಸ ಮಾಡಿದೆ. ಅದಕ್ಕೆ ಹೋಗಿದ್ದೆ. ಇದನ್ನ ಕಾಂಗ್ರೆಸ್, ಬಿಜೆಪಿ ಅಲ್ಲಗೆಳೆಯಲು ಸಾಧ್ಯವಿಲ್ಲ. ನಾನು ಹೋದ ಕಡೆ ಜನ ನೀರಾವರಿ ಕೊಟ್ಟಿದ್ದೀರಾ ಅಂದ್ರು. ಆದ್ರೆ ಜನ 4 ಸಾವಿರ ಮತ ಕೊಟ್ರು. ಇದನ್ನ ನಾನು ಒಪ್ಪಿಕೊಳ್ತೀನಿ ಎಂದರು.

ಟೀಕಿಸಿದ್ದಕ್ಕೆ ಸೋಲಾಯ್ತಾ?

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚುನಾವಣೆ ವೇಳೆ RSS ಬಗ್ಗೆ ಟೀಕಿಸಿದ್ದಕ್ಕೆ ಸೋಲಾಯ್ತಾ ಎಂದು ಪ್ರಶ್ನೆ ಕೇಳಲಾಗಿತ್ತು. ಪ್ರಶ್ನೆ ಕೇಳುತ್ತಲೇ ಗರಂ ಆದ ದೇವೇಗೌಡರು. ಅದೆಲ್ಲ ಮುಗಿದ ಅಧ್ಯಾಯ. ಈಗ ಅದನ್ನ ಯಾಕೆ ನೆನಪು ಮಾಡ್ತೀರಾ? ಹಾಗೆ ಮಾತಾಡಿದ್ದಕ್ಕೆ ಸೋಲಾಯ್ತು, ಇದನ್ನ ಮಾಡಿದ್ದಕ್ಕೆ ಸೋಲಾಯ್ತು ಅನ್ನೋ ಚರ್ಚೆ ಬೇಡ. ಇವತ್ತು ಹಬ್ಬದ ದಿನ ಈಗ ಅದೆಲ್ಲ ಚರ್ಚೆ ಬೇಡ. ನಾನು ಹೇಳಬೇಕಾದ್ದನ್ನ ಹೇಳಿದ್ದೇನೆ ಎಂದು ಸಿಟ್ಟಾದರು.

ಟಿಕೆಟ್ ಘೋಷಣೆಯಲ್ಲಿ ಎಲ್ಲ ಭಾಗಕ್ಕೂ ಆದ್ಯತೆ

ಕಾಂಂಗ್ರೆಸ್ ನಮ್ಮ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿದ್ದರಿಂದ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಲಾಯ್ತು. 2023 ರ ಚುನಾವಣೆ ನಾನು ಪ್ರವಾಸ ಮಾಡ್ತೀನಿ. ಪ್ರತಿ ತಿಂಗಳು 2-3 ಜಿಲ್ಲೆ ಪ್ರವಾಸ ಮಾಡ್ತೀನಿ. ಅಭ್ಯರ್ಥಿ ಆಯ್ಕೆಗೂ ಒಂದು ಕಮಿಟಿ ಮಾಡಿ ಅ ಕಮಿಟಿಯಲ್ಲಿ ಅಭ್ಯರ್ಥಿ ಘೋಷಣೆ ಮಾಡ್ತೀವಿ. ಟಿಕೆಟ್ ಘೋಷಣೆಯಲ್ಲಿ ಎಲ್ಲಾ ಭಾಗಕ್ಕೂ ಆದ್ಯತೆ ಕೊಡ್ತೀವಿ ಎಂದರು.

Leave A Reply

Your email address will not be published.