ದೀಪಗಳ ಹಬ್ಬಕ್ಕೆ ಎಲ್ ಇಡಿ ಲೈಟ್ ಸೀರೆ ಧರಿಸಿದ ಮಹಿಳೆ !! | ಮಿರಿಮಿರಿ ಮಿಂಚುತ್ತಿರುವ ಆಕೆಯ ದೀಪಾವಳಿ ಉಡುಗೆಯ ವಿಡಿಯೋ ಫುಲ್ ವೈರಲ್
ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ.
ದೀಪಾವಳಿ ಎಂದರೆ ಬೆಳಕಿನ ಹಬ್ಬ, ಹಾಗಾಗಿ ಬಹುತೇಕರು ತಮ್ಮ ಮನೆಯ ಮುಂದೆ, ಮನೆಯ ಒಳಗೆ ಚಿಕ್ಕ ಚಿಕ್ಕ ಅನೇಕ ರೀತಿಯ ವಿನ್ಯಾಸದ ದೀಪಗಳನ್ನು ಹಚ್ಚಿ, ಮಾರುಕಟ್ಟೆಯಿಂದ ತಂದಂತಹ ಎಲ್ಇಡಿ ದೀಪಗಳಿಂದ ಅಲಂಕರಿಸಲಾಗುತ್ತದೆ.ಎಲ್ಲಾ ಮನೆಗಳು, ಪ್ರದೇಶಗಳು ಮತ್ತು ತಾವಿರುವ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಮಣ್ಣಿನಿಂದ ತಯಾರಿಸಿದ ದೀಪಗಳು, ಲ್ಯಾಂಟರ್ನ್‌ಗಳು, ಎಲ್ಇಡಿ ದೀಪಗಳು ಮತ್ತು ಹೆಚ್ಚಿನವುಗಳಿಂದ ಹಬ್ಬಕ್ಕೆ ಮೆರುಗು ತಂದು ಕೊಡುತ್ತದೆ. ಜನರು ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಹೇಗೆ ವಿಭಿನ್ನವಾಗಿ ಆಚರಿಸಬೇಕು ಎಂದು ಕಾತುರದಿಂದ ಕಾಯುತ್ತಿರುತ್ತಾರೆ.
ಇಲ್ಲಿಯೂ ಒಬ್ಬ ಮಹಿಳೆಯು ದೀಪಗಳ ಹಬ್ಬಕ್ಕೆ ಮಹಿಳೆಯು ವಿನೂತನವಾದ ಎಲ್‌ಇಡಿ ಲೈಟ್ ಇರುವಂತಹ ಸೀರೆ ಧರಿಸಿಕೊಂಡು ಆ ವಿಡಿಯೋವನ್ನು ಮಹಿಳೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ತುಂಬಾನೇ ಹರಿದಾಡುತ್ತಿದೆ.
ಈ 1 ನಿಮಿಷ 33 ಸೆಕೆಂಡಿನ ಸಣ್ಣ ಕ್ಲಿಪ್‌ನಲ್ಲಿ, ಮಹಿಳೆಯು ಬಿಳಿ ಬಣ್ಣದ ಸೀರೆಯನ್ನು ಧರಿಸಿ ಅದಕ್ಕೆ ಸರಿಹೊಂದುವ ನೀಲಿ ಬಣ್ಣದ ಕುಪ್ಪಸ ತೊಟ್ಟಿದ್ದು, ಸೀರೆಯುದ್ದಕ್ಕೂ ಎಲ್‌ಇಡಿ ಲೈಟ್ ಸರವನ್ನು ಸಂಪೂರ್ಣವಾಗಿ ಅವರಿಸುವಂತೆ ಅದರಲ್ಲಿ ಜೋಡಿಸಿದ್ದನ್ನು ನಾವು ಕಾಣಬಹುದು. ಆ ಮಹಿಳೆಯು ಕೂದಲನ್ನು ಒಂದು ತುರುಬಿನಲ್ಲಿ ಕಟ್ಟಿಕೊಂಡು ಆ ಸ೦ಜೆಯು ಬಿಳಿ ಸೀರೆಯಲ್ಲಿ ಸೊಗಸಾಗಿ ಕಾಣುತ್ತಿದ್ದರೂ ಸಹ ಪೂರ್ತಿ ಗಮನವನ್ನು ಸೆಳೆದಿದ್ದು ಮಾತ್ರ ಎಲ್‌ಇಡಿ ಲೈಟ್ ಬೆಳಕು ಎಂದು ಹೇಳಬಹುದು. ಮೂಲತಃ ಈ ಕ್ಲಿಪ್ ಅನ್ನು ಮೊದಲು 2020ರಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ ಈಗ ಮತ್ತೆ ಹಬ್ಬ ಸಮೀಪಿಸುತ್ತಿದ್ದಂತೆ, ಅದು ಮತ್ತೆ ಪುನರುಜ್ಜೀವನಗೊಂಡಿದೆ ಎಂದು ಹೇಳಬಹುದು.
ಈ ಎಲ್‌ಇಡಿ ಲೈಟ್ ಸೀರೆ ಹೇಗೆ ಕಾಣುತ್ತಿದೆ ಎಂಬ ಕುತೂಹಲವು ನಿಮ್ಮನ್ನು ಈ ವಿಡಿಯೋ ನೋಡಲು ಪ್ರೇರೇಪಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ಹಿಂದಿಯಲ್ಲಿ ಜನಪ್ರಿಯ ಹಾಡಾದ ‘ಸಾರಾ ಜಮಾನಾ ಹಸೀನೊ ಕಾ ದೀವಾನಾ’ ದಲ್ಲಿ ಎಲ್‌ಇಡಿ ಲೈಟ್‌ಗಳು ಇರುವಂತಹ ಬಟ್ಟೆ ಧರಿಸಿದ್ದ ಬಿಗ್ ಬಿ ಅಮಿತಾಭ್ ಬಚ್ಚನ್ ಅವರನ್ನು ಟ್ವಿಟ್ಟರ್‌ನಲ್ಲಿ ನೆಟ್ಟಿಗರು ನೆನಪಿಸಿಕೊಂಡರು. ವಿಡಿಯೋವನ್ನು ಹಂಚಿಕೊಂಡ ಬಳಕೆದಾರರೊಬ್ಬರು ತಮ್ಮ ದೀಪಾವಳಿ ಸೀರೆ ಹೇಗಿದೆ ಎಂದು ಜನರನ್ನು ಕೇಳಿದರು? ಯಾವುದೇ ಸೀರೆಯು ಈ ಎಲ್‌ಇಡಿ ಲೈಟ್ ಸೀರೆಗೆ ಸರಿಹೊಂದುವುದಿಲ್ಲ ಎಂದು ಅವರು ಉಲ್ಲೇಖಿಸಿದರು.
“ಅವರು ಸೀರೆಯನ್ನು ತುಂಬಾನೇ ಸುಂದರವಾಗಿ ಧರಿಸಿದ್ದಾರೆ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದು, ಅವರು ಈ ವಿಡಿಯೋ ನೋಡಿ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಇನ್ನೊಬ್ಬ ಬಳಕೆದಾರರು ಮಹಿಳೆಯರು ಬ್ಯಾಕಪ್‌ಗಾಗಿ ಪವರ್ ಬ್ಯಾಂಕ್ ಹೊಂದಿದ್ದಾರೆಯೇ? ಎಂದು ಕೇಳಿದರು, ಅದಕ್ಕೆ “ಬ್ಯಾಟರಿ ಅವರ ಆತ್ಮವಿಶ್ವಾಸವಾಗಿದೆ” ಎಂದು ಇನೊಬ್ಬರು ಉತ್ತರಿಸಿದರು.