ಕಾರ್ಕಳ | ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿ ಕೇಳಿ ವ್ಯಕ್ತಿ ನಾಪತ್ತೆ, ದೂರು ದಾಖಲು

Share the Article

ವ್ಯಕ್ತಿಯೋರ್ವರು ಪುನೀತ್ ರಾಜ್‌ಕುಮಾರ್ ಅವರ ಸಾವಿನ ಸುದ್ದಿ ಕೇಳಿ ಮನೆ ಬಿಟ್ಟು ಹೋಗಿರುವ ಘಟನೆ ಕಾರ್ಕಳದಲ್ಲಿ ಅ.29 ರಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಗೊಮ್ಮಟಬೆಟ್ಟದ ಬಳಿಯ ದಾನಶಾಲೆಯ ನಿವಾಸಿ ದಿನೇಶ್ (56) ಎಂಬವರು ನಾಪತ್ತೆಯಾಗಿರುವುದು ಎಂದು ತಿಳಿದುಬಂದಿದೆ.

ದಿನೇಶ್ ಅವರ ಪತ್ನಿ ಸುಮಾ ಅವರು, ತಮ್ಮ ಪತಿ ಸ್ಥಳೀಯ ಲಾಡ್ಜ್ ಒಂದರಲ್ಲಿ ಸೂಪರ್ ವೈಸರ್ ಆಗಿದ್ದು, 29ರಂದು ಮಧ್ಯಾಹ್ನ ಮನೆಗೆ ಬಂದು 1.30 ಗಂಟೆಗೆ ಟಿವಿ ನೋಡುತ್ತಿದ್ದರು. ಆಗ ಪುನಿತ್ ರಾಜ್‌ಕುಮಾರ್ ಮೃತಪಟ್ಟ ಸುದ್ದಿ ಪ್ರಸಾರವಾಗುತ್ತಿದ್ದು, ಅದನ್ನು ನೋಡಿ ಎದ್ದು ಹೊರಗೆ ಹೋಗಿದ್ದರು. ಅವರು ಕೆಲಸಕ್ಕೆ ಹೋಗಿರಬಹುದೆಂದು ನಾವು ಭಾವಿಸಿದೆವು. ಆದರೆ ಅವರು ಈವರೆಗೆ ವಾಪಾಸು ಬಂದಿಲ್ಲ ಎಂದು ದೂರು ನೀಡಿದ್ದಾರೆ.

ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply