ಮಧ್ಯರಾತ್ರಿಯಲ್ಲಿ ನಡೆದ ಕಾರ್ ಆಕ್ಸಿಡೆಂಟ್ ಮಿಸ್ ಕೇರಳ ಮುಡಿಗೇರಿಸಿಕೊಂಡಿದ್ದ ಸುಂದರಿಯರ ದುರಂತ ಸಾವು
ಕಾರು ಅಪಘಾತದಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ಮೃತಪಟ್ಟಿದ್ದಾರೆ. ನಿನ್ನೆ ಮಧ್ಯರಾತ್ರಿ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್ನಲ್ಲಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ
ಸಾವು ಅನ್ನೋದೆ ಹಾಗೆ ಯಾವಾಗ, ಯಾರಿಗೆ ಸಾವು ಬರುತ್ತೆ ಎಂಬುದೇ ಗೊತ್ತಾಗುವುದಿಲ್ಲ. ಜನನವನ್ನು ಬೇಕಾದರೆ ನಾವು ನಿರ್ಧರಿಸಬಹುದು ಆದರೆ ಮರಣವನ್ನು ಯಮನೆ ನಿರ್ಧರಿಸುತ್ತಾನೆ. ಯಮ ಯಾವ ರೂಪದಲ್ಲಿ ಬಂದು ಕರೆದುಕೊಂಡು ಹೋಗುತ್ತಾನೆ ತಿಳಿಯುವುದಿಲ್ಲ. ಭೂಮಿಯ ಋಣ ಮುಗಿದ ಕೂಡಲೇ ದೇವರು ಮೇಲೆ ಕರೆಸಿ ಕೊಳ್ಳುತ್ತಾನೆ.ಇದಕ್ಕೆ ಉದಾಹರಣೆ ಯಂತೆ ಮೊನ್ನೆಯಷ್ಟೆ ಮರಣ ಹೊಂದಿದ ಫಿಸಿಕಲಿ ಫಿಟ್ ಆಗಿದ್ದ ಪುನೀತ್ ರಾಜ್ ಕುಮಾರ್.
ಇತ್ತೀಚಿಗೆ ಅಪಘಾತ ಗಳು ಬಹಳಷ್ಟು ನಡೆಯುದ್ದಿದ್ದು ,ಅಪಘಾತದಲ್ಲಿ ಮರಣ ಹೊಂದುವವರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ.ನಿನ್ನೆ ಮಧ್ಯರಾತ್ರಿ ನಡೆದ ಭೀಕರ ಕಾರ್ ಅಪಘಾತದಲ್ಲಿ 2019ರ ಮಿಸ್ ಕೇರಳ ವಿಜೇತೆ ಹಾಗೂ ರನ್ನರ್ ಅಪ್ ಇಬ್ಬರೂ ಒಟ್ಟಿಗೆ ಮೃತಪಟ್ಟಿದ್ದಾರೆ. ನಿನ್ನೆ ಮಧ್ಯರಾತ್ರಿ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್ನಲ್ಲಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ತಪ್ಪಿದ ಕಾರು ಚಕ್ಕರಪರಂಬುವಿನಲ್ಲಿ ಹಾಲಿಡೇ ಇನ್ ಬಳಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಆನ್ಸಿ ಮತ್ತು ಅಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರನ್ನ ಪಾಲಾರಿವಟ್ಟಂನ ಇಎಂಸಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಆದರೆ ಅವರ ಸ್ಥಿತಿಯೂ ಚಿಂತಾಜನಕವಾಗಿದೆ.
ಮಾಡೆಲಿಂಗ್ ಫೋಟೋ ಸೆಷನ್ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು. ಪೋಟೋಶೂಟ್ ಎಲ್ಲವನ್ನು ಮುಗಿಸಿ ಮತ್ತೆ ತ್ರಿಶೂರ್ಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಚಕ್ಕರಪರಂಬು ಜಂಕ್ಷನಲ್ಲಿ ಈ ಹಿಂದೆಯೂ ಹೆಚ್ಚು ಅಪಘಾತಗಳು ನಡೆದಿವೆ. ಹೀಗಾಗಿ ಅಪಘಾತ ವಲಯ ಎಂದೇ ಗುರುತಿಸಲಾಗಿದೆ.
ತಡರಾತ್ರಿ ಬೈಕ್ ಅಡ್ಡ ಬಂದ ಕಾರಣ, ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಬೈಕ್ ಸವಾರ ಮಾತ್ರ ಸಣ್ಣ ಪುಟ್ಟ ಗಾಯಗೊಂದಿಗೆ ಪಾವಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಮಿಸ್ ಕೇರಳ ಅನ್ಸಿ ಕಬೀರ್ ವಾಹನ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿಅವರ ತಾಯಿ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ತಿರುವನಂತಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನ್ಸಿ ತಂದೆ ಕಬೀರ್ ವಿದೇಶದಲ್ಲಿದ್ದಾರೆ . ಆಟಿಂಗಲ್ ಆಲಂಕೋಟ್, ಪಾಲಕೋಣಂ ಅನ್ಸಿ ಕೊಟ್ಟೇಜಿನಲ್ಲಿ ಆನ್ಸಿಯ ಅಮ್ಮ ವಾಸಿಸುತ್ತಿದ್ದಾರೆ.ಮಗಳ ಸಾವಿನಿಂದ ತಾಯಿಗೆ ಆಘಾತವಾಗಿದೆ.
ಆನ್ಸಿ ಕಬೀರ್ ಹಾಗೂ ಅಂಜನಾ ಶಾಜನ್ ಇವರಿಬ್ಬರು ಒಳ್ಳೆಯ ಸ್ನೇಹಿತರು ಆಗಿದ್ದರು. ಯಾವುದೇ ಫೋಟೋ ಶೂಟ್ಗೆ ಹೋದರು ಒಟ್ಟಿಗೆಯಾಗಿ ಹೋಗುತ್ತಿದ್ದರಂತೆ. ಈಗ ಸಾವಿನಲ್ಲೂ ಈ ಮಾಡೆಲ್ಗಳಿಬ್ಬರು ಜೊತೆಯಾಗಿ ಇಹಲೋಕ ತ್ಯಜಿಸಿದ್ದಾರೆ.