ಹಳೆಯ ನೋಟು ಮತ್ತು ನಾಣ್ಯ ಮಾರಾಟದ ಮೋಸದ ಜಾಲೆಗೆ ಬೀಳದಂತೆ ಎಚ್ಚರ ನೀಡಿದ ‘ಆರ್ ಬಿಐ’
ನವದೆಹಲಿ:ಇತ್ತೀಚೆಗೆ ಹಳೆಯ ನಾಣ್ಯ ಮತ್ತು ನೋಟುಗಳ ಖರೀದಿ ಮತ್ತು ಮಾರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದ್ದು, ಅನೇಕ ವೆಬ್ಸೈಟ್ಗಳಲ್ಲಿ ಈ ನೋಟುಗಳು ಮತ್ತು ನಾಣ್ಯಗಳಿಗೆ ಉತ್ತಮ ಬೆಲೆಯೂ ದೊರಕುತ್ತಿದೆ.ಇದೀಗ ಈ ಕುರಿತು ಆರ್ಬಿಐ ಮಹತ್ವದ ಮಾಹಿತಿಯೊಂದನ್ನು ಹೊರ ಹಾಕಿದೆ.
ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದ್ದು, ‘ಕೆಲವು ವಂಚಕರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಮತ್ತು ಲೋಗೋವನ್ನ ತಪ್ಪು ರೀತಿಯಲ್ಲಿ ಮತ್ತು ವಿವಿಧ ಆನ್ಲೈನ್ ಮೂಲಕ ಬಳಸುತ್ತಿರುವುದು ಭಾರತೀಯ ರಿಸರ್ವ್ ಬ್ಯಾಂಕ್ನ ಗಮನಕ್ಕೆ ಬಂದಿದೆ. ಇನ್ನು ಹಳೆಯ ಬ್ಯಾಂಕ್ನೋಟುಗಳು ಮತ್ತು ನಾಣ್ಯಗಳನ್ನ ಮಾರಾಟ ಮಾಡಲು ಜನರ ಬಲಿ ಆರ್ಬಿಐ ಹೆಸ್ರಲ್ಲಿ ಶುಲ್ಕ ಅಥವಾ ತೆರಿಗೆಗಳನ್ನ ಕೇಳಲಾಗ್ತಿದೆ.ಈ ಮೋಸಕ್ಕೆ ಬಲಿಯಾಗ್ಬೇಡಿ’ ಎಂದು ಎಚ್ಚರಿಕೆ ನೀಡಿದೆ.
ಇನ್ನು ಮುಂದುವರೆದ ರಿಸರ್ವ್ ಬ್ಯಾಂಕ್, ‘ನಾವು ಅಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಮತ್ತು ಅಂತಹ ವ್ಯವಹಾರಗಳಿಗೆ ಯಾರಿಂದಲೂ ಯಾವುದೇ ಶುಲ್ಕ ಅಥವಾ ಕಮಿಷನ್ ಕೇಳುವುದಿಲ್ಲ. ಇನ್ನು ಅಂತಹ ಚಟುವಟಿಕೆಗಳನ್ನ ನಡೆಸಲು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಯಾವುದೇ ರೀತಿಯ ಅಧಿಕಾರ ನೀಡಿಲ್ಲ ‘ ಎಂದು ಬ್ಯಾಂಕ್ ಹೇಳಿದೆ.
ಅಲ್ಲದೆ ‘ಯಾವುದೇ ಸಂಸ್ಥೆ, ಕಂಪನಿ ಅಥವಾ ವ್ಯಕ್ತಿ ಇತ್ಯಾದಿಗಳಿಗೆ ಅಂತಹ ವಹಿವಾಟುಗಳ ಮೇಲೆ ರಿಸರ್ವ್ ಬ್ಯಾಂಕ್ ಪರವಾಗಿ ಮತ್ತು ಯಾವುದೇ ಶುಲ್ಕ ಅಥವಾ ಆಯೋಗವನ್ನ ವಿಧಿಸಲು ಅಧಿಕಾರ ನೀಡಿಲ್ಲ. ಇಂತಹ ನಕಲಿ ಮತ್ತು ಮೋಸದ ಕೊಡುಗೆಗಳ ಬಲೆಗೆ ಬೀಳಬೇಡಿ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸಾಮಾನ್ಯ ಜನರಿಗೆ ಸಲಹೆ ನೀಡಿದೆ.