ಸವಣೂರು ; ಯುವಕ ಮಂಡಲಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ, ಅ.31 ಪದಗ್ರಹಣ
ಅಧ್ಯಕ್ಷರಾಗಿ ಪ್ರಕಾಶ್ ಮಾಲೆತ್ತಾರು,ಕಾರ್ಯದರ್ಶಿಯಾಗಿ ಜಿತಾಕ್ಷ ಜಿ.
ಸವಣೂರು ; ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಮಹಾಸಭೆಯು ಅಧ್ಯಕ್ಷ ರಕ್ಷಿತ್ ಕುದ್ಮರು ಅವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲದ ಯುವ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಪ್ರಕಾಶ್ ಮಾಲೆತ್ತಾರು,ಉಪಾಧ್ಯಕ್ಷರಾಗಿ ಕೀರ್ತನ್ ಕೋಡಿಬೈಲು,ಧನುಶ್,ಕೋಶಧಿಕಾರಿಯಾಗಿ ಚೇತನ್ ಕುಮಾರ್ ಕೋಡಿಬೈಲು,ಜತೆ ಕಾರ್ಯದರ್ಶಿಯಾಗಿ ದೀಕ್ಷಿತ್ ,ಸಂತೋಷ್,ಕ್ರೀಡಾ ಕಾರ್ಯದರ್ಶಿಯಾಗಿ ತೇಜಸ್,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆದರ್ಶ ,ಸೇವಾ ಕಾರ್ಯದರ್ಶಿಯಾಗಿ ನಿಶ್ಚಲ್ ಆಯ್ಕೆಯಾದರು.
ಅ.31 : ನೂತನ ಪದಾಧಿಕಾರಿಗಳ ಪದಗ್ರಹಣ
2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅ.31ರಂದು ಸಂಜೆ ಗಂಟೆ 6ಕ್ಕೆ ಸುರೇಶ್ ರೈ ಸೂಡಿಮುಳ್ಳುರವರ ನಿವಾಸ ಸಂತಸದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ. ಶೆಟ್ಟಿ ವಹಿಸುವರು.
ಅರೆಭಾಷೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಚೆಗದ್ದೆ ಉದ್ಘಾಟಿಸುವರು.
ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್ ರೈ ಸಾಧಕರನ್ನು ಸಮ್ಮಾನಿಸುವರು.
ಅತಿಥಿಯಾಗಿ ಪುತ್ತೂರು ಎ.ಪಿ.ಎಂ.ಸಿ.ಅಧ್ಯಕ್ಷ ಶ್ರೀ ದಿನೇಶ್ ಮೆದು ಪಾಲ್ಗೊಳ್ಳುವರು.
ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸುವರು.
ನೂತನ ಸದಸ್ಯರಿಗೆ ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ಪ್ರಮಾಣವಚನ ಬೋಧಿಸುವರು.
2021ನೇ ಸಾಲಿನ ರಾಜ್ಯಮಟ್ಟದ ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸವಣೂರು ಪ.ಪೂ.ಕಾಲೇಜಿನ ಉಪನ್ಯಾಸಕರ ಬಿ.ವಿ. ಸೂರ್ಯನಾರಾಯಣ, ಸವಣೂರು ಪ್ರಾ. ಕೃ. ಪ. ಸ. ಸಂಘದ ನಿವೃತ್ತ ಉಪಕಾರ್ಯನಿರ್ವಹಣಾಧಿಕಾರಿ ಕುಸುಮ ಪಿ. ಶೆಟ್ಟಿ ಕೆರೆಕ್ಕೋಡಿ,ಸವಣೂರು ಅಂಗನವಾಡಿಯ ನಿವೃತ್ತ ಕಾರ್ಯಕರ್ತೆ ಮಮತಾ ಭಟ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕೆ. ವಾಗೀಶ್ವರಿ, ಯಕ್ಷಗಾನ ಕಲಾವಿದ ವಿನೋದ್ ರೈ ಸೊರಕೆ, ಸವಣೂರು ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ ಸುಲಾಯ, ಡಾಕ್ಟರೇಟ್ ಪದವೀಧರರಾದ ಡಾ| ಚಾಂದಿನಿ ಪ್ರಮೋದ್,ಪ್ರತಿಭಾನ್ವಿತ ವಿದ್ಯಾರ್ಥಿ ಸಂಪ್ರೀತ್ ಬಿ. ಶೆಟ್ಟಿ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.