ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಸ್ಟೇರಿಂಗ್ ಕಟ್ | ಚರಂಡಿಗೆ ನುಗ್ಗಿದ ಬಸ್, ತಪ್ಪಿದ ಭಾರೀ ಅನಾಹುತ

Share the Article

ಕೆಎಸ್‌ಆರ್‌ಟಿಸಿ ಬಸ್‌ನ ಸ್ಟೇರಿಂಗ್ ಹಠಾತ್ತನೆ ತುಂಡಾಗಿ, ಬಸ್ ರಸ್ತೆ ಬದಿಯ ಚರಂಡಿಗೆ ನುಗ್ಗಿದ ಘಟನೆ ಶಿವಮೊಗ್ಗದ ಹೊಳಲೂರಿನಲ್ಲಿ ನಡೆದಿದೆ.

ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್, ಹೊಳಲೂರಿನಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ತೆರಳುವಾಗ ಸ್ಟೇರಿಂಗ್ ತುಂಡಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ನೇರವಾಗಿ ಚರಂಡಿಗೆ ನುಗ್ಗಿದೆ.

ಪಕ್ಕದಲ್ಲೇ ವಿದ್ಯುತ್ ಕಂಬವಿದ್ದು ಅಪಾಯ ಸ್ವಲ್ಪದರಲ್ಲೇ ತಪ್ಪಿದೆ. ಪ್ರಯಾಣಿಕರು ಸುರಕ್ಷಿತವಾಗಿ ಬೇರೊಂದು ಬಸ್ ಮೂಲಕ ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಗಿದೆ.

Leave A Reply