ಕಂಬಳಿ ಹಾಕಲು ಕುರುಬ ಜಾತಿಯವರೇ ಆಗಬೇಕಾದರೆ, ಈ ಟೋಪಿ ಹಾಕಲು ನೀವು ಯಾರಿಗೆ ಹುಟ್ಟಿರಬೇಕು ಸಿದ್ರಾಮೂ…?!

Share the Article

ಬೆಂಗಳೂರು:  ಹಾನಗಲ್ – ಸಿಂದಗಿ ಉಪಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಆರ್ಭಟ ಮುಗಿಲುಮುಟ್ಟಿದೆ, ಇದೇ ವೇಳೆ, ಪ್ರತ್ಯಾರೋಪಗಳ ಜೊತೆಗೆ ಜಾತಿಯನ್ನು ಎಳೆದು ತಂದು ಮಾಡುವ ನಿಂದನೆಯು ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ಇಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹರಿಹಾಯ್ದಿದ್ದಾರೆ. ಮೊನ್ನೆ ಶಾದಿ ಭಾಗ್ಯ ಮತ್ತು ಕ್ವಾರ್ಟರ್ ಮದ್ಯದ ವಿಷಯದಲ್ಲಿ ಸಿದ್ದರಾಮಯ್ಯನವರ ಕಾಲೆಳೆದ ಸಿ ಟಿ ರವಿಯವರು ನಿನ್ನೆ ಸಿದ್ದುವನ್ನು ಕಂಬಳಿ ಎಳೆದು ಬೀಳಿಸಿದ್ದರು.

ಈ ಹಿಂದೆ ಕಂಬಳಿ ಹಾಕುವ ಸಂಬಂಧ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಸಿಟಿ ರವಿ ಅವರು ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ನೀವು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂದು ತಾರ್ಕಿಕವಾಗಿ ಪ್ರಶ್ನಿಸಿದ್ದಾರೆ.
‘ ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?’- CT Ravi

https://t.co/2VAD7qL5xJ
Leave A Reply